ವಿನೋದ್ ರಾಜ್ ಪತ್ನಿ ಅನುಗೆ ಚೆನ್ನೈನಲ್ಲಿದೆ ಭಾರೀ ಗಿಫ್ಟ್; ಲೀಲಾವತಿ ಮಗ ಕೊಟ್ಟಿದ್ದೇನು ನೋಡ್ರಿ!

ನಿಧನರಾಗುವುದಕ್ಕೆ ಮೊದಲು ಒಮ್ಮೆ ಮಾತುಕತೆಯ ವೇಳೆ ನಟಿ ಲೀಲಾವತಿಯವರು 'ನೀವ್ಯಾಕೆ ನಮ್ಮ ಮಗನ ಮದುವೆಯನ್ನು ಗುಟ್ಟಾಗಿ ಇಟ್ಟಿದ್ರಿ?' ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. 'ನನಗೆ ಮದುವೆಯನ್ನು ಗುಟ್ಟಾಗಿ ಇಡುವ ಯಾವುದೇ ಅಗತ್ಯ ಇರಲಿಲ್ಲ...

Actress Leelavathi Son Vinod Raj built big house in Chennai for wife Anu

ನಟ ವಿನೋದ್ ರಾಜ್‌ (Vinod Raj) ಅವರು ಚೆನ್ನೈನಲ್ಲಿ ಹೆಂಡತಿಗಾಗಿ ಭವ್ಯ ಬಂಗಲೆ ನಿರ್ಮಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಎಂಟು ಎಕರೆ ವಿಸ್ತಾರದ ಜಾಗದಲ್ಲಿ ಒಂದು ಕಡೆ ಭವ್ಯವಾದ ಮನೆ ಇದ್ದು, ಅದು ತುಂಬಾ ಸುಂದರವಾಗಿದೆ ಎನ್ನಲಾಗಿದೆ. ವಿನೋದ್ ರಾಜ್ ಹೆಂಡತಿಯ ಹೆಸರು ಅನು ಹಾಗೂ ಮಗನ ಹೆಸರು ಯುವರಾಜ್‌. ಮಗ ಯುವರಾಜ್ ಚೆನ್ನೈನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ತಾಯಿಯೊಂದಿಗೆ ಆಗಾಗ ಬೆಂಗಳೂರಿನ ನೆಲಮಂಗಲದ ಮನೆಗೆ ಬಂದು ಹೋಗುತ್ತಿರುತ್ತಾರೆ. ವಿನೋದ್ ರಾಜ್‌ ಅಮ್ಮ, ಕನ್ನಡದ ಹಿರಿಯ ನಟಿ ಲೀಲಾವತಿ ಅಗಲಿದಾಗ ಸಹಜವಾಗಿಯೇ ವಿನೋದ್ ರಾಜ್ ಹೆಂಡತಿ ಹಾಗು ಮಗ ಬಂದಿದ್ದರು. 

ಕನ್ನಡದ ಹಿರಿಯ ನಟಿ ಲೀಲಾವತಿಯವರು (Leelavathi) 08 ಡಿಸೆಂಬರ್ 2023ರಂದು ಇಹಲೋಕ ತ್ಯಜಿಸಿದ್ದಾರೆ. ಆ ಸಮಯದಲ್ಲಿ ಮೀಡಿಯಾದವರ ಕಣ್ಣಿಗೆ ಬಿದ್ದ ವಿನೋದ್‌ ರಾಜ್ ಹೆಂಡತಿ ಹಾಗೂ ಮಗ ಮಾಧ್ಯಮದವರ ಜತೆ ಮಾತನ್ನೂ ಆಡಿದ್ದಾರೆ. ಸ್ಟಾರ್‌ಡಮ್‌ನ ಯಾವುದೇ ಹಮ್ಮುಬಿಮ್ಮು ಇಲ್ಲದೇ ಸಿಂಪಲ್‌ ಆಗಿ ಲೈಫ್ ಲೀಡ್ ಮಾಡುತ್ತಿರುವ ತಾಯಿ-ಮಗ, ಸುಸಂಸ್ಕ್ರುತ ರೀತಿಯಲ್ಲಿ ಮಾತನ್ನಾಡಿದ್ದರು. ಅಜ್ಜಿ ಲೀಲಾವತಿಗೆ ಮೊಮ್ಮಗ ಯುವರಾಜ್ ಎಂದರೆ ಅತೀವ ಪ್ರೀತಿ ಎಂಬುದು ಅಂದು ಜಗಜ್ಜಾಹೀರಾಗಿತ್ತು. ಸೊಸೆ ಅನು ಕೂಡ ಅತ್ತೆಯ ಬಗ್ಗೆ ಒಳ್ಳೆಯ ಮಾತನ್ನು ಆಡಿದ್ದರು. 

