Asianet Suvarna News Asianet Suvarna News

ಮದುವೆ ಬಗ್ಗೆ ಅಮ್ಮ ಕೋಪಗೊಂಡಾಗ ಪ್ರಭಾಸ್ ಹ್ಯಾಂಡಲ್‌ ಮಾಡೋದು ಹೀಗಂತೆ ನೋಡಿ!

ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗಿನ 'ವರ್ಷಂ' ಸಿನಿಮಾ ಮೂಲಕ ನಾಯಕನಟರಾಗಿ ಸಿನಿರಂಗಕ್ಕೆ ಅಡಿಯಿಟ್ಟ ಪ್ರಭಾಸ್, ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ.

Today is my bad day and yours too maa says prabhas for his marriage issue with mother srb
Author
First Published Apr 28, 2024, 12:20 PM IST

ನಟ ಪ್ರಭಾಸ್ (Prabhas) ಸಂದರ್ಶನವೊಂದರಲ್ಲಿ ತಮ್ಮ ತಾಯಿ ಹಾಗು ಮದುವೆ ಬಗ್ಗೆ ಮಾತನಾಡಿದ್ದಾರೆ. ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಪ್ರಭಾಸ್ 'ಯಾವತ್ತೂ ತಾಯಿಯ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟದ ಕೆಲಸ' ಎಂದಿದ್ದಾರೆ. 'ನಮ್ಮಮ್ಮ ಯಾವತ್ತೂ ಆ ಬಗ್ಗೆ, ಅಂದರೆ ನನ್ನ ಮದುವೆ ಬಗ್ಗೆ ಮಾತನಾಡುತ್ತಲೇ ಇರುವುದಿಲ್ಲ. ಆದರೆ, ಅವರ ಸ್ನೇಹಿತರು, ಬಂಧುಗಳು ಕೆಲವೊಮ್ಮ ಇಂಥ ವಿಷಯವನ್ನು ಮಾತನಾಡಿದಾಗ ಅಮ್ಮ ಮೂಡ್‌ ಔಟ್ ಆಗುತ್ತಾರೆ. ಆಗ ನಾನು ಕೆಲಸದಲ್ಲಿ ಇದ್ದರೂ ಕೂಡ ಥಟ್ಟನೆ ಕಾಲ್ ಮಾಡಿ 'ಬೇಗ ಮದುವೆ ಆಗು, ಎಲ್ಲರೂ ನಿನ್ನ ವಿಷಯವನ್ನೇ ಮಾತನಾಡುತ್ತಾರೆ ಎಂದು ಕೋಪಿಸಿಕೊಂಡು ಹೇಳುತ್ತಾರೆ' ಎಂದಿದ್ದಾರೆ. 

'ಅದಕ್ಕೆ ನೀವೇನು ಹೇಳುತ್ತೀರಿ' ಎಂಬ ಸಂದರ್ಶಕಿಯ ಪ್ರಶ್ನೆಗೆ 'ನಾನು ಕೆಲಸದ ವೇಳೆಯಲ್ಲಿದ್ದರೆ ಕೂಲಾಗಿ, ಇಂದು ನನ್ನ ಬ್ಯಾಡ್ ಡೇ ಹಾಗೂ ನಿನ್ನದೂ ಬ್ಯಾಡ್ ಡೇ ಅಮ್ಮಾ. ಇರಲಿ ಬಿಡು, ಆ ಬಗ್ಗೆ ಆಮೇಲೆ ಮಾತನಾಡೋಣ ಎಂದು ಸಮಾಧಾನವಾಗುವ ರೀತಿಯಲ್ಲಿ ಹೇಳಿ ಸುಮ್ಮನಾಗಿಬಿಡುತ್ತೇನೆ. ಆಮೇಲೆ ಅದು ಅಲ್ಲಿಗೇ ಮುಗಿಯುತ್ತದೆ. ಮುಂದೆ ಅದು ಇನ್ಯಾವತ್ತೋ ಸ್ಫೋಟಗೊಳ್ಳುತ್ತದೆ. ಅಲ್ಲಿಯವರೆಗೆ ನಾನು ಸೇಫ್‌' ಎಂದು ಹೇಳಿ ನಕ್ಕಿದ್ದಾರೆ ನಟ ಪ್ರಭಾಸ್. 

ಕಮರ್ಷಿಯಲ್ ಸಿನಿಮಾಗಳೇ ಸೇಫ್‌ ಅಂದ್ರು ನಾನಿ, ರೀಸನ್‌ ಕೇಳಿದ್ರೆ ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ!

ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗಿನ 'ವರ್ಷಂ' ಸಿನಿಮಾ ಮೂಲಕ ನಾಯಕನಟರಾಗಿ ಸಿನಿರಂಗಕ್ಕೆ ಅಡಿಯಿಟ್ಟ ಪ್ರಭಾಸ್, ಸಾಕಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ನಟ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರಲು ಕಾರಣ ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿ ಎಂದು ಘಂಟಾಘೋಷವಾಗಿ ಹೇಳಬಹುದು. ಪ್ರಭಾಸ್ ಅವರನ್ನು ಹೀರೋ ಮಾಡಿಕೊಂಡು ರಾಜಮೌಳಿಯವರು 'ಬಾಹುಬಲಿ' ಸಿನಿಮಾ ಮಾಡಿದ್ದಾರೆ. ಅದು ಸೂಪರ್ ಹಿಟ್ ಆಗಿ ದಾಖಲೆ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ. 

17ನೇ ವಯಸ್ಸಲ್ಲೇ ಅಸು ನೀಗಿದ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕನ್ನಡದಲ್ಲೂ ನಟಿಸಿದ್ದರು!

ಯಾವಾಗ ಬಾಹುಬಲಿ ಸಿನಿಮಾ ಅಷ್ಟೊಂದು ಸಕ್ಸಸ್ ಆಯಿತೋ ಆಗಲೇ ನಟ ಪ್ರಭಾಸ್ ಬೇರೆ ತೆಲುಗು ನಟರನ್ನು ಮೀರಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಆದರೆ ಆ ಬಳಿಕ ಅವರ ಮೂರು ಸಿನಿಮಾಗಳು ಸತತ ಸೋಲು ಕಾಣುವ ಮೂಲಕ ಕೆಳಗೆ ಕುಸಿದಿದ್ದರು. ಇತ್ತೀಚೆಗೆ ಬಿಡುಗಡೆಯಾದ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಮೂಲಕ ನಟ ಪ್ರಭಾಸ್ ಮತ್ತೆ ಸ್ಟಾರ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ ಪ್ರಭಾಸ್ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ವೃತ್ತಿಜೀವನದಲ್ಲಿ ಹಾವು ಏಣಿ ಆಟವನ್ನು ನೋಡಿದ್ದಾರೆ. 

ಡಾ ರಾಜ್ 'ಕಮಲಾ.. ಕಮಲಾ...' ಎಂದು ಕೂಗುತ್ತಾ ಸಾಯುತ್ತಿದ್ದರೆ ನಟಿ ಜಯಂತಿ ಬಿಕ್ಕಿಬಿಕ್ಕಿ ಅತ್ತಿದ್ದರಂತೆ!

Latest Videos
Follow Us:
Download App:
  • android
  • ios