Asianet Suvarna News Asianet Suvarna News

ಬ್ಯಾಗಲ್ಲಿ ಬಿಸಿ ನೀರು ಮತ್ತು ಎಣ್ಣಿ ಬಾಟಲ್‌ ಇಟ್ಕೊಂಡೇ ಓಡಾಡೋದು; ನಟ ಬಾಲಯ್ಯ ಕುಡುಕ ಅಂದ್ಬಿಟ್ರಾ ಅಳಿಯ?

ಮಾವ ಕುಡುಕ ಎಂದು ಇಡೀ ಸಮಾಜವೇ ಟೀಕೆ ಮಾಡುತ್ತಿರುವಾಗ ಅಳಿಯನ ಹಳೆ ವಿಡಿಯೋ ಸಖತ್ ವೈರಲ್...... 

Telugu actor Balakrishna Balayya son in law Bharath talks about drinks vcs
Author
First Published Jun 3, 2024, 4:55 PM IST

ತೆಲುಗು ನಟ ಬಾಲಯ್ಯ ಉರ್ಫ್‌ ಬಾಲಕೃಷ್ಣ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ವಿಚಾರಗಳಿಗಿಂತ ಕಿರಿಕಿರಿ ಮಾಡಿಕೊಂಡರು, ಯಾರಿಗೋ ಬೈದರು ಯಾರಿಗೋ ಹೊಡೆದರು, ಮತ್ತೊಬ್ಬರ ನಾಯಕಿಯನ್ನು ದೂಕಿದರು...ಹೀಗೆ ಏನಾದರೂ ಒಂದು ಸದ್ದು ಗದ್ದಲ ಇರುತ್ತದೆ. ಅಷ್ಟಕ್ಕೂ ಯಾಕೆ ಬಾಲಯ್ಯ ಇಷ್ಟೋಂದು ಹೊರಟು ಎಂದು ಪ್ರಶ್ನೆ ಮಾಡಿದಾಗ ನೆಟ್ಟಿಗರು ಕೊಟ್ಟ ಒಂದೇ ಉತ್ತರ..ಎಣ್ಣೆ. ಸದಾ ಕುಡಿಯುತ್ತಾರೆ ಅದಿಕ್ಕೆ ಹೀಗೆ ಆಗುವುದು. ಯಾವ ಕಾರ್ಯಕ್ರಮ ಇದ್ದರೂ ಕೇರ್ ಮಾಡುವುದಿಲ್ಲ ಎನ್ನುತ್ತಾರೆ. ಈ ಗಾಳಿ ಸುದ್ದಿಗಳ ನಡುವೆ ಬಾಲಯ್ಯ ಅಳಿಯ ನೀಡಿದ ಹಳೆ ಸಂದರ್ಶನ ವೈರಲ್ ಆಗುತ್ತಿದೆ. 

'ನಮ್ಮ ಮಾವು ಮ್ಯಾನ್ಷನ್ ಹೌಸ್ ಕುಡಿಯುತ್ತಾರೆ ಎಂದು ತಿಳಿದ ಮೇಲೆ ಆ ಕಂಪನಿಯ ಸ್ಟಾಕ್ಸ್‌ ಮೌಲ್ಯ ಹೆಚ್ಚಾಯಿತ್ತು' ಎಂದು ಅಳಿಯ ಭರತ್ ಹಳೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಲ್ಲದೆ ಅದಕ್ಕೆ ಬಿಸಿ ನೀರು ಸೇವಿಸುತ್ತಾರಂತೆ ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ ಹೌದು ನಿಜ ಎಂದು ಭರತ್ ರಿಯಾಕ್ಟ್ ಮಾಡಿದ್ದಾರೆ. 

ಯೂಟ್ಯೂಬ್ ಹಣದಿಂದ ಮೈಸೂರಿನಲ್ಲಿ ಎರಡು ಅಂತಸ್ತಿನ ಮನೆ ಖರೀದಿಸಿದ ನಿಖಿಲ್- ನಿಶಾ ರವೀಂದ್ರ; ಆದಾಯ ಕೇಳಿ ಶಾಕ್?

'ಮಾವನ ಬಳಿ ಒಂದು ಬ್ಯಾಗ್ ಇರುತ್ತದೆ ಅದರಲ್ಲಿ ಸದಾ ಬಿಸಿ ನೀರು ಮತ್ತು ಮದ್ಯದ ಬಾಟಲ್‌ ಇರುತ್ತದೆ. ಅವರು ಎಲ್ಲಿಗೆ ಹೋದರೂ ಆ ಬ್ಯಾಗ್ ಇರಬೇಕು. ಅಮೆರಿಕಾಗೆ ಹೋದರೂ ತೆಗೆದುಕೊಂಡು ಹೋಗುತ್ತಾರೆ. ತುಂಬಾ ಲಾಯಲ್ಟಿ ನಮ್ಮ ಮಾವು' ಎಂದು ಭರತ್ ಹೇಳಿದ್ದಾರೆ. 

ಮಿಲನಾ ಚಿತ್ರದ ನಟಿ ಪಾರ್ವತಿ ಮದುವೆ ಫೋಟೋ ವೈರಲ್; ದಪ್ಪ ಆಗ್ಬಿಟ್ಟಿದ್ದೀರಾ ಎಂದು ಕಾಲೆಳೆದ ನೆಟ್ಟಿಗರು!

ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬಾಲಯ್ಯ ಕುಳಿತಿದ್ದ ಜಾಗದಲ್ಲಿ ನೀರಿನ ಬಾಟಲ್ ಜೊತೆ ಮದ್ಯ ಬರೆಸಿರುವ ಬಾಟಲ್ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದೆ. ಇದನ್ನು ಪ್ರಶ್ನೆ ಮಾಡಿದಾಗ ಟೀವೆಂಟ್ ಆಯೋಜಕರು 'ಇದೆಲ್ಲಾ ಸುಳ್ಳು ಅವರ ಹೆಸರು ಹಾಳು ಮಾಡುವ ಕೆಲಸ ನಡೆಯುತ್ತಿದೆ ಅವರಿಗೆ ಯಾವುದೇ ಕೆಟ್ಟ ಅಭ್ಯಾಸವಿಲ್ಲ' ಎಂದಿದ್ದರು. ಅಲ್ಲದೆ ವೇದಿಕೆ ಮೇಲೆ ನಾಯಕಿಯನ್ನು ದೂಕಿಬಿಟ್ಟರು. ಎಲ್ಲವೂ ಕ್ಯಾಮೆರಾಗೆ ಸಾಕಷ್ಟಿಯಾಗಿದ್ದರೂ...ಯಾರೂ ಸತ್ಯ ರಿವೀಲ್ ಮಾಡುತ್ತಿಲ್ಲ.

Latest Videos
Follow Us:
Download App:
  • android
  • ios