'ನಮಸ್ತೆ ಅಪ್ಪ..ಪಾರ್ಟಿ ಮಾಡಿದ್ಯಾ, ಕೇಕ್ ತಿಂದ್ಯಾ'; ಚಿರು ಫೋಟೋ ಮುಂದೆ ರಾಯನ್, ಕಣ್ಣೀರಿಟ್ಟ ಫ್ಯಾನ್ಸ್!
ತಂದೆ ಸಮಾಧಿ ಮುಂದೆ ನಿಂತು ಹ್ಯಾಪಿ ಬರ್ತಡೇ ಹಾಡಿದ ರಾಯನ್ ರಾಜ್ ಸರ್ಜಾ.

ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅಗಲಿ 3 ವರ್ಷ. ಪ್ರತಿ ವರ್ಷವೂ ಕುಟುಂಬಸ್ಥರು, ಸ್ನೇಹಿತರು ಮತ್ತು ಅಭಿಮಾನಿಗಳು ಸಮಾಧಿ ಪೂಜೆ ಮಾಡುತ್ತಾರೆ. ಚಿರು ಅಗಲಿದ ದಿನ ಹಾಗೂ ಹುಟ್ಟುಹಬ್ಬದ ದಿನ ಸಮಾಧಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಹೂಗಳಿಂದ ತುಂಬಿಸಿರುತ್ತಾರೆ. ವರ್ಷ ವರ್ಷವೂ ರಾಯನ್ ರಾಜ್ ಸರ್ಜಾ ವಿಶೇಷವಾಗಿ ಕಾಣಿಸಿಕೊಂಡು ತಂದೆಯ ಸಮಾಧಿ ಏನಾದರೂ ಒಂದು ಮಾಡುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.
ಅಕ್ಟೋಬರ್ 17ರಂದು ಚಿರಂಜೀವಿ ಹುಟ್ಟುಹಬ್ಬವಿದ್ದು ಇಡೀ ಕುಟುಂಬ ಕನಕಪುರದಲ್ಲಿರುವ ಚಿರು ಸಮಾಧಿಗೆ ವಿಶೇಷ ಪೂಜೆ ಅಲ್ಲಿಸಿದ್ದಾರೆ. ಟಿ-ಶರ್ಟ್ ಚಡ್ಡಿಯಲ್ಲಿ ಎಂಟ್ರಿ ಕೊಟ್ಟ ರಾಯನ್ ತಂದೆ ಫೋಟೋಗೆ ಹೂ ಹಾಕಿ ನಮಸ್ಕಾರ ಮಾಡಿದ್ದಾನೆ. ಪದೇ ಪದೇ ನಮಸ್ತೆ ಅಪ್ಪ ಎಂದು ಹೇಳಿದ್ದಾರೆ. ಅದಾದ ಮೇಲೆ ಸಮಾಧಿ ಬಳಿ ಹೋಗಿ ಹೂ ಹಾಕಿ ಹ್ಯಾಪಿ ಬರ್ತಡೇ ಸಾಂಗ್ ಹಾಡಿದ್ದಾನೆ. ಮೊದಲು ಸಮಾಧಿ ಮೇಲೆ ನಿಲ್ಲಿಸುವಂತ ಹಠ ಮಾಡುತ್ತಾನೆ ಆನಂತ ಒಂದು ಚೇರ್ ಹಾಕಿ ನಿಲ್ಲಿಸಿದ ಮೇಲೆ ಹೂ ಹಾಕುತ್ತಲೇ ಹ್ಯಾಪಿ ಬರ್ತಡೇ ಅಂತ ಹಾಡಿದ್ದಾನೆ. ಅದಾದ ಮೇಲೆ ತಾಯಿ ಮೇಘನಾ ಹೇಳಿಕೊಡುವ ರೀತಿಯಲ್ಲಿ ಪಾರ್ಟಿ ಮಾಡಿದ್ಯಾ? ಕೇಕ್ ತಿಂದ್ಯಾ? ಎಂದು ರಾಯನ್ ತಂದೆ ಜೊತೆ ಮಾತನಾಡುತ್ತಾನೆ. ಈ ವಿಡಿಯೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ವಿಡಿಯೋ ನೋಡುತ್ತಿರುವ ಜನರು ಭಾವುಕರಾಗಿದ್ದಾರೆ.
