Bengaluru Airport:ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅಲ್ಲಿನ ವ್ಯವಸ್ಥೆ ಬಗ್ಗೆ ಬರೆದ ರಮ್ಯಾ!

ವಿಮಾನ ನಿಲ್ದಾಣದ ಬಗ್ಗೆ ಜನರಿಗೆ ಇರುವ ಆತಂಕ ದೂರ ಮಾಡಿದ ರಮ್ಯಾ. ಬೆಂಗಳೂರಿನಲ್ಲಿ ಏನ್ ಮಾಡ್ತಿದ್ದಾರೆ? 

Kannada actress Ramya appreciates Bengaluru Airport covid facilities vcs

ಕನ್ನಡ ಚಿತ್ರರಂಗದ (Sandalwood) ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹೊಸ ಕಲಾವಿದರ ತಂಡ, ಹೊಸ ಸಿನಿಮಾ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಮ್ಯಾ (Ramya) ಆಗಾಗ ರಾಜಕೀಯ (Politics) ಮತ್ತು ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಹ್ಯಾಪನಿಂಗ್ ವಿಚಾರಗಳ ಬಗ್ಗೆ ಬರೆದುಕೊಳ್ಳುತ್ತಾರೆ. ಇದೀಗ ಬೆಂಗಳೂರು ವಿಮಾನ ನಿಲ್ದಾಣದ (Bengaluru Aiport) ಬಗ್ಗೆ ಬರೆದುಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. 

ಕಳೆದ ಒಂದೆರಡು ವರ್ಷಗಳಿಂದ ವಿಮಾನ ನಿಲ್ದಾಣ ಅಂದ್ರೆ ಜನರಲ್ಲಿ ಒಂದು ರೀತಿ ಆತಂಕ. ಕೊರೋನಾ ವೈರಸ್ (Covid19) ಭಾರತಕ್ಕೆ ಬಂದಾಗಿನಿಂದಲೂ ಕೋವಿಡ್‌ ಟೆಸ್ಟ್‌, ವ್ಯಾಕ್ಸಿನ್ (Vaccine) ಎಲ್ಲವೂ ಕಡ್ಡಾಯ ಮಾಡಿದ್ದಾರೆ. ರಾಜ್ಯದಿಂದ ಮಾತ್ರವಲ್ಲ ನಾನಾ ದೇಶಗಳಿಂದ ಬರುವ ಜನರು ಮೊದಲು ವಿಮಾನ ನಿಲ್ದಾಣದಲ್ಲಿ ರ್ಯಾಪಿಡ್ ಟೆಸ್ಟ್ (Rapid Test) ಮಾಡಿಸಿಕೊಂಡು ಆನಂತರ ನಿಲ್ದಾಣದಿಂದ ಹೊರಗೆ ಕಾಲಿಡಬಹುದು, ಸಣ್ಣ ಲಕ್ಷಣ ಕಾಣಿಸಿಕೊಂಡರೂ ಕ್ವಾರಂಟೈನ್‌ಗೆ (Quarantine) ಒಳಗಾಬೇಕು. ಅದರಲ್ಲೂ ಬೆಂಗಳೂರು ವಿಮಾನ ನಿಲ್ದಾಣ ಕೂಡಾ ಕಢಿಣ ನಿಯಮ ಫಾಲೋ ಮಾಡುತ್ತಿದೆ. 

Happy Birthday Ramya: 40ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಕ್ವೀನ್

ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಇಲ್ಲಿನ ವ್ಯವಸ್ಥೆ ಬಗ್ಗೆ ಬರೆದುಕೊಂಡಿದ್ದಾರೆ. ' ಬೆಂಗಳೂರು ವಿಮಾನ ನಿಲ್ದಾಣದವರು ನನ್ನ ಅಭಿಪ್ರಾಯ ತಿಳಿಸುವುದಕ್ಕೆ ಕೇಳಿದ್ದರು, ಇಲ್ಲಿದೆ...ಏರ್‌ಪೋರ್ಟ್‌ನಲ್ಲಿ ನಡೆದ ಕೋವಿಡ್‌ ಟೆಸ್ಟ್‌ ಸುಲಭವಾಗಿತ್ತು. ಯಾವುದೇ ಗೊಂದಲ ಇರಲಿಲ್ಲ. ವೈದ್ಯರು, ನರ್ಸ್‌ಗಳು, ಅಧಿಕಾರಿಗಳು ಮತ್ತು ಅಲ್ಲಿನ ಉದ್ಯೋಗಿಗಳು ಕೋವಿಡ್‌ ಟೆಸ್ಟ್‌ಗಾಗಿ ಉತ್ತಮ ವ್ಯವಸ್ಥೆ ರೂಢಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಕೆಲಸವೂ ಪ್ರಶಂಸೆಗೆ ಕಾರಣ ಆಗಿದೆ. ಧನ್ಯವಾದಗಳು' ಎಂದು ಬರೆದಿದ್ದಾರೆ. 

