ಬಟ್ಟೆ ಸರಿಯಾಗಿ ಹಾಕೋ, ನೀನು ಎಂಥವಳು; ಕಾಲೆಳೆದವರಿಗೆ ಟಾಂಗ್ ಕೊಟ್ಟ ಚೈತ್ರಾ ಆಚಾರ್

ಪದೇ ಪದೇ ಸುದ್ದಿಯಾಗುತ್ತಿರುವ ಚೈತ್ರಾ ಆಚಾರ್‌ ಟ್ರೋಲ್ ಮಾಡುವವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಕಿವಿ ಮಾತು ಹೇಳಿದ್ದಾರೆ. 

Kannada actress Chaithra Achar talks about trolls on social media vcs

ಟೋಬಿ ಚಿತ್ರದ ಮೂಲಕ ವಾರೆ ವಾ...ಸೂಪರ್ ಆಕ್ಟಿಂಗ್‌ ಗುರು ಅಂತ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿರುವ ಚೈತ್ರಾ ಆಚಾರ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಾರೆ. ಅಲ್ಲದೆ ಚೈತ್ರಾ ಧರಿಸುವ ಬಟ್ಟೆಗಳ ಬಗ್ಗೆ ಕೀಳಾಗಿ ಮಾತನಾಡುವವರೂ ಇದ್ದಾರೆ. ಹೀಗಾಗಿ ಟ್ರೋಲ್ ಮತ್ತು ಮೀಮ್ಸ್‌ ಮಾಡುವವರಿಗೆ ಚೈತ್ರಾ ಉತ್ತರ ಕೊಟ್ಟಿದ್ದಾರೆ. 

'ನಿಮಗೆ ಕೆಲಸ ಇಲ್ವಾ ಮನೆ ಇಲ್ವಾ ಅಥವಾ ನೀವು ಏನ್ ಮಾಡುತ್ತಿದ್ದರೂ ಆಗ್ತಿಲ್ವಾ? ಅವಾಗ ನೀವು ಚೆನ್ನಾಗಿ ಮಾಡುತ್ತಿರುವುದನ್ನು ನೋಡಿದರೆ ಅದು ಹೇಗೆ ಅವರಿಗೆ ಸರಿಯಾಗಿ ಕೆಲಸ ನಡೆಯುತ್ತಿದೆ ಅನ್ನೋ ಯೋಚನೆ ಬರುತ್ತೆ. ನೀನು ಬಟ್ಟೆ ಸರಿಯಾಗಿ ಹಾಕಿಲ್ಲ, ನೀನು ಏನು ದೊಡ್ಡ ಇದಾ ಅಂತ ಕಾಮೆಂಟ್ ಮಾಡುತ್ತಾರೆ ಅಲ್ವಾ...ಅದು ಜನರ ಇನ್‌ಸೆಕ್ಯೂರಿಟಿಗಳು. ಇಷ್ಟ ಆದ್ರೆ ಒಳ್ಳೆ ಕಾಮೆಂಟ್ ಮಾಡಿ ಸುಮ್ಮನಾಗಬೇಕು ಇಷ್ಟ ಆಗಿಲ್ವಾ ಸ್ಕೂರ್ ಮಾಡಿಬಿಡಿ ಆಗ ನಿಮ್ಮ ಎನರ್ಜಿ ಉಳಿಯುತ್ತದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿ ಪೇಜ್ ಓಪನ್ ಮಾಡಿ Slut ಶೇಮ್ ಮಾಡುವುದು, ನೀನು ಎಂಥವನು ಗೊತ್ತಾ ಅಂತ ಹೇಳುವುದಕ್ಕೆ ಎಷ್ಟು ಎನರ್ಜಿ ಬೇಕು. ನನಗೆ ಟೈಮ್‌ ಇಲ್ಲ ನಾನು ಕಾಮೆಂಟ್ ಮಾಡಲ್ಲ' ಎಂದು ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಚೈತ್ರಾ ಮಾತನಾಡಿದ್ದಾರೆ.

ಅಬ್ಬಬ್ಬಾ!! ಲೆಸ್ಬಿಯನ್ ಅವತಾರದಲ್ಲಿ ಚೈತ್ರಾ ಆಚಾರ್‌?

