3 ದಿನಗಳ ಕ್ವಾರಂಟೈನ್ ನಂತರ ಕೊರೋನಾ ಆಗಿದೆ ಎಂದು ಹಂಚಿಕೊಂಡ ನಟಿ ಹಿತಾ.
ಕೊರೋನಾ (Covid19) ಮೂರನೇ ಅಲೆ ಏಳುತ್ತಿರುವ ಕಾರಣ ಕರ್ನಾಟಕದಲ್ಲಿ (Karnataka) ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್‌ಡೌನ್ (Weekend Lockdown) ಜಾರಿಗೊಳ್ಳಿಸಿದ್ದಾರೆ. ಬಾಲಿವುಡ್‌ನಲ್ಲಿ (Bollywood) ಬಹುತೇಕ ಸ್ಟಾರ್ ನಟ, ನಟಿಯರಿಗೆ ಕೊರೋನಾ ಬಂದಿತ್ತು. ಈಗ ಸ್ಯಾಂಡಲ್‌ವುಡ್‌ನಲ್ಲಿ ಒಬ್ಬೊಬ್ಬರಿಗೇ ಈ ವೈರಸ್ ಒಕ್ಕರಿಸುತ್ತಿದೆ. ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸೋಂಕಿನ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸುಮಾರು 6 ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಹಿತಾ ಚಂದ್ರಶೇಖರ್ (Hitha Chandrashekar) ಅನೇಕ ಜಾಹೀರಾತುಗಳಲ್ಲಿ (Advertisment) ಕಾಣಿಸಿಕೊಂಡಿದ್ದಾರೆ. ಈಗ ಅವರಿಗೆ ಕೊರೋನಾ ಸೋಂಕು ತಗುಲಿದೆ. 'ನನಗೆ ಕೊರೋನಾ ಪಾಸಿಟಿವ್, ಸಣ್ಣ ಪುಟ್ಟ ಲಕ್ಷಣಗಳು (Symptoms) ಕಾಣಿಸಿಕೊಂಡಿವೆ. ವ್ಯಾಕ್ಸಿನ್ ತೆಗೆದುಕೊಂಡಿರುವುದಕ್ಕೆ ಸಹಾಯವಾಯಿತು, ವ್ಯಾಕ್ಸಿನ್‌ಗೆ (Vaccine) ಧನ್ಯವಾದಗಳು. ನಾನು ಮೂರು ದಿನಗಳಿಂದ ಐಸೋಲೇಟ್ (Isolate) ಆಗಿದ್ದೀನಿ. ಕೊರೋನಾ ಟೆಸ್ಟ್ ರಿಸಲ್ಟ್ ಬಂದು ಮೂರು ದಿನಗಳಾಗಿತ್ತು. ದೇವರ ದಯೆ ನಾನು ಹೆಚ್ಚಿನ ಜನರನ್ನು ಭೇಟಿ ಮಾಡಿಲ್ಲ, ನನ್ನಿಂದ ಬೇರೆ ಅವರಿಗೆ ತಗಲುವ ಹಾಗೆ ನಾನು ಮಾಡಿಲ್ಲ. ದಯವಿಟ್ಟು ಮಾಸ್ಕ್ (Mask) ಧರಿಸಿ, ವ್ಯಾಕ್ಸಿನ್ ಹಾಕಿಸಿಕೊಳ್ಳಿ ಹಾಗೂ ಎಲ್ಲಾ ರೀತಿಯ ಕೋವಿಡ್ ರೂಲ್ಸ್ ಫಾಲೋ ಮಾಡಿ, ಮುನ್ನೆಚ್ಚರಿಕೆ ವಹಿಸಿ,' ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

ಮನೆಯಲ್ಲಿಯೇ ಐಸೋಲೇಟ್ ಆಗಿರುವ ಹಿತಾ ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದಾರೆ. ತಾವು ಏನೆಲ್ಲಾ ಮಾಡಿದ್ದಾರೆ, ಏನು ಮಾಡುತ್ತಿದ್ದಾರೆ ಹಾಗೇ ದಿನ ಸಾಗಿಸಲು ಏನು ಮಾಡಲಿದ್ದಾರೆ ಎಂಬುದನ್ನೂ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್ (Hollywood) ಜನಪ್ರಿಯ ಐಕಾನ್‌ಗಳಾದ ಕೆರ್ಡಾಶಿಯನ್ (Kerdashian) ಮತ್ತು ಜೆನ್ನರ್ಸ್ (Jenners) ಅವರ ವಿಡಿಯೋ ಮತ್ತು ಸಿನಿಮಾಗಳನ್ನು ನೋಡುತ್ತಿದ್ದಾರಂತೆ. ಹೀಗಾಗಿ ನಿಮ್ಮಿಂದ ನನ್ನ ಐಸೋಲೇಷನ್ ಬೆಟರ್ ಆಗಿದೆ ಎಂದಿದ್ದಾರೆ ಹಿತಾ.
