60 ಸಾವಿರ ಟಿಬೆಟಿಯನ್ ಮಾಸ್ಟಿಫ್ ನಾಯಿ ಖರೀದಿಸಿದ ಕಾರುಣ್ಯಾ!
ಮತ್ತೊಂದು ದುಬಾರಿ ನಾಯಿ ಖರೀದಿಸಿದ ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
2010ರಲ್ಲಿ ಸೀನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಕಾರುಣ್ಯಾ ರಾಮ್ ಇದೀಗ ಹೊಸ ನಾಯಿ ಮರಿ ಖರೀದಿಸಿದ್ದಾರೆ.
ನಟಿ ಕಾರುಣ್ಯಾ ರಾಮ್ ಇದೀಗ ಟಿಬೆಟಿಯನ್ ಮಾಸ್ಟಿಫ್ ನಾಯಿ ಮರಿಯನ್ನು ಖರೀದಿಸಿದ್ದಾರೆ. ಕಪ್ಪು ಮತ್ತು ಬ್ರೌನ್ ಬಣ್ಣದಲ್ಲಿ ಈ ನಾಯಿ ಮರಿ ಇದೆ.
ಮೇಕಪ್ ಇಲ್ಲದ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಾರುಣ್ಯಾ ತಮ್ಮ ನಾಯಿ ಮರಿ ಜೊತೆ ಫೋಟೋ ಹಂಚಿಕೊಂಡು, ನಮ್ಮ ಮನೆಗೆ ಸ್ವಾಗತ ಭಗೀರ ಎಂದು ಬರೆದುಕೊಂಡಿದ್ದಾರೆ.
ಈ Tibetan Mastiff ನಾಯಿ ಮರಿ ಸುಮಾರು 45ರಿಂದ 72 ಕೆಜಿ ತೂಕ ಇದು, 60 ಸಾವಿರ ರೂಪಾಯಿಯಿಂದ 1 ಲಕ್ಷದ ವರೆಗೂ ಇರ ಬೆಲೆ ಇದೆ.
ಈ ನಾಯಿಗೆ 10 ರಿಂದ 14 ವರ್ಷ ಲೈಫ್ ಸ್ಪ್ಯಾನ್ ಇದ್ದು ಸುಮಾರು 4ರಿಂದ 7 ಮರಿಗಳನ್ನು ಹಾಕಬಹುದು. ಮರಿ ಇದ್ದಾಗ ನೋಡಲು ಮುದ್ದಾಗಿರುತ್ತದೆ.
ಕೆಲವು ದಿನಗಳ ಹಿಂದೆ ಕಾರುಣ್ಯಾ ರಾಮ್ ಹೊಸ ಮನೆ ಕಟ್ಟಿಸಿ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿಸಿದ ನಂತರ ಎರಡು ಐಷಾರಾಮಿ ಕಾರುಗಳನ್ನು ಖರಿದಿಸಿದ್ದರು.