Asianet Suvarna News Asianet Suvarna News

ದೇವಿ ವಸ್ತ್ರ ಧರಿಸಿದಾಗ ಜನರು ಆಶೀರ್ವಾದ ಪಡೆಯಲು ಬರುತ್ತಿದ್ದರು: ಪ್ರಥಮಾ ಪ್ರಸಾದ್

ಹೆಚ್ಚಾಗಿ ದೇವಿ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ದೇವಿ ವಸ್ತ್ರ ಧರಿಸಿದಾಗ ಜನರು ಹೇಗೆ ವರ್ತಿಸುತ್ತಾರೆಂದು ನಟಿ ಪ್ರಥಮಾ ಪ್ರಸಾದ್ ಮಾತನಾಡಿದ್ದಾರೆ. 

Kannada actress Prathama Prasad talks about opting for goddess roles vcs
Author
Bangalore, First Published Nov 4, 2021, 4:37 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ (Sandalwood) ಪ್ರಸಿದ್ಧ ನಾಯಕಿ ವಿನಯ ಪ್ರಸಾದ್ (Vinaya Prasad) ಮಗಳು ಪ್ರಥಮಾ ಪ್ರಸಾಥ್ (Prathama Prasad) ನೃತ್ಯ ಹಾಗೂ ಕನ್ನಡ ಧಾರಾವಾಹಿ ಲೋಕದಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅದರೆ ಕಳೆದ ಕೆಲವು ವರ್ಷಗಳಿಂದ ಪ್ರಥಮಾ ಅವರು ದೇವಿ (Goddess) ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂದು ಹಂಚಿಕೊಂಡಿದ್ದಾರೆ.

'ನಾನು ಬೆಳೆಯುತ್ತಾ ದೇವಿ ಪಾತ್ರದಲ್ಲಿ ಹೆಚ್ಚಾಗಿ ರಮ್ಯಾ ಕೃಷ್ಣ (Ramya Krishna) ಅವರನ್ನು ನೋಡುತ್ತಿದ್ದೆ. ಅವರು ದೇವಿ ರೀತಿ ಅಲಂಕರಿಸಿಕೊಂಡು ಬಂದಾಗ, ನಾನು ತುಂಬಾನೇ ಇಷ್ಟ ಪಡುತ್ತಿದ್ದೆ. ಅದು ನನಗೆ inspire ಮಾಡುತ್ತಿತ್ತು. ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ನನಗೆ ಆಸೆ. ನನ್ನ ತಾಯಿ (Mother) ನನಗೆ ಸದಾ ಸ್ಪೂರ್ತಿ ನೀಡುತ್ತಾರೆ. ನಾನು ಮಾಡುವ ಪ್ರತಿಯೊಂದೂ ಕೆಲಸಕ್ಕೂ ಪ್ರೋತ್ಸಾಹ ನೀಡುತ್ತಾರೆ. ಬಾಲ್ಯದಿಂದ ನೃತ್ಯಕ್ಕೆ (Dance), ಆನಂತರ ಕಲ್ಚರಲ್‌ ಆಕ್ಟಿವಿಟಿ. ನನ್ನ ದೊಡ್ಡ ಶಕ್ತಿ ಅವರು,' ಎಂದು ಪ್ರಥಮಾ ಅವರು ಇ-ಟೈಮ್ಸ್‌ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

