Shivarajkumar's Veda Movie:ವಯಸ್ಸಾದವರ ಲುಕ್‌ನಲ್ಲಿ ಶಿವಣ್ಣ, ಪಾವನಾ ಜೋಡಿ!
125ನೇ ಚಿತ್ರದಲ್ಲಿ ಡಿಫರೆಂಟ್ ಲುಕ್ ಆಯ್ಕೆ ಮಾಡಿಕೊಂಡ ನಟ ಶಿವರಾಜ್‌ಕುಮಾರ್. ಸಣ್ಣ ಬ್ರೇಕ್‌ನ ನಂತರ ಪಾವನಾ ಕಮ್‌ಬ್ಯಾಕ್....
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ , ದಿ ಎವರ್ ಗ್ರೀನ್ ಹ್ಯಾಂಡ್ಸಮ್ ಶಿವರಾಜ್‌ಕುಮಾರ್ (Shivarajkumar) ಅವರು ಕೆಲವು ತಿಂಗಳ ಹಿಂದಿಯೇ ತಮ್ಮ 125ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಸಿನಿಮಾ ಅನೌನ್ಸ್ ಮಾಡುವ ಮೂಲಕ ತಮ್ಮ ಪತ್ನಿ ಗೀತಾ (Geetha Shivarajkumar) ಅವರನ್ನು ನಿರ್ಮಾಪಕಿಯಾಗಿಯೂ ಪರಿಚಯಿಸಿಕೊಟ್ಟಿದ್ದಾರೆ. ಇಷ್ಟೆಲ್ಲಾ ಹ್ಯಾಪನಿಂಗ್ ವಿಚಾರಗಳು ಹೊಂದಿರುವ ಈ ಸಿನಿಮಾದಲ್ಲಿ ಏನೆಲ್ಲಾ ವಿಶೇಷತೆಗಳು ಇವೆ ಗೊತ್ತಾ?
ಶಿವಣ್ಣ ಮತ್ತು ನಿರ್ದೇಶಕ ಎ.ಹರ್ಷ (Director A Harsha) ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ ಇದು, ವೇದ (Veda) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ಚಿತ್ರಕ್ಕೆ ಅದೇ ಹೆಸರಿಡಲಾಗಿದೆ. ಮುಹೂರ್ತದ ದಿನವೇ ಚಿತ್ರೀಕರಣ (Shooting) ಆರಂಭಿಸಿದ ತಂಡ ಶಿವಣ್ಣ ಪಾತ್ರದ ಬಗ್ಗೆ ಸಣ್ಣ ಸುಳಿವು ನೀಡಿತ್ತು. 1960ರ ಸಮಯದಲ್ಲಿ ನಡೆಯುವ ಕಥೆ ಇದಾಗಿದ್ದು, ಶಿವಣ್ಣ ವಯಸ್ಸಾದವರ (Shivanna aged look) ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದೇ ಮೊದಲು ಈ ಲುಕ್ ಪ್ರಯತ್ನ ಮಾಡುತ್ತಿರುವುದು ಹಾಗೇ ಲುಕ್ ಪೂರ್ತಿ ಬೇರೆ ಥರ ಇರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಮೊದಲ ಬಾರಿ ಪಾವನಾ ಗೌಡ (Pavana Gowda) ಕಾಣಿಸಿಕೊಳ್ಳುತ್ತಿದ್ದಾರೆ. ಪಾವನಾ ಪಾತ್ರ ಹೇಗಿರಲಿದೆ? ಪಾತ್ರದ ಹೆಸರು ಏನು ಎಂಬುದರ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲವಾದರೂ ನಾಯಕಿ ಆಗಿರುವುದನ್ನು ಮಾತ್ರ ಖಚಿತ ಪಡಿಸಿದ್ದಾರೆ.
