Asianet Suvarna News Asianet Suvarna News

ಮಡಿಲಿನಲ್ಲಿ ಕೊನೆಯುಸಿರು ಬಿಟ್ಟ; ಚಿತ್ರರಂಗ ಬಿಡಲು ತಮ್ಮನ ಸಾವು ಕಾರಣ ಎಂದು ಕಣ್ಣೀರಿಟ್ಟ ಕಾರುಣ್ಯ ರಾಮ್

ಕಾರುಣ್ಯ ರಾಮ್‌ಗೆ ತಂಗಿ ಮಾತ್ರವಲ್ಲ ತಮ್ಮನಿದ್ದ. ವಿನಯ್ ಎಂದು ಕರೆಯುತ್ತಿರಲಿಲ್ಲ ಪಾಪು ಎನ್ನುತ್ತಿದ್ದ ಎಂದು ಕಣ್ಣೀರಿಟ್ಟ ಕಾರುಣ್ಯ ರಾಮ್.... 

Kannada Actress Karunya Ram talks about brother love vcs
Author
First Published Feb 5, 2023, 1:35 PM IST

ಕನ್ನಡ ಚಿತ್ರರಂಗದ ಬಬ್ಲಿ ಹುಡುಗಿ ಕಾರುಣ್ಯ ರಾಮ್‌ ಜೀವನದಲ್ಲಿ ಎಂದೂ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಕ್ಕ-ತಂಗಿ ಎಷ್ಟು ಚೆನ್ನಾಗಿದ್ದಾರೆ ಎಂದು ಕಾಮೆಂಟ್ ಮಾಡುವವರಿಗೆ ತಮ್ಮನ ಬಗ್ಗೆ ರಿವೀಲ್ ಮಾಡಿದ್ದಾರೆ. ಸ್ಪೆಷಲ್ ಚೈಲ್ಡ್‌ ಆಗಿದ್ದರೂ ಆತನಿಗೆ ಅಕ್ಕನೇ ಮುಖ್ಯ ಎಂದಿದ್ದಾರೆ. 

'ಚಿತ್ರರಂಗಕ್ಕೆ ನಾನು ಕಾಲಿಟ್ಟಾಗ ಅನೇಕರಿಗೆ ಗೊತ್ತಿತ್ತು ನನಗೆ ತಮ್ಮ ಇದ್ದಾನೆ ಎಂದು. ಆತನನ್ನು ಕಳೆದುಕೊಂಡಾಗ ನಾನು ಚಿತ್ರರಂಗವನ್ನು ಬಿಟ್ಟೆ, ಡಿಪ್ರೆಶನ್‌ಗೆ ಜಾರಿದ್ದೆ. ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೀನಿ...ನಾನು ಮೊದಲು ಹುಟ್ಟಿದ್ದು ಆನಂತರ ನನ್ನ ತಂಗಿ ಕೊನೆಯಲ್ಲಿ ನನ್ನ ತಮ್ಮ. ನನ್ನ ತಮ್ಮ ನನಗೆ ಫ್ರೆಂಡ್‌ ರೀತಿ ಹಾಗೂ ಮಗನ ರೀತಿ ಆತ ಸ್ಪೆಷಲ್‌ ಚೈಲ್ಡ್‌ ಆಗಿದ್ದೆ. ತಮ್ಮನನ್ನು ಕಳೆದುಕೊಂಡು 10 ವರ್ಷಗಳು ಆಗುತ್ತದೆ. ಒಂದು ದಿನವೂ ವಿನಯ್‌ ಎಂದು ಹೆಸರಿಟ್ಟು ಕರೆದಿಲ್ಲ ನಾವು ಪಾಪ ಪಾಪ ಎಂದು ಕರೆಯುತ್ತಿದ್ದೆ. ನಾನು ಅಂದ್ರೆ ಅವನಿಗೆ ಪಂಚಪ್ರಾಣ. ಬಾರ್ಬರ್‌ ಅಂಗಡಿ ಕರೆದುಕೊಂಡು ಹೋಗಲು ಆಗುತ್ತಿರಲಿಲ್ಲ ಏಕೆಂದರೆ ಅವನ ಬೆಳವಣಿಗೆ ಕೇವಲ 5 ವರ್ಷದ ಮಗುವಿನ ರೀತಿ, ತೀರಿಕೊಂಡಾಗ 17 ವರ್ಷ ಆಗಿತ್ತು. 10 ತಿಂಗಳ ಮಗು ರೀತಿ ನಡೆದುಕೊಳ್ಳುತ್ತಿದ್ದ ಎಲ್ಲಾ ಇದ್ದ ಜಾಗದಲ್ಲಿ ಆಗುತ್ತಿತ್ತು. ಅಮ್ಮ ಬಿಟ್ಟರೆ ಅವನಿಗೆ ಜಾಸ್ತಿ ಹತ್ರ ಅಂದ್ರೆ ನಾನೇ. ಅವನಿಗೆ ಗೊತ್ತಾಗುತ್ತಿದ್ದಿದ್ದು ಮೂರೇ ವಿಚಾರ...ನಮ್ಮ ಮನೆಯಲ್ಲಿ 24 ಗಂಟೆ ಟಿವಿ ಆನ್‌ ಇರಬೇಕಿತ್ತು ಆವನಿಗೆ ನಟಿ ಪ್ರೇಮಾ ಅಂದ್ರೆ ತುಂಬಾನೇ ಇಷ್ಟ, ವಿಷ್ಣುವರ್ಧನ್ ಸರ್ ಹಾಡುಗಳು ಬಂದ್ರೆ ಖುಷಿ ಪಡುತ್ತಿದ್ದೆ. ಪ್ರೇಮಾ ಬಿಟ್ಟರೆ ರಮ್ಯಾ ತುಂಬಾ ಇಷ್ಟ ಎನ್ನುತ್ತಿದ್ದ. ಅವನ ಹೇರ್‌ಕಟ್ ಮತ್ತು ನೇಲ್‌ ಕಟ್ ನಾನೇ ಮಾಡುತ್ತಿದ್ದೆ. ನಾನು ಬರುತ್ತಿದ್ದ ಸೌಂಡ್ ಕೇಳಿಸಿಕೊಂಡರು ಜೋರಾಗಿ ಕಿರುಚುತ್ತಿದ್ದ. ಅಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾನೆ ಅಂದುಕೊಂಡಿರಲಿಲ್ಲ. ಆತ ಸ್ಪೆಷಲ್ ಚೈಲ್ಡ್‌  ಕೆಮ್ಮು ಜಾಸ್ತಿ ಆಯ್ತು ಎಂತ ಆಸ್ಪತ್ರೆಗೆ ಸೇರಿಲಾಗಿತ್ತು ಅಲ್ಲಿ ಏನ್ ಏನೋ ಚಿಕಿತ್ಸೆ ಕೊಟ್ಟು..' ಎಂದು ಹೇಳುತ್ತಿದ್ದಂತೆ ಕಾರುಣ್ಯ ರಾಮ್ ಭಾವುಕರಾಗುತ್ತಾರೆ.

