ಎಂಜಾಯ್ ಮಾಡಿಲ್ಲ ಪಬ್‌ಗೂ ಹೋಗಿಲ್ಲ, ಮದ್ವೆಯಿಂದ ಸ್ವಾತಂತ್ರ ಇರಲಿಲ್ಲ; ಡಿವೋರ್ಸ್ ಹಿಂದಿನ ಕಾರಣ ಬಿಚ್ಚಿಟ್ಟ ಪ್ರೇಮಾ
ಮದುವೆ ಬಗ್ಗೆ ಮೌನವಾಗಿದ್ದ ನಟಿ ಪ್ರೇಮಾ ಮೊದಲ ಸಲ ಮನಬಿಚ್ಚಿ ಮಾತನಾಡಿದ್ದಾರೆ. ತಾಳ್ಮೆಯಿಂದ ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಸುಂದರಿ ಪ್ರೇಮಾ ತೀರ್ಪುಗಾರರ ಸ್ಥಾನ ಸ್ವೀಕರಿಸಿದ್ದಾರೆ. 90ರ ದಶಕದಲ್ಲಿ ಪ್ರೇಮಾ ಪ್ರೇಮಾ ಎನ್ನುವ ಸದ್ದು ಏನಿತ್ತು ಈಗ ಮತ್ತೆ ಶುರುವಾಗಿದೆ. ವಾವ್ ಪ್ರೇಮಾ ಇನ್ ಬ್ಯೂಟಿಫುಲ್ , ಮತ್ತೆ ಸಿನಿಮಾ ಮಾಡಿ ಹೀಗೆ ಅಭಿಮಾನಿಗಳು ಕಾಂಪ್ಲಿಮೆಂಟ್ ಆಂಡ್ ಬೇಡಿಕೆ ಒಂದೆರಡಲ್ಲ. ಈ ನಡುವೆ ಪ್ರೇಮಾ ಪರ್ಸನಲ್ ಲೈಫ್ ಚರ್ಚೆಯಲ್ಲಿದೆ. ನಿಜಕ್ಕೂ ಏನಾಯ್ತು?
'ಆ ಸಮಯದಲ್ಲಿ ನನೆಗ ಸರಿಯಾಗಿ ಅವಕಾಶಗಳು ಸಿಗುತ್ತಿರಲಿಲ್ಲ. ಮನೆಯಲ್ಲಿ ಮದುವೆ ಆಗುವಂತೆ ಒತ್ತಾಯಿಸಿದರು. ನನ್ನ ತಂಗಿ 7 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಹಾಗಾಗಿ ನಿನ್ನ ಮದುವೆ ಆಗದಿದ್ದರೆ ತಂಗಿ ಮದುವೆ ಅಗಲ್ಲ ಎಂದು ಅಪ್ಪ ಅಮ್ಮ ಹೇಳುತ್ತಿದ್ದರು. ಹಾಗಾಗಿ ಬೇಡ ಎನ್ನಲು ಸಾಧ್ಯವಾಗದೇ ಮದುವೆಗೆ ಒಪ್ಪಿಕೊಂಡೆ. ನಮ್ಮದು ಅರೇಂಜ್ಡ್ ಮ್ಯಾರೇಜ್' ಎಂದು ರಾಜೇಶ್ ಯುಟ್ಯೂಬ್ ಸಂದರ್ಶನದಲ್ಲಿ ಪ್ರೇಮಾ ಮಾತನಾಡಿದ್ದಾರೆ.