Kannada actress Ramya appreciates Bengaluru Airport covid facilities vcs

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಬೆಂಗಳೂರಿಗೆ ಅಕ್ಟೋಬರ್ 30ರಂದು ಆಗಮಿಸಿದ್ದರು. ಆನಂತರ ಎಲ್ಲಿದ್ದರು ಎಂಬುವುದರ ಬಗ್ಗೆ ಮಾಹಿತಿ ಇರಲಿಲ್ಲ ಆದರೆ ಅವರ ನವೆಂಬರ್ 29ರ ಅವರ ಹುಟ್ಟುಹಬ್ಬವನ್ನು (Birthday) ವಿದೇಶದಲ್ಲಿ ಆಚರಿಸಿಕೊಂಡಿದ್ದಾರೆ. ಸ್ವತಃ ರಮ್ಯಾ ಅವರೇ ಸ್ಥಳಗಳ ಫೋಟೋ ಹಂಚಿಕೊಂಡಿದ್ದರು. ಅದಾದ ನಂತರ ಡಿಸೆಂಬರ್ 3ರಂದು ಬೆಂಗಳೂರಿಗೆ ಆಗಮಿಸಿ ಇಲ್ಲಿನ ವ್ಯವಸ್ಥೆ ಬಗ್ಗೆ ಬರೆದುಕೊಂಡಿದ್ದಾರೆ. ಹೆಚ್ಚಾಗಿ ವಿಮಾನ ಬಳಸುವ ಕಾರಣ ನೀವು ಅಭಿಪ್ರಾಯ ಹಂಚಿಕೊಂಡು ನಮಗೆ ಸಹಾಯ ಮಾಡಿದ್ದೀರಿ ಮೇಡಂ ಎಂದು ನೆಟ್ಟಿಗರು ಕಾಮೆಂಟ್ (Comment) ಮಾಡಿದ್ದಾರೆ. ಬಹುತೇಕರಿಗೆ ರಮ್ಯಾ ಎಲ್ಲಿ ವಾಸವಿದ್ದಾರೆ ಯಾಕೆ ವಿಮಾನದಲ್ಲಿ ಬರುತ್ತಿದ್ದಾರೆ ಎಂಬ ಕುತೂಹಲವೂ ಇದೆ. ಇನ್ನು ಕೆಲವರಿಗೆ ರಮ್ಯಾ ಯಾವ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದಾರೆ? ಇಲ್ಲಿ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡುತ್ತಿದ್ದಾರಾ? ಅಥವಾ ಪೋಷಕರನ್ನು ನೋಡಲು ಬಂದಿದ್ದಾರಾ ಎನ್ನುವ ಪ್ರಶ್ನೆ ಕೂಡ ಇದೆ. 

'ನನ್ನ ಕಂ ಬ್ಯಾಕ್ ಸಿನಿಮಾ ಪುನೀತ್ ಅವರೊಂದಿಗೆ ಆಗಬೇಕಿತ್ತು'

ಸ್ಯಾಂಡಲ್‌ವುಡ್‌ ಕ್ವೀನ್ ಹುಟ್ಟುಹಬ್ಬದ ದಿನ ಹಂಚಿಕೊಂಡ ಪೋಸ್ಟ್ ವೈರಲ್ ಅಗುತ್ತಿದೆ.  'ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ'. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ಕ್ಯಾಪ್ಷನ್‍ ಬರೆದು ಜೊತೆಗೆ ರಮ್ಯಾ ಮಾಸ್ಕ್ ಧರಿಸಿರುವ ಪೋಟೋವೊಂದನ್ನು ಹಂಚಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಯಾರೇ ಬರ್ತ್‌ಡೇ ಆಚರಿಸಿಕೊಂಡರೂ ರಮ್ಯಾ ಅವರಿಗೆ ಹೂ ಅಥವಾ ಉಡುಪುಗಳನ್ನು ಗಿಫ್ಟ್ ಮಾಡುತ್ತಾರೆ. ಯಾರೆಲ್ಲಾ ರಮ್ಯಾಗೆ ಏನು ಕಳುಹಿಸಿದ್ದಾರೆ ಎಂದು ರಮ್ಯಾ ರಿವೀಲ್ ಮಾಡಿಲ್ಲ.

Latest Videos
Follow Us:
Download App:
  • android
  • ios