ಟ್ರಿಪ್ ಎಂಜಾಯ್ ಮಾಡುತ್ತಿರುವ Hita Chandrashekar, ಬ್ಯೂಟಿಫುಲ್ ಫೋಟೋಗಳಿವು!
ಕೆಲವು ದಿನಗಳ ಹಿಂದೆ ನಟಿ ನಿಶ್ವಿಕಾ ನಾಯ್ಡುಗೂ (Nishvika Naidu) ಕೊರೋನಾ ಪಾಸಿಟಿವ್ ಆಗಿದೆ ಎಂದು ಬರೆದುಕೊಂಡಿದ್ದರು. 'ಹಾಯ್ ನನಗೆ ಕೊರೋನಾ ಪಾಸಿಟಿವ್ (Covid19 positive) ಆಗಿದೆ. ಮೈಲ್ಡ್ ಲಕ್ಷಣಗಳು ಕಾಣಿಸಿಕೊಂಡಿವೆ. ನಾನು ಈಗ ಐಸೋಲೇಟ್ (Isolate) ಆಗಿದ್ದೀನಿ, ವೈದ್ಯರು ನೀಡುವ ಸೂಚನೆಯನ್ನು ಪಾಲಿಸುತ್ತಿರುವೆ. ಯಾರೆಲ್ಲಾ ನನ್ನ ಸಂಪರ್ಕಕ್ಕೆ ಬಂದಿದ್ದೀರೋ, ಅವರು ದಯವಿಟ್ಟು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ,' ಎಂದು ಬರೆದುಕೊಂಡಿದ್ದಾರೆ.
ಮುಂಬೈ ಪ್ರತಿಭಾವಂತರಿಗೆ ಒಳ್ಳೆಯ ಜಾಗ: ಹಿತಾ ಚಂದ್ರಶೇಖರ್

ಇದಕ್ಕೂ ಹಿಂದೆ ನಟ ಅರ್ಜುನ್ ಸರ್ಜಾಗೆ (Arjun Sarja) ಕೊರೊನಾ ಪಾಸಿಟಿವ್ ಆಗಿತ್ತು. ಅವರು ಕೂಡ ಹೋಮ್ ಐಸೋಲೇಷನ್‌ನಲ್ಲಿದ್ದರು. ಚೇತರಿಸಿಕೊಂಡು ಮನೆಗೆ ಹಿಂದಿರುಗಿದ ನಟನನ್ನು ಇಬ್ಬರು ಹೆಣ್ಣು ಮಕ್ಕಳು, ಕೊರೋನಾ ವಾರಿಯರ್ ಆಗಿ ಆಗಮಿಸಿದ್ದೀರಿ, ಎಂದು ವೆಲ್ಕಂ ಮಾಡಿದ್ದರು. ಈ ವಿಡಿಯೋವನ್ನು ಅರ್ಜುನ್ ಹಂಚಿಕೊಂಡು ಮಕ್ಕಳಿಗೆ ಧನ್ಯವಾಗಳನ್ನು ತಿಳಿಸಿದ್ದರು. ಕೆಲವು ದಿನಗಳ ಹಿಂದೆ ಹಿರಿಯ ನಟ ಜೈ ಜಗದೀಶ್ (Jai Jagadish) ಹಿರಿಯ ಪುತ್ರಿ ವೈಭವಿಗೂ (Vaibhavi) ಕೊರೋನಾ ತಗುಲಿದೆ ಎನ್ನಲಾಗಿತ್ತು. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಕ್ವಾರಂಟೈನ್ ಹೇಗಿದೆ ಎಂದು ಹಂಚಿಕೊಂಡಿದ್ದರು.ಯಾವೆಲ್ಲಾ ಟಿವಿ ಸೀರಿಸ್ ನೋಡುತ್ತಿದ್ದಾರೆ ಎಂಬುದನ್ನೂ ಹಂಚಿಕೊಳ್ಳುತ್ತಿದ್ದಾರೆ.
