ಕನ್ನಡ ನಟಿ ಮೇಘನಾ ರಾಜ್‌ ಅವರ ಹೊಸ ಮನೆಯ ದೇವರ ಕೋಣೆಯಲ್ಲಿ ವೆಂಕಟೇಶ್ವರ, ಏಸು ಫೋಟೋ ಕೂಡ ಇದೆ. 

ಕನ್ನಡ ನಟಿ ಮೇಘನಾ ರಾಜ್‌ ಇತ್ತೀಚೆಗೆ ಹೊಸ ಮನೆ ಖರೀದಿ ಮಾಡಿದ್ದಾರೆ. ಈ ಹಿಂದೆ ಅವರು ಜೆಪಿ ನಗರದ ತಂದೆ-ತಾಯಿ ಮನೆಯಲ್ಲಿದ್ದರು. ಈಗ ಬೆಂಗಳೂರಿನಲ್ಲಿಯೇ ಸ್ವತಂತ್ರ ಮನೆ ಖರೀದಿ ಮಾಡಿದ್ದಾರೆ.

ಭವ್ಯವಾದ ಮನೆ! 
ತುಂಬ ದೊಡ್ಡದಿರುವ ಈ ಮನೆಯಲ್ಲಿ ಎಲ್ಲರಿಗೂ ರೂಮ್‌ಗಳಿವೆ. ರಾಯನ್‌ ರಾಜ್‌ ಸರ್ಜಾ, ಮೇಘನಾ ರಾಜ್‌ ಸರ್ಜಾಗೆ ತಕ್ಕಂತೆ ಮನೆ ಅಲ್ಟರೇಶನ್‌ ಮಾಡಲಾಗಿದೆ. ಇನ್ನು ಕಿಚನ್‌ನ್ನು ಕೂಡ ತುಂಬ ದೊಡ್ಡದಾಗಿ ರಚನೆ ಮಾಡಲಾಗಿದೆ. ಮನೆ ಮಾಡಬೇಕು ಎನ್ನೋದು ಚಿರಂಜೀವಿ ಸರ್ಜಾ ಕನಸಾಗಿತ್ತು, ಅದನ್ನೀಗ ಮೇಘನಾ ನೆರವೇರಿಸಿದ್ದಾರೆ. ಈ ಮನೆಗೆ ರಾಯನ್‌ ರಾಜ್‌ ಸರ್ಜಾ, ಮೇಘನಾ ಸರ್ಜಾ ಎಂದು ಹೆಸರು ಇಟ್ಟಿದ್ದಾರೆ. ಈಗಿನ ಕಾಲಕ್ಕೆ ತಕ್ಕಂತೆ ಮನೆಗೆ ಪೇಂಟ್‌, ಇಂಟಿರಿಯರ್‌ ಡಿಸೈನ್‌ ಮಾಡಿಸಿದ್ದಾರೆ. 

ಭಿನ್ನ ಧರ್ಮೀಯರು! 
ಮೇಘನಾ ರಾಜ್‌ ಅವರ ತಂದೆ ಸುಂದರ್‌ ರಾಜ್‌ ಅವರು ಅಯ್ಯಂಗಾರ್‌ ಆದರೆ ಪ್ರಮೀಳಾ ಜೋಶಾಯ್‌ ಅವರು ರೋಮನ್‌ ಕ್ಯಾತೋಲಿಕ್.‌ ಇವರಿಬ್ಬರು ಸಿನಿಮಾದಲ್ಲಿ ನಟಿಸುತ್ತಲೇ ಪ್ರೀತಿಯಲ್ಲಿ ಬಿದ್ದರು. ಈ ಜೋಡಿಗೆ ಮೇಘನಾ ರಾಜ್‌ ಏಕೈಕ ಮಗಳಿದ್ದಾಳೆ.‌ ಅಂದಹಾಗೆ ಮೇಘನಾ ಅವರ ಮನೆಯಲ್ಲಿ ವೆಂಕಟೇಶ್ವರ ಸ್ವಾಮಿಯ ಫೋಟೋ ಜೊತೆಗೆ ಏಸು ಕ್ರಿಸ್ತನ ಫೋಟೋ ಕೂಡ ಇದೆ. 

ತಂದೆ ತಾಯಿ ಎಷ್ಟು ಮುಖ್ಯನೋ ಅರ್ಜುನ್ ಸರ್ಜಾ ಅಂಕಲ್ ಕೂಡ ನನಗೆ ಅಷ್ಟೇ ಮುಖ್ಯ: ಮೇಘನಾ ರಾಜ್

ಎರಡು ಧರ್ಮ ಪಾಲಿಸ್ತೀನಿ ಎಂದಿದ್ದ ಮೇಘನಾ ರಾಜ್
ಮೇಘನಾ ರಾಜ್‌ ಅವರು ಈ ಹಿಂದೆಯೇ ಧರ್ಮದ ಬಗ್ಗೆ ಮಾತನಾಡಿದ್ದು, “ನಾನು ಎರಡು ಧರ್ಮವನ್ನು ಪಾಲಿಸ್ತೀನಿ, ನನಗೆ ಎರಡು ಧರ್ಮಗಳ ಬಗ್ಗೆಯೇ ಗೊತ್ತು, ನಮ್ಮ ಮನೆಯಲ್ಲಿ ಹೀಗೆಯೇ ಬೆಳೆಸಿದ್ದಾರೆ. ಇನ್ನು ನನ್ನ ಮಗನಿಗೂ ಕೂಡ ಇದೇ ಗುಣ ಬರಬೇಕು ಎಂದು ಬಯಸ್ತೀನಿ” ಎಂದು ಹೇಳಿದ್ದರು.