Kannada Actress Karunya Ram talks about brother love vcs

'ನನ್ನ ತಮ್ಮ ನನ್ನ ಮಡಿಲಿನಲ್ಲಿ ಉಸಿರು ಬಿಟ್ಟಿದ್ದು. ತಮ್ಮ ನಮ್ಮನ್ನು ಬಿಟ್ಟು ಹೋದ ಮೇಲೆ ಅದರಿಂದ ಹೊರ ಬರಲು ಆಗಲಿಲ್ಲ ಅದಿಕ್ಕೆ ಚಿತ್ರರಂಗ ಬಿಟ್ಟೆ. ಎಜುಕೇಶನ್ ಮಾಡೋಣ ಅಂದ್ರೆ ಅದು ಕೂಡ ಮಾಡಲು ನನಗೆ ಆಗುತ್ತಿರಲಿಲ್ಲ ಏಕೆಂದರೆ ಅಂದುಕೊಂಡಿರಲಿಲ್ಲ ಅಷ್ಟು ಲಾಸ್ ಆಯ್ತು ಆತನನ್ನು ಕಳೆದುಕೊಂಡು. ನಮ್ಮ ಇಡೀ ಕುಟುಂಬ ಬ್ರೇಕ್ ಡೌನ್ ಆಯ್ತು. ತಮ್ಮ ಒಂದು ಮಗು ರೀತಿ ಇದ್ದ ಅದಿಕ್ಕೆ ನನ್ನ ಮಗು ರೀತಿ ನೋಡಿಕೊಳ್ಳುತ್ತಿದ್ದೆ. ನನ್ನ ಫ್ಯಾಮಿಲಿಯಲ್ಲಿ ಪ್ರತಿಯೊಬ್ಬರು ಹೇಳುತ್ತಾರೆ ನಿನ್ನ ತಮ್ಮ ನಿನಗೆ ಮತ್ತೆ ಹುಟ್ಟಿ ಬರುತ್ತಾನೆ ಎಂದು. ದಿನವೂ ಅವನನ್ನು ನೆನಪಿಸಿಕೊಳ್ಳುವೆ. ತಮ್ಮ ನೋಡಲು ತುಂಬಾ ಚೆನ್ನಾಗಿದ್ದ. ಇದ್ದಿದ್ದರೆ ಚಿತ್ರರಂಗದ ಮೋಸ್ಟ್‌ ಹ್ಯಾಂಡ್ಸಮ್‌ ನಟ ಆಗಿರುತ್ತಿದ್ದ. ಚಿತ್ರರಂಗಕ್ಕೆ ನಾನು ಪ್ರವೇಶಿಸಿದಾಗ 16 ವರ್ಷ. ನನ್ನುನ್ನು ಟಿವಿಯಲ್ಲಿ ನೋಡಿ ಅಕ್ಕ ಬರ್ತಿದ್ದಾಳೆ ಅಂತ ಅಷ್ಟು ಖುಷಿ ಪಡುತ್ತಿದ್ದ. ಡ್ರೀಮ್‌ ಗರ್ಲ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದ ಅಕ್ಕ ಗೆಲ್ಲಬೇಕು ಎಂದು ಹಠ ಮಾಡುತ್ತಿದ್ದ. ಎರಡನೇ ಸ್ಥಾನ ಪಡೆದುಕೊಂಡಿದ್ದೆ ಆದರೆ ತಮಾಷೆ ಮಾಡಬೇಕು ಎಂದು ಸೋತೆ ಎಂದು ಸುಳ್ಳು ಹೇಳಿದ್ದೆ ಆಗ ತುಂಬಾ ಅತ್ತಿದ್ದ ನಾನು ಮನೆಗೆ ಬಂದು ಸತ್ಯ ಹೇಳುವವರೆಗೂ ಸಮಾಧಾನ ಮಾಡುವುದು ಕಷ್ಟವಾಯ್ತು' ಎಂದು ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಕಾರುಣ್ಯ ಮಾತನಾಡಿದ್ದಾರೆ.

60 ಸಾವಿರ ಟಿಬೆಟಿಯನ್ ಮಾಸ್ಟಿಫ್ ನಾಯಿ ಖರೀದಿಸಿದ ಕಾರುಣ್ಯಾ!

Follow Us:
Download App:
  • android
  • ios