ದರ್ಶನ್ ಕಷ್ಟದ ಕ್ಷಣದಲ್ಲಿ ವಿಜಯಲಕ್ಷ್ಮಿ 'ನಿಜರೂಪ' ಹೇಳಿದ ದಿನಕರ್ ತೂಗುದೀಪ!
ವಿನೀಶ್ ಕೂಡ ಅಷ್ಟೇ, ಸಾಕಷ್ಟು ಧೈರ್ಯವಾಗಿಯೇ ಇದ್ದ.. ನಮ್ಮಪ್ಪ ಸೂಪರ್‌ಮ್ಯಾನ್ ಏನೂ ಸಮಸ್ಯೆ ಆಗಲ್ಲ.. ನಿಜ ಒಂದಿನ ಹೊರಗೆ ಬರುತ್ತೆ, ಆಗ ನಮ್ಮಪ್ಪನೂ ಹೊರಗೆ ಬರುರ್ತಾರೆ ಅಂತಿದ್ದ.. ಅವ್ನೂ ಕೂಡ ತುಂಬಾ ಧೈರ್ಯವಾಗಿಯೇ ಇದ್ದ. ಈವನ್ ನಮ್ಮ ಅಮ್ಮನೂ ಅಷ್ಟೇ.. ವಿಜಿ ತರ ಸೊಸೆ ಪಡೆಯೋಕೆ..
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟ ದರ್ಶನ್ (Darshan Thoogudeepa) ಲೈಫಲ್ಲಿ ಬಿರುಗಾಳಿ ಎದ್ದಿದ್ದಿ, ಈಗ ಒಂದು ಲೆವಲ್‌ಗೆ ತಣ್ಣಗಾಗಿದ್ದು ಎಲಕ್ಲವೂ ಬಹುತೇಕ ಎಲ್ಲರಿಗೂ ಗೊತ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi), ತಮ್ಮ ದಿನಕರ್ ತೂಗುದೀಪ (Dinakar Thoogudeepa), ಮಗ ವಿನೀಶ್ (Vineesh) ಹಾಗೂ ದರ್ಶನ್ ಅಮ್ಮ ಮೀನಾ (Meena Thoogudeepa) ಇವರೆಲ್ಲರೂ ಕುಟುಂಬದ ಸದಸ್ಯರಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಕಾನೂನು ರೀತಿಯಲ್ಲೇ ಹೋರಾಟ ಮಾಡಬೇಕಾದ ಪರಿಸ್ಥಿತಿ, ಎಷ್ಟೇ ಹೆಸರು ಹಾಗೂ ಹಣವಿದ್ದರೂ ಕಾನೂನು ಹೋರಾಟ, ಕೋರ್ಟ್ ಆರ್ಡರ್‌ಗೆ ತಲೆ ಬಾಗಲೇಬೇಕಾದ ಪರಿಸ್ಥಿತಿ.
ಕಳೆದ ಆರೇಳು ತಿಂಗಳು ನಟ ದರ್ಶನ್ ಕುಟುಂಬಕ್ಕೆ ಅಕ್ಷರಶಃ ಅಗ್ನಿಪರೀಕ್ಷೆಯ ಕಾಲ. ನಿಜವಾಗಿ ಆಗಿದ್ದೇನು ಎಂಬುದು ಸ್ವತಃ ನಟ ದರ್ಶನ್ ಸೇರಿದಂತೆ ಇಡೀಓ ಫ್ಯಾಮಿಲಿಗೂ ಯಕ್ಷಪ್ರಶ್ನೆ ಎಂಬಂತಾಗಿತ್ತು. ಏನೋ ಮಾಡಲು ಹೋಗಿ ಅದೇನೋ ಆಗಿತ್ತು.. ಎಲ್ಲಿ ತಪ್ಪಾಯ್ತು, ಯಾರಿಂದ ತಪ್ಪಾಯ್ತು ಎಂಬುದು ಗೊತ್ತಾಗುವ ಮೊದಲೇ ಪೊಲೀಸ್ ಕಸ್ಟಡಿ ಸೇರಿ ಆಗಿತ್ತು. ಆರೋಪಿ ಸ್ಥಾನದಲ್ಲಿ ನಿಂತ ಮೇಲೆ ಪಾಲಿಗೆ ಬಂದ ಎಲ್ಲವನ್ನೂ ಎದುರಿಸಲೇಬೇಕು. ಲಾಯರ್, ಪೊಲೀಸ್, ಕೋರ್ಟ್ ಹಾಗೂ ಕಾನೂನು ಕೆಲಸ ಮಾಡಿದಂತೆ ಜೀವನ ಕಳೆಯಬೇಕು. ಇಂಥ ಪರಿಸ್ಥಿತಿಯಲ್ಲಿ ನಟ ದಶ್ನ್ ಸಿಲುಕಿಕೊಂಡಿದ್ದರು.
