Asianet Suvarna News Asianet Suvarna News

ವಿನಯಾ ಪ್ರಸಾದ್ ಪುತ್ರಿ ಪ್ರಥಮಾಗೆ ಏನೂ ಆಗಿಲ್ಲ, ಫೇಕ್ ನ್ಯೂಸ್‌ ಬೇಡ!

ನಟಿ ವಿನಯಾ ಪ್ರಸಾದ್ ಕುಟುಂಬದ ಬಗ್ಗೆ ಹರಿದಾಡುತ್ತಿರುವ ಫೇಕ್ ನ್ಯೂಸ್‌ಗಳಿಗೆ ವಿಡಿಯೋ ಮೂಲಕ ಫುಲ್ ಸ್ಟಾಪ್ ಇಟ್ಟ ಪುತ್ರಿ ಪ್ರಥಮಾ. ಕಲಾವಿದರನ್ನು ನೋಯಿಸಬೇಡಿ......
 

Kannada actress Vinaya Prasad daughter Prathama slams fake news vcs
Author
Bangalore, First Published Aug 19, 2021, 5:25 PM IST
  • Facebook
  • Twitter
  • Whatsapp

80-90ರ ದಶಕದಲ್ಲಿ ಕನ್ನಡ ಚಿತ್ರರಂಗ ಆಳಿದ ಪ್ರತಿಭಾನ್ವಿತಾ ನಟಿ ವಿನಯಾ ಪ್ರಸಾದ್‌ ಅವರ ಕುಟುಂಬದ ಬಗ್ಗೆ ಕೆಲವೊಂದು ಖಾಸಗಿ ಮಾಧ್ಯಮಗಳು ಹಾಗೂ ಯುಟ್ಯೂಬ್ ಚಾನೆಲ್‌ಗಳು ಫೇಕ್‌ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿವೆ. ಸತತ ಒಂದು ತಿಂಗಳಿನಿಂದ ಇದನ್ನು ಗಮನಿಸಿದ ನಂತರ ವಿನಯಾ ಅವರ ಪುತ್ರಿ ಪ್ರಥಮಾ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. 

ಪ್ರಥಮಾ ಮಾತು:
ಬಹಳ ದಿನಗಳಿಂದ ನಮ್ಮನ್ನು ಕಾಡುತ್ತಿರುವ ಬಹಳ ಗಂಭೀರವಾದ ಸಮಸ್ಯ ಬಗ್ಗೆ ನಿಮ್ಮ ಜೊತೆ ಶೇರ್ ಮಾಡಬೇಕು ಅಂತ ಈ ವಿಡಿಯೋ ಮಾಡುತ್ತಿರುವೆ. ಕೆಲವು ದಿನಗಳಿಂದ, ಕೆಲವು ತಿಂಗಳಿನಿಂದ ನಮ್ಮ ಹಿತೈಷಿಗಳು ನಮಗೆ ಗಾಬರಿಯಿಂದ ಮೆಸೇಜ್ ಹಾಗೂ ಕಾಲ್ ಮಾಡ್ತಿದ್ದಾರೆ. ನಿಮಗೆ ಏನಾಯ್ತು? ಹುಷಾರಾಗಿದ್ದೀರಾ ಇಲ್ವಾ? ಈ ತರ ಸುದ್ದಿ ಕೇಳಿದ್ವಿ, ನ್ಯೂಸ್ ಓದಿದ್ವಿ ಹೀಗೆ...ಬರೀ ಗಾಬರಿಯೇ ಇತ್ತು. ಆ ಕಾಲ್ ಹಾಗೂ ಮೆಸೇಜ್‌ಗಳಲ್ಲಿ,' ಎಂದು ಪ್ರಥಮಾ ಪ್ರಸಾದ್ ಮಾತು ಮುಂದುವರೆಸಿದ್ದಾರೆ. 

Kannada actress Vinaya Prasad daughter Prathama slams fake news vcs

ಅರಸನಕೋಟೆ ಅಖಿಲಾಂಡೇಶ್ವರಿ ಬಗ್ಗೆ ತಿಳಿದಿರದ ವಿಚಾರಗಳಿವು!

'ಎಲ್ಲಿಂದ ಈ ರೀತಿ ವಿಚಾರಗಳು ತಿಳಿಯುತ್ತಿವೆ ಎಂದು ವಿಚಾರಿಸಿದಾಗ ಕೆಲವೊಂದು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ ಎಂದು ತಿಳಿದು ಬಂದಿವೆ. ಪ್ರೈವೇಟ್ ನ್ಯೂಸ್ ಚಾನೆಲ್‌ಗಳು ಅವರ ಚಾನೆಲ್‌ ಪಬ್ಲಿಸಿಟಿಗೋಸ್ಕರವೋ ಏನೋ ಗೊತ್ತಿಲ್ಲ, ಆದರೆ ಅವರು ಹಾಕಿರುವ ಶೀರ್ಷಿಕೆಗೂ ಅದಕ್ಕೆ ಹಾಕಿರುವ ಚಿತ್ರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅದರಲ್ಲೂ ಕಂಟೆನ್ಟ್‌ ಅಸಂಬದ್ಧವಾಗಿವೆ. ನನ್ನ ತಾಯಿ ಅವರು ಚಿತ್ರದ ಯಾವುದೋ ಒಂದು ಫೋಟೋ, ಅದರ ಪಕ್ಕದಲ್ಲಿ ನನ್ನದೊಂದು ಫೋಟೋ ಹಾಕಿ 'ವಿನಯಾ ಪ್ರಸಾದ್ ಅವರ ಕುಟುಂಬಕ್ಕೆ ಏನಾಗಿದೆ ಗೊತ್ತಾ? ಅವರ ಇಡೀ ಕುಟುಂಬವೇ ಕಣ್ಣೀರಲ್ಲಿ ಮುಳುಗಿದೆ,' ಅಥವಾ 'ವಿನಯಾ ಪ್ರಸಾದ್ ಅವರ ಮಗಳಿಗೆ ಏನಾಗಿದೆ, ಕಣ್ಣೀರಿಟ್ಟ ತಾಯಿ'...ಹೀಗೆಲ್ಲಾ ಗಾಬರಿ ಶೀರ್ಷಿಕೆಗಳನ್ನು ಕೊಡುತ್ತಿದ್ದಾರೆ. ಯಾರೇ ಆಗಲಿ ಒಂದು ಸಲ ಶೀರ್ಷಿಕೆ ನೋಡಿದರೆ ಗಾಬರಿ ಆಗುತ್ತಾರೆ. ಇಂತಹ ನ್ಯೂಸ್ ಹಬ್ಬಿಸುತ್ತಿರುವ ಜನರಿಗೆ ನಾನು ಮನವಿ ಮಾಡಿಕೊಳ್ಳುವೆ. ದೇಶದಲ್ಲಿ ಆಗಲೇ ಸಾಕಷ್ಟು ತೊಂದರೆ ಆಗುತ್ತಿದೆ, ಜನರು ನೋವಿನಲ್ಲಿದ್ದಾರೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ.  ನಮಗೆ ಏನೂ ಸಮಸ್ಯೆ ಆಗಿಲ್ಲ, ಸಮಸ್ಯೆ ಇದ್ದರೆ ನಾವೇ ನೇರವಾಗಿ ಒಂದು ಮಾತನಾಡುತ್ತೇವೆ,' ಎಂದು ಪ್ರಥಮಾ ಮಾತನಾಡಿದ್ದಾರೆ.

 

Follow Us:
Download App:
  • android
  • ios