ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್ ಪ್ರತಿ ಹಬ್ಬವನ್ನು ತಮ್ಮ ಪುಟ್ಟ ಮಕ್ಕಳೊಂದಿಗೆ ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ರಾಜ್ಯಾದ್ಯಂತ ಅದ್ಧೂರಿಯಾಗಿ ನಡೆಯವ ಗೌರಿ-ಗಣೇಶ ಹಬ್ಬಕ್ಕೆ ಸ್ಪೆಷಲ್‌ ಸ್ವೀಟ್ ತಯಾರಿಸಿ ಸಂಭ್ರಮಿಸಿದ್ದಾರೆ.

ಶ್ರೀಕೃಷ್ಣನಾದ ತಾರೆಗಳ ಮಕ್ಕಳು.. ಐರಾ ಸಂಭ್ರಮ

ಪಾಥೋಲಿ ಸ್ವೀಟ್:

ಕೊಂಕಣಿ ಸಂಪ್ರದಾಯದ ಪ್ರಕಾರ ಪ್ರತಿ ಮನೆಯಲ್ಲೂ ಗೌರ ಹಬ್ಬದ ದಿನ ಪಾಥೋಲಿ ಸಹಿ ತಿನಿಸು ತಯಾರಿಸುತ್ತಾರೆ. ಅದನ್ನು ಪಡಿಂಗ್ ಅಥವಾ ಡಂಪ್ಲಿಂಗ್ ಎಂದೂ ಕರೆಯುತ್ತಾರೆ.  ಮಳೆಗಾಲದಲ್ಲಿ ಇದನ್ನು ಮಾಡಿದರೆ ಬೇಸಿಗೆಯಲ್ಲಿ ಹಲಸಿನ ಹಣ್ಣಿನ ಪಾಥೋಲಿ ಮಾಡುತ್ತಾರೆ.

 

'ಪಾಥೋಲಿ, ನನ್ನ ಫೇವರೆಟ್‌ ಸ್ವೀಟ್. ಗೌರಿ ಹಬ್ಬದ ದಿನ ನಮ್ಮ ಸಂಪ್ರದಾಯದಲ್ಲಿ ಹೆಚ್ಚಾಗಿ ಮಾಡುವ ಸ್ವೀಟ್.  ಅರಿಶಿಣದ ಎಳೆಯಲ್ಲಿ ಕೊಬ್ಬರಿ ಹಾಗೂ ಬೆಲ್ಲ ಮಿಕ್ಸ್ ಮಾಡಿ ಆವಿಯಲ್ಲಿ ಬೇಯಿಸಲಾಗುತ್ತದೆ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ

ಇತ್ತೀಚಿಗೆ ಕೃಷ್ಣ ಜನ್ಮಾಷ್ಟಮಿ ದಿನದಂದು ರಾಧಿಕಾ ಪಂಡಿತ್ ತನ್ನ ಇಬ್ಬರು ಮುದ್ದು ಮಕ್ಕಳಿಗೆ ಕೃಷ್ಣ-ರಾಧೆ ವಸ್ತ್ರ ಧಿರಿಸಿ  ಫೋಟೋ ಶೇರ್ ಮಾಡಿದ್ದರು. ಜೂನಿಯರ್ ರಾಖಿ ಬಾಯ್ ಹಾಗೂ ಐರಾಳನ್ನು ನೋಡಿ ಅಭಿಮಾನಿಗಳು ಪ್ರೀತಿಯಿಂದ ಹರಿಸಿದರು.