Asianet Suvarna News Asianet Suvarna News

ಡಾ. ರಾಜ್‌ಕುಮಾರ್ ಮಗಳು ಪೂರ್ಣಿಮಾ ಅನುಕರಿಸಿ 'ಬಜಾರಿ' ಪಾತ್ರ ಮಾಡಿದ್ರು ಮಂಜುಳಾ!

ಡಾ ರಾಜ್‌ಕುಮಾರ್ ಜೋಡಿಯಾಗಿ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ನಟಿಸಿದ್ದರು ಮಂಜುಳಾ. ಆ ಚಿತ್ರದಲ್ಲಿ 'ನನ್ನ ನೀನು ಗೆಲ್ಲಲಾರೆ..' ಹಾಡಿನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅದರಲ್ಲಿ ಬಜಾರಿಯಾಗಿ ಅಮೋಘವಾಗಿ ನಟಿಸಿದ್ದರು ಮಂಜುಳಾ. 

Kannada actress Manjula follows Dr Rajkumar daughter Poornima nature for her Sampathige Sawal movie role srb
Author
First Published Apr 28, 2024, 6:52 PM IST

ನಟಿ ಮಂಜುಳಾ ಸತ್ತು ಬರೋಬ್ಬರಿ 40 ವರ್ಷಗಳು ಕಳೆಯುತ್ತಾ ಬಂದರೂ ಕನ್ನಡ ಚಿತ್ರರಸಿಕರು ಅವರನ್ನು ಮರೆತಿಲ್ಲ. ಇಂದೂ ಕೂಡ ಹಳೆಯ ಚಿತ್ರಗೀತೆಗಳು ಅಥವಾ ವೀಡಿಯೋ ಮನೆಯ ತೆರೆಯಲ್ಲಿ ಮೂಡಿಬಂದು ಅದರಲ್ಲಿ ನಟಿ ಮಂಜುಳಾ ದರ್ಶನವಾದರೆ ಮುಖದಲ್ಲಿ ಮುಗುಳ್ನಗು ಮೂಡುತ್ತದೆ. ಕಾರಣ, ನೋಡಲು ಮುದ್ದುಮುದ್ದಾಗಿದ್ದ, ಬಜಾರಿ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದ ಮಂಜುಳಾರನ್ನು ಇಂದಿಗೂ ಸಿನಿಪ್ರೇಕ್ಷಕರು ಬಜಾರಿಯಾಗಿಯೇ ನೆನಪಿಸಿಕೊಳ್ಳುತ್ತಾರೆ. ಅದರಲ್ಲೂ ಮುಖ್ಯವಾಗಿ 'ಸಂಪತ್ತಿಗೆ ಸವಾಲ್ (Sampathige Sawal)'ಚಿತ್ರದಲ್ಲಿ ನಟಿ ಮುಂಜುಳಾರನ್ನು ಯಾರೂ ಮರೆಯಲು ಸಾಧ್ಯವಿಲ್ಲ. 

ಡಾ ರಾಜ್‌ಕುಮಾರ್ ಜೋಡಿಯಾಗಿ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ನಟಿಸಿದ್ದರು ಮಂಜುಳಾ. ಆ ಚಿತ್ರದಲ್ಲಿ 'ನನ್ನ ನೀನು ಗೆಲ್ಲಲಾರೆ..' ಹಾಡನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅದರಲ್ಲಿ ಬಜಾರಿಯಾಗಿ ಅಮೋಘವಾಗಿ ನಟಿಸಿದ್ದರು ಮಂಜುಳಾ. ಆದರೆ, ಅದರ ಹಿಂದಿನ ಸತ್ಯ ಸಂಗತಿ ಅನೇಕರಿಗೆ ತಿಳಿದಿಲ್ಲ. ಸ್ವಭಾವತಃ ನಟಿ ಮಂಜುಳಾ ಬಜಾರಿಯಲ್ಲ, ತುಂಬಾ ಸರಳ, ಸಂಕೋಚದ ಸ್ವಭಾವದ ಹೆಣ್ಣುಮಗಳು. ಆದರೆ ಆ ಚಿತ್ರದಲ್ಲಿ ನಟಿ ಮುಂಜಾಳರ ಅಭಿನಯ ಅದೆಷ್ಟು ಸಹಜವಾಗಿದೆ ಎಂದರೆ ಅವರು ಬಜಾರಿ ಗುಣದವರು ಅಲ್ಲ ಎಂದರೆ ನಂಬುವುದು ಕಷ್ಟ.