'ಒಂದು ಸಮಯ ಆದ್ಮೇಲೆ ಅವರು ಎದುರಿಗೆ ಬಂದು ಏನೇ ಹೇಳಿದರೂ ನನಗೆ ಮ್ಯಾಟರ್ ಆಗುವುದಿಲ್ಲ. ಈ ಸಣ್ಣ ಪುಟ್ಟ ವಿಚಾರಗಳು ನಮ್ಮನ್ನು ಸ್ಟ್ರಾಂಗ್ ಮಾಡುತ್ತದೆ ಹೀಗಾಗಿ ಸೂಪರ್ ಸ್ಟಾರ್‌ಗಳು ಅಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವುದು. ಅವರಿಗೆ ಹೊಗಳಿದರೂ ಏನೂ ಅನಿಸುವುದಿಲ್ಲ ತೆಗಳಿದರೂ ಏನು ಅನಿಸುವುದಿಲ್ಲ.  ನನ್ನ ಜೀವನದ ಮೊದಲ ಅವಾರ್ಡ್‌ ಕಾರ್ಯಕ್ರಮ ನಡೆಯುತ್ತಿದೆ ಆಗ ತುಂಬಾ ಖುಷಿಯಾಗಿರುವೆ ಆದರೆ ಆ ಸಮಯದಲ್ಲಿ ವೈರಲ್ ಆಗಿದ್ದು ಬೇರೆ. ನನಗೆ ಹಾಡಲು ಇಷ್ಟ ಹೀಗಾಗಿ ಜನಪದ ಹಾಡು ಸೋಜುಗದ ಸೂಜು ಮಲ್ಲಿಗೆ ಹಾಡಿದ್ದೀನಿ.....ನಾನು ಫಿಟ್ ಆಗಿರುವ ನನ್ನ ದೇಹದ ಬಗ್ಗೆ ಕಾಳಜಿ ವಹಿಸುತ್ತೀನಿ ಹೀಗಾಗಿ ನನಗೆ ಖುಷಿ ಕೊಡುವ ರೀತಿಯಲ್ಲಿ ಒಂದು ಗೌನ್ ಡಿಸೈನ್ ಮಾಡಿಸಿದ್ದೆ ಅದರಲ್ಲಿ ಕ್ಲೀವೇಜ್‌ ಕಾಣಿಸುತ್ತದೆ. ಹಾಡಿದ್ದು ದೇವರ ಹಾಡು ಈಗ ಹಾಕಿರುವ ಬಟ್ಟೆ ನಮ್ಮ ಸಂಸ್ಕೃತಿನಾ ಎಂದು ಕಾಮೆಂಟ್ ಮಾಡಿದ್ದಾರೆ. ನನ್ನ ಸಂಸ್ಕೃತಿ ಏನು ಅಂತ ನನಗೆ ಗೊತ್ತು...ಹೀಗೆ ಕಾಮೆಂಟ್ ಮಾಡುತ್ತಿರುವ ನಿನಗೆ ನಿಮ್ಮ ಸಂಸ್ಕೃತಿ ಗೊತ್ತಿಲ್ವಾ' ಎಂದು ಚೈತ್ರಾ ಆಚಾರ್ ಹೇಳಿದ್ದಾರೆ. 

ನಟಿ ಚೈತ್ರಾ ಆಚಾರ್ ಕೈಯಲ್ಲಿ ಸಿಗರೇಟ್ ನೋಡಿ ಗಾಬರಿ ಆದ ನೆಟ್ಟಿಗರು!

'ಈ ಘಟನೆ ನಡೆದಾಗ ನನಗೆ 13 ಸಾವಿರ ಫಾಲೋವರ್ಸ್‌ ಇದ್ದರು ...ಅಲ್ಲಿಂದ ನನ್ನ ಅಕೌಂಟ್‌ಗೆ 3.7 ಮಿಲಿಯನ್ ಜನರು ನನ್ನ ಖಾತೆ ಓಪನ್ ಮಾಡಿದ್ದಾರೆ 8 ಸಾವಿರ ಜನರು ಫೋಟೋ ಸೇವ್ ಮಾಡಿದ್ದಾರೆ 4 ಸಾವಿರ ಜನರಿಗೆ ಶೇರ್ ಮಾಡಿದ್ದಾರೆ. ಮಾಡೋದು ಎಲ್ಲಾ ಅನಾಚಾರ ಆದರೆ ಮನೆ ಮುಂದೆ ಬೃಂದಾವನ ಅನ್ನೋ ಹಾಗೆ ಜನರು ಅಂತ ತಿಳಿಯಿತ್ತು. ನನ್ನ ಕೆಲಸ ಮೆಚ್ಚಿಕೊಂಡವರು ಹೊಗಳಿದ್ದಾರೆ ಆಗದೇ ಇರುವವರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ ಅಂತ ನನಗೆ ನಾನೇ ತಿಳಿದುಕೊಂಡು ಸುಮ್ಮನಾದೆ' ಎಂದಿದ್ದಾರೆ ಚೈತ್ರಾ ಆಚಾರ್. 

Latest Videos
Follow Us:
Download App:
  • android
  • ios