'ಅವರು ಮನೆಗೆ ಬರುತ್ತಿದ್ದರು. ನಾನೇ ಮದುವೆ ಮಾಡಿಕೊಳ್ಳುತ್ತೀನಿ ಎಂದು ಕೇಳಿದರು. ಆಮೇಲೆ ಎಲ್ಲರೂ ಒಪ್ಪಿದರು. ನಮ್ಮ ಮನೆಯಿಂದ ಅವರ ಮನೆ ಹತ್ತಿರವಿತ್ತು. ಹಾಗಾಗಿ ನಾನು ಅಮ್ಮನ ಮನೆಗೆ ಹೋಗಿ ಬಂದು ಮಾಡಬಹುದು ಅವರನ್ನು ನೋಡಿಕೊಳ್ಳಬಹುದು ಎಂದು ಅನಿಸಿದ ಕಾರಣ ಮದುವೆಗೆ ಒಪ್ಪಿಕೊಂಡೆ. ಎಲ್ಲಾ ಹೆಣ್ಣು ಮಕ್ಕಳಿಗೆ ಇರುವಂತೆ ಮದುವೆ ಜೀವನದ ಬಗ್ಗೆ ನನಗೂ ಸಾಕಷ್ಟು ನಿರೀಕ್ಷೆಗಳಿದ್ದವು. ನಾನು ಸಿನಿಮಾಗಳಲ್ಲಿ ಬ್ಯುಸಿ ಇದ್ದಿದ್ದರಿಂದ ನನ್ನ ಎಲ್ಲಾ ಕನಸುಗಳನ್ನು ಮುಂದೂಡುತ್ತಾ ಹೋಗುತ್ತಿದ್ದೆ. ಪಬ್‌ಗೆ ಹೋಗದೇ ಮತ್ತೆಲ್ಲೋ ಹೋಗಿ ಎಂಜಾಯ್ ಮಾಡೋದು ಎಲ್ಲಾ ಮದುವೆ ಬಳಿಕ ಎಂದುಕೊಳ್ಳುತ್ತಿದ್ದೆ. ನನ್ನ ಗಂಡ ಹೀಗಿರಬೇಕು ಹಾಗಿರಬೇಕು ಎನ್ನುವ ನಿರೀಕ್ಷೆ ಇರುತ್ತದೆ. ಆ ಎಕ್ಸ್‌ಪೆಕ್ಟೇಷನ್‌ಗೆ ಹರ್ಟ್ ಆಗೋದು' ಎಂದು ಪ್ರೇಮಾ ಹೇಳಿದ್ದಾರೆ.
ಬ್ಯಾಗಲ್ಲಿ ಬಿಸಿ ನೀರು ಮತ್ತು ಎಣ್ಣಿ ಬಾಟಲ್ ಇಟ್ಕೊಂಡೇ ಓಡಾಡೋದು; ನಟ ಬಾಲಯ್ಯ ಕುಡುಕ ಅಂದ್ಬಿಟ್ರಾ ಅಳಿಯ?
' ನನ್ನ ಮದುವ ನಿರ್ಧಾರ ಸರಿ ಇರಲಿಲ್ಲ ಅನಿಸುತ್ತದೆ ಆತುರದಲ್ಲಿ ನಿರ್ಧಾರಕ್ಕೆ ಬಂದೆ ಎನಿಸುತ್ತದೆ. ಮದುವೆ ಅನ್ನೋದು ಒಂದು ಕಮೀಟ್‌ಮೆಂಟ್. ಜವಾಬ್ದಾರಿ. ನನ್ನದೇ ತಪ್ಪು ಅಂತಲ್ಲ. ಇಬ್ಬರದ್ದು ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಯಾಕೋ ನನಗೆ ಮದುವೆ ಬಳಿಕ ಆ ಸ್ವಾತಂತ್ರಿ ಇರಲಿಲ್ಲ ಅನಿಸುತ್ತಿತ್ತು. ನಾನು ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳುವುದು ಅದೇ ಸಮಯ ತೆಗೆದುಕೊಂಡು ಯೋಚಿಸಿ. ಸುಖಾಸುಮ್ಮನೆ ದಿಢೀರ್ ನಿರ್ಧಾರಕ್ಕೆ ಬರಬೇಡಿ. ಮದುವೆ ಅನ್ನೋದು ಒಂದು ಜವಾಬ್ದಾರಿ ಆತುರ ಬೇಡ' ಎಂದಿದ್ದಾರೆ ಪ್ರೇಮಾ.
'ಡಿವೋರ್ಸ್ ನಿರ್ಧಾರ ಅವತ್ತು ಬಹಳ ಕಷ್ಟವಾಗಿತ್ತು. ತಂದೆ ತಾಯಿ ಹೇಳುವುದು ಕಷ್ಟ ಅನಿಸಿತ್ತು ನಂತರ ಎಲ್ಲರೂ ಬೆಂಬಲವಾಗಿ ನಿಂತರು. ಬಳಿಕ ನಾನು ಹೆಜ್ಜೆ ಮುಂದಿಟ್ಟೆ. ಮದುವೆ ಆಗದೆಯೇ ಒಂಟಿಯಾಗಿಯೂ ಜೀವಿಸಬಹುದು. ಯಾಕಂದರೆ ಕೊನೆಗೆ ಹೋಗುವುದು ಒಬ್ಬರೇ ಅಲ್ಲವೆ? ಇನ್ನೊಬ್ಬರ ಮೇಲೆ ಯಾಕೆ ಅವಲಂಬಿತವಾಗಬೇಕು? ಇನ್ನೊಬ್ಬರ ಮೇಲೆ ಯಾಕೆ ನಿರೀಕ್ಷೆ ಇಟ್ಟುಕೊಳ್ಳಬೇಕು' ಎಂದು ಪ್ರಶ್ನಿಸಿದ್ದಾರೆ ಪ್ರೇಮಾ.