ಹುಣ್ಣಾದ ಮೇಲೆ ತುಪ್ಪ ಸುರಿಯಬೇಡಿ, ನನಗೆ ಸಿಂಪತಿ ಬೇಡವೇ ಬೇಡ: ಮೇಘನಾ ರಾಜ್
ಜೂನ್ ತಿಂಗಳಿನಲ್ಲೂ ರಾಯನ್ ತಂದೆ ಸಮಾಧಿ ಬಳಿ ಹೀಗೆ ಮಾತನಾಡಿದ್ದ. ಧ್ರುವ ಸರ್ಜಾ ಹೊಂದಿರುವ ತೋಟದ ಮನೆಯಲ್ಲಿ ಚಿರು ಸಮಾಧಿ ಮಾಡಲಾಗಿತ್ತು. ಕುಟುಂಬಸ್ಥರು ಹಾಗೂ ಸ್ನೇಹಿತರು ವರ್ಷದ ಪೂಜೆಯಲ್ಲಿ ಭಾಗಿಯಾಗಿದ್ದು. ನಟ ದುನಿಯಾ ವಿಜಯ್ ಹಾಗೂ ಹಾಸ್ಯನಟ ಶಿವರಾಜ್ ಕೆಆರ್ ಪೇಟೆ ಕೂಡ ಭಾಗಿಯಾಗಿದ್ದರು. ಬಾಡೂಟ ವ್ಯವಸ್ಥೆ ಕೂಡ ತೋಟದ ಮನೆ ಬಳಿ ವ್ಯವಸ್ಥೆ ಮಾಡಲಾಗಿತ್ತು. ಮೇಘನಾ ರಾಜ್, ಪ್ರೇಮಿಳಾ ಜೋಶಾಯಿ ಮತ್ತು ಸುಂದರ್ ರಾಜ್ ಒಟ್ಟಿಗೆ ರಾಯನ್ ರಾಜ್‌ನ ಕರೆದುಕೊಂಡು ಬಂದರು. ಧ್ರುವ ಸರ್ಜಾ ಮತ್ತು ತಾಯಿ ಅಮ್ಮಾಜಿ ಜೊತೆ ಆಗಮಿಸಿದರು. ಚಿರು ಫೂಟೋಗೆ ಹೂ ಹಾಕಿದ ನಂತರ ಸಮಾಧಿ ಪೂಜೆ ಮಾಡಿದರು. ಈ ವೇಳೆ ತಂದೆ ಫೋಟೋ ಹೂ ಹಾಕಿದ ರಾಯನ್ ನಮಸ್ತೆ ಅಪ್ಪ ನಮಸ್ತೆ ಅಪ್ಪ ಎಂದು ಪದೇ ಪದೇ ಹೇಳುತ್ತಿದ್ದರು. ಈ ಕ್ಷಣವನ್ನು ಮಾಧ್ಯಮದವರು ಸೆರೆ ಹಿಡಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ರಾಯನ್ ಮುಗ್ಧ ಮನಸ್ಸು ಹಾಗೂ ತುಂಟಾಟ ನೆಟ್ಟಿಗರ ಗಮನ ಸೆಳೆದಿದೆ. ಈಗಷ್ಟೇ ಮಾತನಾಡಲು ಶುರು ಮಾಡಿರುವ ರಾಯನ್ ಮುದ್ದು ಮುದ್ದಾಗಿ ಮಾತನಾಡುತ್ತಿರುವುದನ್ನು ನೋಡಿ ಖುಷಿ ಪಟ್ಟಿದ್ದಾರೆ ಅದೇ ಸಮಯಕ್ಕೆ ತಂದೆ ಇಲ್ಲದೆ ಬೆಳೆಯುತ್ತಿದ್ದಾನೆ ಅನ್ನೋ ಸಂಕಟವಿದೆ. ತಂದೆ ಹಾಗೂ ತಾಯಿ ಡಬಲ್ ರೂಪ್ ಪ್ಲೇ ಮಾಡುತ್ತಿದ್ದಾರೆ ಮೇಘನಾ ರಾಜ್.