ಮೇಘನಾ ರಾಜ್ ತಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ್ದು, ಕುಟುಂಬ ಮತ್ತು ಸ್ನೇಹಿತರು ಬೆಂಬಲವಾಗಿ ನಿಂತಿದ್ದಾರೆ. ಅರ್ಜುನ್ ಸರ್ಜಾ ತಂದೆಯ ಸ್ಥಾನದಲ್ಲಿ ನಿಂತು ಪ್ರೀತಿ ನೀಡುತ್ತಿದ್ದಾರೆ. ಧ್ರುವ ಸರ್ಜಾ ಮತ್ತು ಚಿರು ನಡುವಿನ ಬಾಂಧವ್ಯವನ್ನು ಮೇಘನಾ ನೆನಪಿಸಿಕೊಂಡಿದ್ದಾರೆ. ಚಿರು, ಧ್ರುವನ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಅವರು ಹೇಳಿದ್ದಾರೆ. ಅವರಿಬ್ಬರೂ ಸದಾ ಒಟ್ಟಿಗೆ ಇರಲು ಬಯಸುತ್ತಿದ್ದರು.

ಚಂದನವನದ ಸುಂದರಿ ಮೇಘನಾ ರಾಜ್‌ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಮದುವೆ ನಂತರ ಲೈಫ್‌ ಫುಲ್ ಕಲರ್‌ಫುಲ್ ಅಂದುಕೊಂಡ ನಟಿಗೆ ಬಿಗ್ ಟ್ವಿಸ್ಟ್‌ ಎದುರಾಗಿತ್ತು. ಗರ್ಭಿಣಿ ಆಗಿದ್ದ ಸಮಯದಿಂದ ಹಿಡಿದು ಇದುವರೆಗೂ ಮೇಘನಾ ರಾಜ್‌ಗೆ ಸಪೋರ್ಟ್ ಆಗಿ ನಿಂತಿರುವುದು ಫ್ಯಾಮಿಲಿ ಮತ್ತು ಸ್ನೇಹಿತರು. ಸರ್ಜಾ ಫ್ಯಾಮಿಲಿ ಕೂಡ ಎಂದಿದ್ದಾರೆ. ಮೇಘನಾ ಮತ್ತು ಅರ್ಜುನ್ ಸರ್ಜಾ ಬಾಂಡಿಂಗ್ ಹೇಗೆ ಎಂದು ಹಂಚಿಕೊಂಡಿದ್ದಾರೆ. 

'ನಮ್ಮ ಮನೆಯಲ್ಲಿ ನನ್ನ ತಂದೆ ತಾಯಿ ಹೇಗೋ ಚಿರು ಮನೆಯಲ್ಲಿ ಅರ್ಜುನ್ ಸರ್ಜಾ ಅಂಕಲ್‌ ಕೂಡ ನನಗೆ ಹಾಗೆನೇ. ನನಗೆ ಮತ್ತಷ್ಟು ತಂದೆ ತಾಯಿ ಪ್ರೀತಿಯನ್ನು ಪಡೆದುಕೊಂಡಿದ್ದೀನಿ. ತಂದೆ ತಾಯಿ ನನಗೆ ಎಷ್ಟು ಮುಖ್ಯವಾಗುತ್ತಾರೋ ಅರ್ಜುನ್ ಅಂಕಲ್ ಕೂಡ ಅಷ್ಟೇ ಮುಖ್ಯವಾಗುತ್ತಾರೆ. ಅರ್ಜಾ ಕುಟುಂಬದ ಜೊತೆ ನಾನು ಮೊದಲಿನಿಂದಲೂ ಹಾಗೆ ಇರುವುದು ..ಅರ್ಜುನ್ ಅಂಕಲ್ ನನಗೆ ತಂದೆ ಸ್ಥಾನದಲ್ಲಿ ನಿಲ್ಲುತ್ತಾರೆ' ಎಂದು ಮೇಘನಾ ರಾಜ್ ಹಲವು ತಿಂಗಳ ಹಿಂದೆ ನಡೆದ ಸಂದರ್ಶನದಲ್ಲಿ ಹೀಗೆ ಮಾತನಾಡಿದ್ದಾರೆ.

ಸೀರಿಯಲ್‌ನಲ್ಲಿ ಗೋಳಾಡೋದು ಇಲ್ಲಿ ಮಜಾ ಮಾಡೋದು; ಭಾವಿಪತ್ನಿ ಜೊತೆ ಶಮಂತ್‌ ಫೋಟೋ ವೈರಲ್

'ನಮ್ಮ ಸಂತೋಷದ ಫ್ಯಾಮಿಲಿ ಮೇಲೆ ದೃಷ್ಟಿ ಬಿದ್ದಿದೆ ಆ ದೃಷ್ಟಿ ಕಳೆಯುವುದಕ್ಕೆ ಆ ದೇವರಿಗೆ ಚಿರುನೇ ಬೇಕಿತ್ತು ಅನಿಸುತ್ತದೆ. ಎಲ್ಲಾ ರೀತಿ ಆಲೋಚನೆಗಳು ನಮಗೆ ಬಂದೇ ಬರುತ್ತದೆ. ಧ್ರುವ ಸರ್ಜಾ ಮತ್ತು ಚಿರು ತುಂಬಾನೇ ಚೆನ್ನಾಗಿದ್ದರು, ಧ್ರುವ ಶೂಟಿಂಗ್, ಸಂದರ್ಶನ ಅಥವಾ ಹೊರಗಡೆ ಎಲ್ಲೇ ಹೋಗಿದ್ರೂ ಮನೆಗೆ ಬಂದು ಊಟ ಮಾಡಿ ಮಲಗುವ ತನಕ ಚಿರು ಮಲಗುತ್ತಿರಲಿಲ್ಲ. ಕಡ್ಡಿ ಮನೆಗೆ ಬಂದ್ನಾ? ಕಡ್ಡಿ ಊಟ ಮಾಡಿದ್ದಾನಾ? ಅಂತ ವಿಚಾರಿಸಿಕೊಂಡು ಆನಂತರ ಮಲಗುತ್ತಿದ್ದರು. ಕೆಲವೊಂದು ಸಲ ನಾನೇ ಹೇಳಿದ್ದೀನಿ ಧ್ರುವ ಏನ್ ಚಿಕ್ಕ ಹುಡುಗನಾ ಬಿಡಿ ಅಂತ ಆಗ ಇಲ್ಲ ಇಲ್ಲ ನನ್ನ ತಮ್ಮ ನನಗೆ ಪುಟ್ಟ ಮಗುನೇ ಅವನು ಮುಗ್ಧ ಅವನಿಗೆ ಏನೂ ಗೊತ್ತಾಗುವುದಿಲ್ಲ ಎಂದು ಚಿರು ಹೇಳಿದ್ದಾರೆ. ಧ್ರುವಗೂ ಚಿರು ಮೇಲೆ ಅಷ್ಟೇ ಪ್ರೀತಿ ಮತ್ತು ಪ್ರಾಣ. ಅವರಿಬ್ಬರು ಸದಾ ಒಟ್ಟಿಗೆ ಇರಲು ಬಯಸುತ್ತಿದ್ದರು'ಎಂದು ಮೇಘನಾ ರಾಜ್ ಹೇಳಿದ್ದಾರೆ. 

ಬಿಗ್ ಬಾಸ್ ಅಂದ್ರೆನೇ ನಂಗೆ ಕೋಪ ಬರುತ್ತೆ; ex-ಸ್ಪರ್ಧಿ ಅಕ್ಷತಾ ಹೇಳಿಕೆ ವೈರಲ್