ನಟಿ ಚೈತ್ರಾ ಆಚಾರ್ ಕೈಯಲ್ಲಿ ಸಿಗರೇಟ್ ನೋಡಿ ಗಾಬರಿ ಆದ ನೆಟ್ಟಿಗರು!
ಚೈತ್ರಾ ಆಚಾರ್ ಬೋಲ್ಡ್ ಫೋಟೋಶೂಟ್ ನೋಡಿ ಶಾಕ್ ಆದ ನೆಟ್ಟಿಗರು. ಕಾಮೆಂಟ್‌ಗಳು ಸಖತ್ ವೈರಲ್.....

ಟೋಬಿ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರ ಗಮನ ಸೆಳೆದ ಚೈತ್ರಾ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಬೋಲ್ಡ್ ಪಾತ್ರ ಮಾಡಿರುವ ಚೈತ್ರಾ ಆಚಾರ್ ನಿಜ ಜೀವನದಲೂ ಸಖತ್ ಬೋಲ್ಡ್ ಎನ್ನಬಹುದು.
ಕೆಲವು ದಿನಗಳ ಹಿಂದೆ ಚೈತ್ರಾ ಆಚಾರ್ ಫೋಟೋಶೂಟ್ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ ಅಭ್ಯಾಸ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದರು.
ಅಂಜನ್ ಕುಮಾರ್ ಈ ಫೋಟೋಗಳನ್ನು ಸೆರೆ ಹಿಡಿದಿದ್ದು, ಚೈತ್ರಾ ಆಚಾರ್ ಜೊತೆ ಫೋಟೋದಲ್ಲಿ ಕಾಣಿಸಿಕೊಂಡಿರುವುದು ದೀಕ್ಷಾ ಕೃಷ್ಣ.
'ಸ್ಮೂಕಿಂಗ್ ಕಿಲ್ಸ್. ಶೂಟ್ ಮಾಡಲು ಅದನ್ನು ಕೇವಲ ವಸ್ತುವಾಗಿ ಬಳಸಲಾಗಿದೆ. ಈ ಮೂಲಕ ಧೂಮಪಾನ ಮಾಡಿ ಎಂದು ಪ್ರಚೋದನೆ ನೀಡುತ್ತಿಲ್ಲ' ಎಂದು ಚೈತ್ರಾ ಹೇಳಿದ್ದಾರೆ.
ಈ ಫೋಟೋ ಹಾಕಲು ಕಾರಣವೇನು? ಈ ಫೋಟೋ ಮೂಲಕ ಯಾವ ರೀತಿ ಸಂದೇಶ ನೀಡುತ್ತಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಸದ್ಯ ಚೈತ್ರಾ ಆಚಾರ್ ಕೈಯಲ್ಲಿ ಸ್ಟ್ರಾಬೆರಿ, ಬ್ಲಿಂಕ್ ಮತ್ತು ಹ್ಯಾಪಿ ಬರ್ತಡೇ ಟು ಮಿ ಸಿನಿಮಾವಿದು. ಎಲ್ಲವೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ ಎಂದು ಇಂಟರ್‌ನೆಟ್‌ನಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.