ನಾಮಕರಣ ಮಾಡಿದಾಗಲೂ ಕೊಂಕು ಬಂದಿತ್ತು.
ಅಂದಹಾಗೆ ಮೇಘನಾ ರಾಜ್‌ ಹಾಗೂ ಚಿರಂಜೀವಿ ಸರ್ಜಾ ಅವರು ಹಿಂದು, ಕ್ರಿಶ್ಚಿಯನ್‌ ಧರ್ಮದ ಪ್ರಕಾರ ಮದುವೆ ಆಗಿದ್ದರು. ಇನ್ನು ಮಗನಿಗೂ ಕೂಡ ಹಿಂದು, ಕ್ರಿಶ್ಚಿಯನ್‌ ಧರ್ಮದ ಪ್ರಕಾರ ನಾಮಕರಣ ಮಾಡಿದ್ದರು. ಆಗ ಕೆಲವರು ಕೊಂಕು ತೆಗೆದಿದ್ದರು. ಆಗ ಮೇಘನಾ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಉತ್ತರ ಕೊಟ್ಟಿದ್ದರು. “ರಾಯನ್‌ ಎನ್ನೋದು ಎಲ್ಲ ಧರ್ಮಕ್ಕೂ ಸಲ್ಲುತ್ತದೆ. ರಾಯನ್‌ ಅಂದ್ರೆ ಸಂಸ್ಕೃತದಲ್ಲಿ ರಾಜ ಎಂದರ್ಥ. ಮಾನವೀಯತೆ ಮೊದಲು ಎನ್ನೋದು ನನ್ನ ಮಗನಿಗೆ ಮೊದಲು ಅರಿವಿಗೆ ಬರಬೇಕು. ಅವನು ಕೂಡ ಯಾವುದು ಒಳ್ಳೆಯದೋ ಅದನ್ನೇ ಕಲಿಯಲಿ, ಬೆಳೆಯಲಿ” ಎಂದು ಅವರು ಹೇಳಿದ್ದಾರೆ. 

ಈ ಎಲ್ಲ ಸಿನಿಮಾಗಳನ್ನು ಮಾಡಿದ್ದರೆ ನಂ.1 ಸ್ಟಾರ್ ಆಗಿ ಇರ್ತಿದ್ರು ಪವನ್ ಕಲ್ಯಾಣ್.. ಆದರೆ ರಿಜೆಕ್ಟ್ ಮಾಡಿದ್ಯಾಕೆ?


ಶಾಲೆಗೆ ಹೋಗ್ತಿರುವ ಮಗ
ರಾಯನ್‌ ರಾಜ್‌ ಸರ್ಜಾ ಈಗ ಶಾಲೆಗೆ ಹೋಗುತ್ತಿದ್ದಾನೆ. ಇನ್ನು ತಾಯಿ ಜೊತೆ ಆಗಾಗ ಕನ್ನಡ ಚಿತ್ರರಂಗದ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಾನೆ. ಮೇಘನಾ ರಾಜ್‌ ಅವರು ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದು, ಅಲ್ಲಿ ರಾಯನ್‌ ರಾಜ್‌ ಸರ್ಜಾ ಅವರ ತುಂಟಾಟಗಳನ್ನು ನೋಡಬಹುದು.

ಚಿತ್ರರಂಗದಲ್ಲಿ ಬ್ಯುಸಿ ಆಗಲಿರೋ ಮೇಘನಾ ರಾಜ್!
ಮೇಘನಾ ರಾಜ್‌ ಅವರು ಇತ್ತೀಚೆಗೆ ಸಿನಿಮಾದಲ್ಲಿ ಬ್ಯುಸಿ ಆಗ್ತಿದ್ದಾರೆ. ಕನ್ನಡಕ್ಕಿಂತ ಜಾಸ್ತಿ ಮಲಯಾಳಂ ಚಿತ್ರರಂಗ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ ಎಂದು ಹೇಳಿದರೆ ತಪ್ಪೇನಿಲ್ಲ. ಅಂದಹಾಗೆ ಮೇಘನಾ ರಾಜ್‌ ಅವರು ಮಗುವಿಗೆ ಜನ್ಮ ಕೊಟ್ಟ ಬಳಿಕ, ಈಗ ತೂಕ ಇಳಿಸಿಕೊಳ್ತಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್‌ ಆಗಬಹುದು. ಇನ್ನು ಸಿನಿಮಾ ಕಥೆಗಳನ್ನು ಅವರು ಕೇಳಲು ಆರಂಭಿಸಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರಂತೆ.