ಮದುವೆ ಆದ್ಮೇಲೆ ಕಾಲುಂಗುರ ಹಾಕೋದನ್ನು ನಂಬುತ್ತೀನಿ; ದೇವರು- ನಂಬಿಕೆಗಳ ಬಗ್ಗೆ ಮೇಘನಾ ರಾಜ್
ಮೊದಲ ಸಲ ತಾವು ನಂಬುವ ದೇವರ ಬಗ್ಗೆ ಮೇಘನಾ ರಾಜ್ ಮಾತನಾಡಿದ್ದಾರೆ. ಅಲ್ಲದೆ ಮಗ ರಾಯನ್ ಹೆಸರು ಆಯ್ಕೆ ಮಾಡಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ದೇವರನ್ನು ನಂಬುತ್ತಾರಾ? ಅವರ ಜೀವನದಲ್ಲಿ ನಡೆದಿರುವ ಘಟನೆಗಳಿಂದ ಏನಾದರೂ ದೇವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರಾ? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳುವ ನೆಟ್ಟಿಗರು ಕೊಟ್ಟ ಪ್ರತಿಕ್ರಿಯೆ ಇದು...
'ನಾನು ದೇವರನ್ನು ತುಂಬಾ ನಂಬುತ್ತೀನಿ. ನಾನು ತುಂಬಾ ಫರ್ಮ್ ಬಿಲಿವರ್. ನನ್ನ ಜೀವನದಲ್ಲಿ ನಡೆದಿರುವ ಘಟನೆಗಳನ್ನು ನೋಡಿ ಜನರೇ ನಿರ್ಧಾರ ಮಾಡಿಬಿಟ್ಟಿದ್ದಾರೆ ನಾನು ದೇವರನ್ನು ನಂಬುವುದಿಲ್ಲ ಎಂದು. ನನಗೆ ದೇವರ ಮೇಲೆ ಕೋಪ ಇರುವುದು ನಿಜ ಆದರೆ ದೇವರನ್ನು ನಂಬುತ್ತೀನಿ. ದೇವರು ಹೀಗೆ ಇರಬೇಕು ಇದನ್ನೇ ಇಷ್ಟ ಪಡುತ್ತಾನೆ ಎಂದು ಮನುಷ್ಯರು ಮಾಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ದೇವರು ಅಂದ್ರೆ ಹೀಗೆ, ಮನುಷ್ಯರು ಅಂದ್ರೆ ಹೀಗೆ, ರಿಲೀಜನ್ ಅಂದ್ರೆ ಹೀಗೆ ಅಂತ .....ಅದರ ಬಗ್ಗೆ ನನಗೆ ಗೊತ್ತಿಲ್ಲ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಜನರಲ್ ಆಲೋಚನೆಗಳಿಗೆ ತೊಂದರೆ ಮಾತುವಂತ ಹೇಳಿಕೆ ನಾನು ನೀಡುವುದಿಲ್ಲ. ದೇವರನ್ನು ತುಂಬಾ ನಂಬುತ್ತೀನಿ ಅಲ್ಲದೆ ನಾವು ಪ್ರಾರ್ಥನೆ ಮಾಡುವುದರಲ್ಲಿ ಪವರ್ ಇದೆ ಅನ್ನೋದು ಕೂಡ ನಾನು ನಂಬುತ್ತೀನಿ' ಎಂದು ರ್ಯಾಪಿಕ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ರಾಯನ್ ಯಾವತ್ತೂ ಅಪ್ಪ ಅಂತ ಕೇಳಿಲ್ಲ, ಅವನಿಗೂ ಗೊತ್ತಾಗಿದೆ: ಮೇಘನಾ ರಾಜ್
ನನ್ನ ಪ್ರಕಾರ ಪ್ರಾರ್ಥನೆ ಅಂದ್ರೆ ಡಿವೈನ್ ಜೊತೆ ಮಾತನಾಡುವುದು. ಹೇಗೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರೆ ಅದಕ್ಕೆ ನನ್ನ ಬಳಿ ಉತ್ತರವಿಲ್ಲ. ನಮ್ಮ ಸುತ್ತ ಇರುವ ಎನರ್ಜಿಯನ್ನು ವರ್ಶಿಪ್ ತುಂಬಾ ಸೈಲೆಂಟ್ ಆಗಿ ವರ್ಶಿಪ್ ಮಾಡುವವಳು ನಾನು. ನಾನು ದೇವರ ಜೊತೆ ಮಾತನಾಡುತ್ತೀನಿ. ಹಾಗಂತ ನಾನು ರಿಲಿಜನ್‌ಗಳನ್ನು ಅಗೌರವಿಸುವುದಿಲ್ಲ. ಪದತಿಗಳನ್ನು ಅಗೌರವಿಸುವುದಿಲ್ಲ. ಅದರಲ್ಲೂ ಮದುವೆ ಆದ ಮೇಲೆ ಹೆಣ್ಣು ಮಕ್ಕಳು ಕಾಲು ಉಂಗುರ ಹಾಕಿಕೊಳ್ಳಬೇಕು ಅಂತಾರೆ ಅದಕ್ಕೆ ಸೈಂಟಿಫಿಕ್ ಆಗಿ ಕಾರಣ ಇದೆ ಹೀಗಾಗಿ ಅದನ್ನು ನಂಬುತ್ತೀನಿ. ಕಾರಣ ಕೊಟ್ಟರೆ ಖಂಡಿತಾ ನಾನು ನಂಬುತ್ತೀನಿ ಸುಮ್ಮನೆ ನಂಬಬೇಕು ಅಂದ್ರೆ ಆಗಲ್ಲ. ನಾನು ಹಿಂದು ಮತ್ತು ಕ್ರಿಶ್ಚಿಯನ್ ಧರ್ಮಗಳನ್ನು ಪಾಲಿಸುತ್ತೀನಿ. ನನ್ನ ಮದುವೆಯಲ್ಲೂ ಕೂಡ ಹಾಗೆ ಮಾಡಿದ್ದೀವಿ ಎಂದು ಮೇಘನಾ ರಾಜ್ ಹೇಳಿದ್ದಾರೆ.
'ನಮಸ್ತೆ ಅಪ್ಪ..ಪಾರ್ಟಿ ಮಾಡಿದ್ಯಾ, ಕೇಕ್ ತಿಂದ್ಯಾ'; ಚಿರು ಫೋಟೋ ಮುಂದೆ ರಾಯನ್, ಕಣ್ಣೀರಿಟ್ಟ ಫ್ಯಾನ್ಸ್!
ನನ್ನ ಮಗ ರಾಯನ್ ಹೆಸರನ್ನು ಆಯ್ಕೆ ಮಾಡುವಾಗ ಯಾವುದೇ ಆ ಕಡೆ ವಾಲಬೇಕಾ ಈ ಕಡೆ ವಾಲಬೇಕ ಅನ್ನೋ ಪ್ರಶ್ನೆ ಬರಬಾರದು ಅಂತ ತುಂಬಾ ಸೂಕ್ಷ್ಮೆಯಲ್ಲಿ ಹೆಸರು ಆಯ್ಕೆ ಮಾಡಿದ್ದಾರೆ. ಚಿರಂಜೀವಿ ಮತ್ತು ಮೇಘನಾ ಹೆಸರು ಸಂಸ್ಕೃತದ ಪದ ಹೀಗಾಗಿ ರಾಯನ್ ಹೆಸರು ಕೂಡ ಸಂಸ್ಕೃತದಿಂದ ಆಯ್ಕೆ ಮಾಡಿರುವುದು. ಅಲ್ಲದೆ ರಾಯನ್ ಅನ್ನೋ ಹೆಸರನ್ನು ಯಾವುದೇ ಜಾತಿಯಲ್ಲಿ ಕರೆದರು ಒಂದೇ ರೀತಿ ಕರೆಯುತ್ತಾರೆ ಸಣ್ಣ ಪುಟ್ಟ ಬದಲಾವಣೆಗಳು ಇರುತ್ತದೆ. ರಾಯನ್ ಅಂದ್ರೆ ಪ್ರಿನ್ಸ್ ಅಂತ. ಪರ್ಷಿಯಲ್‌ನಲ್ಲಿ ಪ್ಯಾರಡೈಸ್ ಗೇಟ್ ತೆಗೆದಿರುವ ಪ್ರಿನ್ಸ್ ಎನ್ನುತ್ತಾರೆ. ನಮ್ಮ ಇಡೀ ಕುಟುಂಬದಲ್ಲಿ ಅನೇಕ ವಿಚಾರಗಳಲ್ಲಿ ಬದಲಾಗಿದ್ದು ರಾಯನ್ ಬಂದ ಮೇಲೆ ಎಂದಿದ್ದಾರೆ ಮೇಘನಾ ರಾಜ್.