ಒಂದೇ ಸಿನಿಮಾದಲ್ಲಿ ದರ್ಶನ್-ಸುದೀಪ್, ಡೈರೆಕ್ಟರ್‌ & ಪ್ರೊಡ್ಯೂಸರ್ ಫಿಕ್ಸ್ ಆಯ್ತು...!?

ಈಗ ಅಂತಹದ್ದೊಂದು ಸದಾವಕಾಶ ಕನ್ನಡ ಸಿನಿಪ್ರೇಕ್ಷಕರ ಪಾಲಿಗೆ ಒದಗಿ ಬರಲಿದೆ ಎನ್ನಲಾಗುತ್ತಿದೆ. ದರ್ಶನ್-ಸುದೀಪ್ ಒಟ್ಟಾಗಿ ಸದ್ಯದಲ್ಲೇ ಸಿನಿಮಾ ಮಾಡಲಿದ್ದಾರೆ. ಅದೂ ಕೂಡ ಅಂತಿಂಥ ಸಿನಿಮಾ ಅದಲ್ಲ.. ಬಹುಭಾಷೆಗಳಲ್ಲಿ ಸಿನಿಮಾ ಮಾಡಿ, ಕೋಟಿ ಕೋಟಿ ಸುರಿಯುವ ಕನ್ನಡ ಮೂಲದ ..

Kannada actors darshan and kichcha sudeep to act together in Kannada movie srb

ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್ (Kichcha Sudeep) ಹಾಗೂ ದರ್ಶನ್ (Darshan) ಅವರಿಬ್ಬರೂ ಜೊತೆಯಲ್ಲಿ ವೇದಿಕೆ ಮೇಲೆ ನಿಂತಿದ್ದರು. ಅವರಿಬ್ಬರ ಫ್ಯಾನ್ಸ್ ಅದನ್ನು ಕಣ್ತುಂಬಿಕೊಂಡಿದ್ದರು. ಆಗ ಹಲವರು 'ಹೀರೋಗಳು ಅಂದ್ರೆ ಹೀಗಿರಬೇಕು. ಇಬ್ಬರೂ ಅದೆಷ್ಟು ಹೈಟ್, ಎಂತಹ ಪರ್ಸನಾಲಿಟಿ, ಮೇಕಪ್ ಮಾಡದಿದ್ದರೂ ಸುಂದರವಾಗಿ ಕಾಣುವಂಥ ಮೈಬಣ್ಣ, ರಾಜ, ಮಿಲ್ಟ್ರಿ ಮ್ಯಾನ್, ಪೊಲೀಸ್ ಹೀಗೆ ಎಲ್ಲಾ ಪಾತ್ರಗಳಿಗೂ ಹೊಂದಿಕೆ ಆಗುವಂತಹ ಮುಖ, ನಾಯಕರು ಅಂದರೆ ಹೀಗಿರಬೇಕು' ಎಂದಿದ್ದರು. 

ಆ ಸಮಯದಲ್ಲಿ ದರ್ಶನ್ ಹಾಗೂ ಸುದೀಪ್ ಈ ಇಬ್ಬರ ನಟರ ಫ್ಯಾನ್ಸ್‌ಗಳು ತುಂಬಾ ಒಗ್ಗಟ್ಟಿನಿಂದ ಇದ್ದರು. ಮದುವೆಯಾಗದ ಅಣ್ಣತಮ್ಮಂದಿರಂತೆ ಕಿಚ್ಚ ಹಾಗೂ ಡಿ ಬಾಸ್ ಫ್ಯಾನ್ಸ್‌ಗಳು ಪರಸ್ಪರ ಗೌರವಾದರಗಳಿಂದ ಕನ್ನಡ ಸಿನಿಮಾಪ್ರೇಮಿಗಳಾಗಿ ಇದ್ದರು. ಆದರೆ, ಈ ಇಬ್ಬರ ನಟರುಗಳ ಮಧ್ಯೆ ಯಾವುದೋ ಕಾರಣಕ್ಕೆ ಮುನಿಸು ಮನೆ ಮಾಡಿತು. ಅಲ್ಲಿಂದ ಅವರಿಬ್ಬರ ಫ್ಯಾನ್ಸ್‌ಗಳ ಮಧ್ಯೆಯೂ ಬಿರುಕು ಮೂಡಿತು. ಅವರಿಬ್ಬರನ್ನು ಒಂದು ಮಾಡುವ ಕೆಲವರ ಪ್ರಯತ್ನ ಕೂಡ ಫಲ ಕಾಣಲಿಲ್ಲ. ಅಷ್ಟೇ ಅಲ್ಲ, ಕೆಲವರ ಕನಸಿನಂತೆ ಅವರಿಬ್ಬರನ್ನೂ ಒಂದೇ ಸಿನಿಮಾದಲ್ಲಿ ನೋಡುವ ಭಾಗ್ಯ ಇದುವರೆಗೂ ದೊರಕಿರಲಿಲ್ಲ. 

ಕಿಚ್ಚ ಸುದೀಪ್ 'ಮ್ಯಾಕ್ಸ್' ಈ ವರ್ಷದ ಸೂಪರ್ ಹಿಟ್ ಚಿತ್ರ; ಘೋಷಿಸಿದ್ದು ಯಾರು?

ಆದರೆ ಈಗ ಅಂತಹದ್ದೊಂದು ಸದಾವಕಾಶ ಕನ್ನಡ ಸಿನಿಪ್ರೇಕ್ಷಕರ ಪಾಲಿಗೆ ಒದಗಿ ಬರಲಿದೆ ಎನ್ನಲಾಗುತ್ತಿದೆ. ದರ್ಶನ್-ಸುದೀಪ್ ಒಟ್ಟಾಗಿ ಸದ್ಯದಲ್ಲೇ ಸಿನಿಮಾ ಮಾಡಲಿದ್ದಾರೆ. ಅದೂ ಕೂಡ ಅಂತಿಂಥ ಸಿನಿಮಾ ಅದಲ್ಲ.. ಬಹುಭಾಷೆಗಳಲ್ಲಿ ಸಿನಿಮಾ ಮಾಡಿ, ಕೋಟಿ ಕೋಟಿ ಸುರಿಯುವ ಕನ್ನಡ ಮೂಲದ ಹೊಂಬಾಳೆ ಸಂಸ್ಥೆ (Hombale) ಇವರಬ್ಬರನ್ನೂ ಒಟ್ಟಿಗೇ ತೆರೆಯ ಮೇಲೆ ತರಲಿದೆ. ಈ ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು ಆಕ್ಷನ್-ಕಟ್ ಹೇಳಲಿದ್ದಾರೆ. ಹೀಗೊಂದು ಸುದ್ದಿ ತುಂಬಾ ವೈರಲ್ ಆಗುತ್ತಿದೆ. ಅದು ಸುಳ್ಳು ಎನ್ನಲು ಯಾವುದೇ ಸಾಕ್ಷಿ ಇಲ್ಲ!

ಕನ್ನಡ ಇಬ್ಬರು ಸ್ಟಾರ್ ನಟರಾದ ದರ್ಶನ್ ಹಾಗೂ ಸುದೀಪ್ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೀಗ ಹರಡುತ್ತಿದೆ. ಈ ಸುದ್ದಿ ಕಿವಿಗೆ ಬಿದ್ದಿದ್ದೇ ತಡ, ಅವರಿಬ್ಬರ ಅಭಿಮಾನಿಗಳು ಭಾರೀ ಅಲರ್ಟ್ ಆಗಿದ್ದಾರೆ. ಅವರಿಬ್ಬರ ಅಭಿಮಾನಿಗಳ ಮಧ್ಯೆ ಹೊಗೆಯಾಡುತ್ತಿದ್ದ ಬೆಂಕಿಯ ಬದಲು ಬೆಳಕು ಮೂಡತೊಡಗಿದೆ. ಕಿಚ್ಚ ಹಾಗು ಡಿ ಬಾಸ್ ಸಿನಿಮಾ ಮುಹೂರ್ತ ಆದಷ್ಟು ಬೇಗ ನೆರವೇರಲಿ, ಸಿನಿಮಾ ಇನ್ನೊಂದು ವರ್ಷದಲ್ಲೇ ತೆರೆಗೆ ಬರಲಿ ಎಂದು ಆಶಿಸತೊಡಗಿದ್ದಾರೆ. 

ದರ್ಶನ್ ಕಷ್ಟದ ಕ್ಷಣದಲ್ಲಿ ವಿಜಯಲಕ್ಷ್ಮಿ 'ನಿಜರೂಪ' ಹೇಳಿದ ದಿನಕರ್ ತೂಗುದೀಪ!

ಆದರೆ, ಈ ಸುದ್ದಿಯ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗ ಆಗಬೇಕಿದೆ. ಏಕೆಂದರೆ, ಈ ಸುದ್ದಿಯನ್ನು ನಟರಾದ ದರ್ಶನ್ ಆಗಲೀ ಸುದೀಪ್ ಆಗಲೀ ಕನ್ಫರ್ಮ್ ಮಾಡಿಲ್ಲ. ಪ್ರಶಾಂತ್ ನೀಲ್ ಕಡೆಯಿಂದಲೂ ಈ ಸುದ್ದಿಗೆ 'ಹೌದು' ಎಂಬ ಅಧೀಕೃತ ಮುದ್ರೆ ಬಿದ್ದಿಲ್ಲ. ಇನ್ನು ಹೊಂಬಾಳೆ ಸಂಸ್ಥೆ ಕೂಡ 'ಯೆಸ್' ಎಂದಿಲ್ಲ. ಆದರೆ ಆ ಸಾಧ್ಯತೆಯನ್ನು ಖಂಡಿತ ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಈ ಜಗತ್ತಿನಲ್ಲಿ ಏನೆಲ್ಲ ನಡೆಯುತ್ತದೆ. ಅಂಥದ್ದರಲ್ಲಿ ಒಂದು ಕಾಲದಲ್ಲಿ ಕುಚಿಕೂ ಸ್ನೇಹಿತರಾಗಿದ್ದ ಸುದೀಪ್-ದರ್ಶನ್ ಒಟ್ಟಿಗೇ ಸಿನಿಮಾ ಮಾಡಬಾರದೆಂಬ ಯಾವ ನಿಯಮವೂ ಇಲ್ಲ. ಅದು ಸಾಧ್ಯವಾದರೆ ತುಂಬಾ ಸಂತೋಷ, ಏನಂತೀರಾ?

Latest Videos
Follow Us:
Download App:
  • android
  • ios