'ಇದು ಎಮೋಷನ್, ಆ್ಯಕ್ಷನ್, ಡ್ರಾಮಾ ಫಿಲ್ಮ್ (Drama Film). ಕಾಮಿಡಿಯೂ ಜೋರಾಗಿದೆ. ಪಕ್ಕಾ ಫ್ಯಾಮಿಲಿ ಸಿನಿಮಾ (Family Movie) ಇದು. ಶಿವಣ್ಣ ಇದರಲ್ಲಿ ಡಬಲ್ ಆ್ಯಕ್ಷಿಂಗ್ (Double acting) ಮಾಡುತ್ತಿಲ್ಲ. ಎರಡು ಶೇಡ್‌ನ ಲುಕ್ ಇದೆ. ಈಗ ರಿಲೀಸ್ ಮಾಡಿರುವ ಪೋಸ್ಟರ್‌ನಲ್ಲಿರುವ ಲುಕ್ ಒಂದು ರೀತಿಯಾದರೆ, ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇನ್ನೊಂದು ರೀತಿ. ಯುವಕನ ಲುಕ್‌ನಲ್ಲಿ ಬೇರೆ ಥರ ಕಾಣಿಸುತ್ತಾರೆ. ಏಕ್‌ದಂ ಖಡಕ್ ಆಗಿರುತ್ತಾರೆ. ಥ್ರಿಲ್ಲಿಂಗ್ ಆ್ಯಕ್ಷನ್ (Thriller Action) ದೃಶ್ಯಗಳಿರುತ್ತವೆ,' ಎಂದು ನಿರ್ದೆಶಕ ಹರ್ಷ ಅವರು ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ನವೆಂಬರ್ 22ರಿಂದ ಶೂಟಿಂಗ್ ಅಖಾಡದಲ್ಲಿ ಶಿವರಾಜ್‌ಕುಮಾರ್!'1960ರಲ್ಲಿ ಕಾಣ ಸಿಗುತ್ತಿದ್ದ ಹಳ್ಳಿಗಳು ಈಗ ಬದಲಾಗಿವೆ. ಹಾಗಾಗಿ ಸೆಟ್‌ನಲ್ಲೇ ಪೂರ್ತಿ ಚಿತ್ರೀಕರಣ ಮಾಡುತ್ತಿದ್ದೇವೆ. ಎಲ್ಲವಕ್ಕೂ ಸೆಟ್ ಹಾಕ ಬೇಕಿರುವುದರಿಂದ ನಿರಂತರವಾಗಿ ಚಿತ್ರೀಕರಣ ಮಾಡಲು ಸಾಧ್ಯವಿಲ್ಲ. ಕಲಾವಿದರ ಮೇಕಪ್ ಲುಕ್ (Makeup Look) ಎಲ್ಲವಕ್ಕೂ ಬಹಳ ಸಮಯ ತೆಗದುಕೊಳ್ಳುತ್ತಿದೆ. ಶಿವಣ್ಣನ 125ನೇ ಸಿನಿಮಾ ಇದು ಅನ್ನುವುದು ವಿಶೇಷ . 125ನೇ ಸಿನಿಮಾ ಅನ್ನೋದು ನನ್ನ ತಲೆಯಲ್ಲಿಲ್ಲ. ಯೂನಿವರ್ಸಲ್ (Universal Film) ಆಗಿರೋ ಸಿನಿಮಾ ಮಾಡಬೇಕು. ಇಂದು ಜನರ ಅಭಿರುಚಿ ಬೇರೆ ಬೇರೆ ಬಗೆ ಇರುತ್ತವೆ. ಎಲ್ಲರನ್ನೂ ಶೇ. 100ರಷ್ಟು ಮೆಚ್ಚಿಸುವುದು ಕಷ್ಟದ ಕೆಲಸ. ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತದೆ,' ಎಂದು ಹರ್ಷ ಮಾತನಾಡಿದ್ದಾರೆ.
ಶಿವಣ್ಣ ಜತೆಗಿನ ಸಿನಿಮಾ ನನಗೆ ಸಿಕ್ಕ ಗಾಡ್ ಗಿಫ್ಟ್: ಎ ಹರ್ಷ'ಭಜರಂಗಿ 2 (Bhajarangi 2) ಸಿನಿಮಾವನ್ನು ಎಲ್ಲಾ ವರ್ಗದವರು ಬಹಳ ಇಷ್ಟಪಟ್ಟರು. ಹಾಗೆ ಎಲ್ಲರನ್ನೂ ಸೆಳೆಯುವಂಧ ಕಮರ್ಷಿಯಲ್ ಸಿನಿಮಾ (Commercial films) ವೇದ. ಹಿಂದಿನ ಸಿನಿಮಾಗಳು ಎಕ್ಸ್‌ಟ್ರಾರ್ಡಿನರಿ ಗಳಿಕೆ ತಂದುಕೊಟ್ಟವು. ನಮ್ಮ ಸಿನಿಮಾಗಳ ಯಶಸ್ಸು ಮತ್ತೆ ಸಿನಿಮಾ ಮಾಡಲು ಕಾರಣ ಶಿವಣ್ಣ ಮತ್ತು ನಾನು ಒಂದೇ ಕುಟುಂಬದವರಂತೆ ಇದ್ದೇವೆ. ಸಿನಿಮಾ ಕತೆ ಕೇಳುತ್ತಿದ್ದಂತೆ, ಅವರು ಬಹಳ ಇಷ್ಟ ಪಟ್ಟರು. ಅದ್ದರಿಂದಲೇ ಗೀತಕ್ಕ ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದರು,' ಎಂದಿದ್ದಾರೆ ಹರ್ಷ.