Kannada actress Prathama Prasad talks about opting for goddess roles vcs

'ಇಷ್ಟು ವರ್ಷಗಳಲ್ಲಿ ನಾನು ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ತುಂಬಾನೇ ಸಂತೋಷವಿದೆ. ಆರಂಭದಲ್ಲಿ ಈ ರೀತಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾನೆ ಯೋಚನೆ ಮಾಡುತ್ತಿದ್ದೆ. ಏಕೆಂದರೆ ಅವರು ನನ್ನನ್ನು ದೇವಿ ಪಾತ್ರದಲ್ಲಿ ನೋಡಿ ನೋಡಿ ಪ್ರಥಮಾ ಪ್ರಸಾದ್ ಆಗಿ ನೋಡುವುದಕ್ಕೆ ಮರೆಯಬಹುದು, ಎಂಬ ಆಂತಕವಿತ್ತು. ಕೆಲವೊಂದು ಘಟನೆಗಳನ್ನು ಮರೆಯಲಾಗುವುದಿಲ್ಲ. ನಾನು ದೇವಿ ರೀತಿ ಅಲಂಕಾರ ಮಾಡಿಕೊಂಡಾಗ, ಕೆಲವರು ಬಂದು ನನ್ನಿಂದ ಆಶೀರ್ವಾದ (Blessings) ಪಡೆದುಕೊಂಡಿದ್ದಾರೆ.  ನಾನು ಪಾತ್ರಕ್ಕೆ ಈ ರೀತಿ ಅಲಂಕಾರ ಮಾಡಿಕೊಂಡಿರುವುದು ಎಂದು ಎಷ್ಟು ಸಲ ಹೇಳಿದರೂ ಅವರು ಮೊದಲು ಹೇಳುವುದು ನಾನು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಅವರಿಗೆ ಗೌರವವಿದೆ ಅದಕ್ಕೆಂದು,' ಎಂದು ಪ್ರಥಮಾ ಹೇಳಿದ್ದಾರೆ.

ವಿನಯಾ ಪ್ರಸಾದ್ ಪುತ್ರಿ ಪ್ರಥಮಾಗೆ ಏನೂ ಆಗಿಲ್ಲ, ಫೇಕ್ ನ್ಯೂಸ್‌ ಬೇಡ!

'ಒಂದು ಘಟನೆ ಮಿಸ್ ಮಾಡಬಾರದು, ಅಂದ್ರೆ ನಾನು ಹೀಗೆ ಹೊರಾಂಗಣ ಚಿತ್ರೀಕರಣ (Outdoor Shooting) ಮಾಡಲು ದೇವಿ ರೀತಿ ಅಲಂಕಾರ ಮಾಡಿಕೊಂಡಿದ್ದೆ. ಒಬ್ರು ವಯಸ್ಸಾದ ವ್ಯಕ್ತಿ ಬಂದ್ರು. ನಾನು ನಿಜವಾದ ದೇವಿ ಎಂದುಕೊಂಡು ನಮಸ್ಕರಿಸಲು ಬಂದರು. ಜೀವನದಲ್ಲಿ ನಾನು ಇದೆಲ್ಲಾ ಮರೆಯಲು ಸಾಧ್ಯವೇ ಅಗುವುದಿಲ್ಲ. ಪ್ರತಿ ಸಲವೂ ಜನರು ಭೇಟಿ ಮಾಡಿದಾಗ ನಾನು ಅವರಿಗೆ ಅರ್ಥ ಮಾಡಿಸುವೆ. ಕಲಾವಿದೆಯಾಗಿ ಈ ರೀತಿ ಘಟನೆಗಳು ನನಗೆ ಧೈರ್ಯ ಮತ್ತು ಎನರ್ಜಿ ನೀಡುತ್ತವೆ. ಹೀಗಾಗಿ ನಾನು ತೆರೆ ಮೇಲೆ ಮತ್ತಷ್ಟು ಹೊಸ ಪ್ರಯತ್ನ ಮಾಡಬಹುದು. ದೇವಿ ಪಾತ್ರಗಳನ್ನು ಮಾಡುವಾಗ ನನ್ನ ಕೋಪವನ್ನು (Anger) ಕಂಟ್ರೋಲ್ ಮಾಡಬೇಕು. ಹೀಗಾಗಿ ಸದಾ ಧ್ಯಾನ (meditate) ಮಾಡುವೆ. ದೇವರ ಸ್ತ್ರೋತ್ರಗಳನ್ನು ಹೇಳುವೆ. ನಿಜ ನೀವನದಲ್ಲೂ ನಾನು ತುಂಬಾನೇ ಸ್ಪಿರಿಚುಯಲ್ ವ್ಯಕ್ತಿ (Spiritual person) ಬಿಡುವು ಮಾಡಿಕೊಂಡು ದೇವಿ ದರ್ಶನ ಪಡೆಯುವೆ,' ಎಂದಿದ್ದಾರೆ.

Follow Us:
Download App:
  • android
  • ios