ಲೈಫ್ ಕಂಪ್ಲೀಟ್ ಆಯಿತು, ಉಡುಪಿಗೆ ಬಂದಿದ್ದೇನೆ ಎಂದ ರಕ್ಷಿತ್ ಶೆಟ್ಟಿ, ಇನ್ನು ಸಿನ್ಮಾ ಮಾಡೋಲ್ವಾ?

ನಿಧನರಾಗುವುದಕ್ಕೆ ಮೊದಲು ಒಮ್ಮೆ ಮಾತುಕತೆಯ ವೇಳೆ ನಟಿ ಲೀಲಾವತಿಯವರು 'ನೀವ್ಯಾಕೆ ನಮ್ಮ ಮಗನ ಮದುವೆಯನ್ನು ಗುಟ್ಟಾಗಿ ಇಟ್ಟಿದ್ರಿ?' ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. 'ನನಗೆ ಮದುವೆಯನ್ನು ಗುಟ್ಟಾಗಿ ಇಡುವ ಯಾವುದೇ ಅಗತ್ಯ ಇರಲಿಲ್ಲ. ನನಗೆ ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಪರಿಚಯ, ಎಲ್ಲರೂ ಆತ್ಮೀಯರೇ. ಕೆಲವರನ್ನು ಕರೆದು ಕೆಲವರನ್ನು ಬಿಡಲು ಆಗುವುದಿಲ್ಲ. ಎಲ್ಲರನ್ನೂ ಕರೆದು ಅದ್ದೂರಿಯಾಗಿ ಮಹಾ ಮದುವೆ ಮಾಡಿಸುವಷ್ಟು ಶಕ್ತಿ ನನಗಿಲ್ಲ. ಅದಕ್ಕೇ ಸಿಂಪಲ್ ಆಗಿ ಮಗನ ಮದುವೆಯನ್ನು ಕೆಲವೇ ಕುಟುಂಬದ ಆಪ್ತರ ಸಮ್ಮುಖದಲ್ಲಿ ಮಾಡಿ ಮುಗಿಸಿದ್ದೇನೆ' 

ಮದುವೆ ಬಗ್ಗೆ ಅಮ್ಮ ಕೋಪಗೊಂಡಾಗ ಪ್ರಭಾಸ್ ಹ್ಯಾಂಡಲ್‌ ಮಾಡೋದು ಹೀಗಂತೆ ನೋಡಿ!

ಜತೆಗೆ, ನಾನು ಏನೋ ಹೇಳಲು ಹೋದರೆ ಅದು ಇನ್ನೇನೋ ಅರ್ಥ ಪಡೆದುಕೊಂಡು ಯಾರೋ ಅದನ್ನು ಅಪಾರ್ಥ ಮಾಡಿಕೊಂಡು ತಿರುಗಿ ನಾನೇ ಅದಕ್ಕೆಲ್ಲಾ ಸ್ಪಷ್ಟೀಕರಣ ಕೊಡುತ್ತಾ ಇರಬೇಕಾಗುತ್ತದೆ. ಅದ್ಯಾವ ಸಮಸ್ಯೆಯೇ ಬೇಡ ಎಂದು ಯಾರಿಗೂ ಹೇಳಲಿಲ್ಲ. ಅದಕ್ಕಿಂತ ಮುಖ್ಯವಾಗಿ ನನ್ನ ಮಗನ ಮದುವೆಯ ಬಗ್ಗೆ ಯಾರೂ ಕೇಳಲಿಲ್ಲ, ಕೇಳಿದರೆ ಹೇಳುತ್ತಿದ್ದೆ. ಕೇಳದೇ ಹೇಳುವ ಜಾಯಮಾನ ನನ್ನದಲ್ಲ. ಸರಳವಾಗಿ ಬದುಕುವ ನಮ್ಮ ಬಗ್ಗೆ ಯಾರಿಗೂ ಅಂಥ ಆಸಕ್ತಿ ಇರುವುದೂ ಇಲ್ಲ. ಯಾರೂ ಕೇಳಲಿಲ್ಲ ನಾನೂ ಹೇಳಲಿಲ್ಲ ಎನ್ನಬಹುದು. ಈಗ ಕೇಳಿದ್ದಾರೆ, ಹೇಳಿದ್ದೇನೆ' ಎಂದು ಮಾರ್ಮಿಕವಾಗಿ ನುಡಿದಿದ್ದರು ನಟಿ ಲೀಲಾವತಿ.

ಕಮರ್ಷಿಯಲ್ ಸಿನಿಮಾಗಳೇ ಸೇಫ್‌ ಅಂದ್ರು ನಾನಿ, ರೀಸನ್‌ ಕೇಳಿದ್ರೆ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ!

Latest Videos
Follow Us:
Download App:
  • android
  • ios