ವಿನೋದ್ ರಾಜ್ ಪತ್ನಿ ಅನುಗೆ ಚೆನ್ನೈನಲ್ಲಿದೆ ಭಾರೀ ಗಿಫ್ಟ್; ಲೀಲಾವತಿ ಮಗ ಕೊಟ್ಟಿದ್ದೇನು ನೋಡ್ರಿ!

ಆದರೆ, ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮುಂಜುಳಾ ಅವರಿಗೆ ಹಾಗೆ ನಟಿಸಲು ಸಹಾಯ ಮಾಡಿದ್ದು ಡಾ ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅಂದ್ರೆ ನಂಬಲೇಬೇಕು. ಕಾರಣ, ಮಂಜುಳಾ ಅವರು ಆ ಪಾತ್ರದ ಆಫರ್ ಬಂದಾಗ ಈ ರೀತಿ ನನಗೆ ಅಭಿನಯಿಸಲು ಕಷ್ಟ ಎಂದಿದ್ದರಂತೆ. ಆಗ ಡಾ ರಾಜ್‌ ಹಾಗೂ ಪಾರ್ವತಮ್ಮ ಅವರು 'ನೀನು ನಮ್ಮನೆಗೆ ಬಾ, ಹಾಗೇ ಸುಮ್ಮನೇ ನಮ್ಮ ಕಿರಿಯ ಮಗಳು ಪೂರ್ಣಿಮಾಳ (Poornima Rajkumar) ನಡವಳಿಕೆ ನೋಡಿ ಅದನ್ನೇ ಅನುಕರಿಸು ಸಾಕು. ನಿನಗೆ ಬಜಾರಿ ಪಾತ್ರಕ್ಕೆ ಇನ್ಯಾವ ಟ್ರೇನಿಂಗ್ ಕೂಡ ಬೇಡ' ಎಂದಿದ್ದರಂತೆ. 

ಲೈಫ್ ಕಂಪ್ಲೀಟ್ ಆಯಿತು, ಉಡುಪಿಗೆ ಬಂದಿದ್ದೇನೆ ಎಂದ ರಕ್ಷಿತ್ ಶೆಟ್ಟಿ, ಇನ್ನು ಸಿನ್ಮಾ ಮಾಡೋಲ್ವಾ?

ನಟಿ ಮಂಜುಳಾ ಅವರು ಡಾ ರಾಜ್‌ ದಂಪತಿಗಳು ಹೇಳಿದಂತೆ ಪೂರ್ಣಿಮಾರನ್ನು ನೋಡಿ ಅದನ್ನೇ ಅನುಕರಿಸಿ ಪಕ್ಕಾ ಬಜಾರಿಯಂತೆ ನಟಿಸಿ ಜನಮೆಚ್ಚುಗೆ ಗಳಿಸಿದರು. ಅದನ್ನು ತಾವು ಬದುಕಿದ್ದಾಗ ನಟಿ ಮಂಜುಳಾ ಅವರು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಅದೀಗ ಸೋಷಿಯಲ್ ಮೀಡಿಯಾ ಮೂಲಕ ಸಖತ್ ವೈರಲ್ ಆಗತೊಡಗಿದೆ. ಅಂದಹಾಗೆ, ನಟಿ ಮಂಜುಳಾ ಅವರು ಸಂಪತ್ತಿಗೆ ಸವಾಲ್, ಮೂಗನ ಸೇಡು, ಎರಡು ಕನಸು, ಗುರು ಶಿಷ್ಯರು, ಮಯೂರ, ಮಂಕು ತಿಮ್ಮ, ನೀ ನನ್ನ ಗೆಲ್ಲಲಾರೆ, ಹದ್ದಿನ ಕಣ್ಣು, ಸೀತಾರಾಮು, ಕಿಟ್ಟುಪುಟ್ಟು, ಧನಲಕ್ಷ್ಮಿ, ಸಿಂಗಾಪುರದಲ್ಲಿ ರಾಜಾಕುಳ್ಳ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಮದುವೆ ಬಗ್ಗೆ ಅಮ್ಮ ಕೋಪಗೊಂಡಾಗ ಪ್ರಭಾಸ್ ಹ್ಯಾಂಡಲ್‌ ಮಾಡೋದು ಹೀಗಂತೆ ನೋಡಿ!

Latest Videos
Follow Us:
Download App:
  • android
  • ios