ಅಂದು ನಾನಾ ನೀನಾ? ಇಂದು ನಾನು-ನೀನು ಒಂದು; ಕನ್ನಡ ಸ್ಟಾರ್‌ಗಳ ಒಗ್ಗಟ್ಟಿನ ಗುಟ್ಟು ಬಹಿರಂಗ!
ಈಗಲೂ ಕೂಡ ನಟ ದರ್ಶನ್ ಸ್ಥಿತಿ ಅಯೋಮಯವೇ ಆಗಿದೆ. ಕೇಸ್ ಇನ್ನೂ ಮುಗಿದಿಲ್ಲ, ವಿಚಾರಣೆಗೆ ಕರೆದಾಗ ಹೋಗಬೇಕು, ಕಾನೂನಿನ ಚೌಕಟ್ಟಿನಲ್ಲೇ ವ್ಯವಹರಿಸಬೇಕು. ಆದರೆ, ಜೈಲಿನ ನಾಲ್ಕು ಗೋಡೆಯ ಮಧ್ಯೆ ಇರುವ ಬದಲು ಮನೆಯ ಗೋಡೆಗಳ ಮಧ್ಯೆ ಇರುವ ಸ್ವಾತಂತ್ರ್ಯ ಸಿಕ್ಕಿದೆ. ಅಂದಿನ ದಿನಗಳನ್ನು ಇಂದು ನಿರ್ದೇಶಕ ಹಾಗೂ ನಟ ದರ್ಶನ್ ತಮ್ಮ ದಿನಕರ್ ಇಂದು ಮಾತನ್ನಾಡಿದ್ದಾರೆ. ಅವರು ಆಡಿರುವ ಮಾತುಗಳು ಇದೀಗ್ ವೈರಲ್ ಆಗುತ್ತಿವೆ. ಹಾಗಿದ್ದರೆ ದಿನಕರ್ ಅದೇನು ಹೇಳಿದ್ದಾರೆ, ಮುಂದೆ ನೋಡಿ..
'ನಮ್ ಅತ್ತಿಗೆಗೆ ನಿಜವಾಗಿ ಹ್ಯಾಟ್ಸ್‌ಅಪ್ ಹೇಳ್ಬೇಕು, ಯಾಕೆ ಅಂದ್ರೆ... ಕೆಲವೊಮ್ಮೆ ನಂಗೇನೇ ಟೆನ್‌ಶನ್ ಆಗ್ಬಿಡೋದು, ಏನ್ ಹಿಂಗ್ ಆಗೋಯ್ತಲ್ಲಾ ಅಂತ ಒಮ್ಮೊಮ್ಮೆ ಕುಗ್ಗಿ ಹೋಗ್ತಾ ಇದ್ದೆ.... ಟೆನ್‌ಷನ್ ಆಗ್ತಾ ಬಿಡ್ತಾ ಇದ್ದೆ ನಾನು.. ಆದ್ರೆ ಅತ್ತಿಗೆ 'ಏ ದಿನೂ ನೀನು ಟೆನ್‌ಷನ್ ಮಾಡ್ಕೋಬೇಡ.. ಡೋಂಟ್ ವರಿ, ನಾನಿದೀನಿ ನಿಮ್ಮ ಅಣ್ಣಾನ ಕರ್ಕೊಂಡು ಬರ್ತೀನಿ, ಡೋಂಟ್ ವರಿ ಅಂತ ಹೇಳೋಳು.. ತುಂಬಾ ಕಾನ್ಫಿಡೆಂಟ್ ಆಗಿ ಇರೋಳು.. ನಂಗೆ ಅವ್ಳ ಧೈರ್ಯ ನೋಡಿ ನಮ್ಗೆ ಧೈರ್ಯ ಬರೋದು..
ಅಣ್ಣಾವ್ರ ಕಟ್ಟುಮಸ್ತಾದ ದೇಹ ನೋಡಬೇಕೆ? AI ಫೋಟೋ ನೋಡಿದ್ರೆ ಶಾಕ್ ಆಗ್ತೀರಾ!
ವಿನೀಶ್ ಕೂಡ ಅಷ್ಟೇ, ಸಾಕಷ್ಟು ಧೈರ್ಯವಾಗಿಯೇ ಇದ್ದ.. ನಮ್ಮಪ್ಪ ಸೂಪರ್‌ಮ್ಯಾನ್ ಏನೂ ಸಮಸ್ಯೆ ಆಗಲ್ಲ.. ನಿಜ ಒಂದಿನ ಹೊರಗೆ ಬರುತ್ತೆ, ಆಗ ನಮ್ಮಪ್ಪನೂ ಹೊರಗೆ ಬರುರ್ತಾರೆ ಅಂತಿದ್ದ.. ಅವ್ನೂ ಕೂಡ ತುಂಬಾ ಧೈರ್ಯವಾಗಿಯೇ ಇದ್ದ. ಈವನ್ ನಮ್ಮ ಅಮ್ಮನೂ ಅಷ್ಟೇ.. ವಿಜಿ ತರ ಸೊಸೆ ಪಡೆಯೋಕೆ ನಾನು ಪುಣ್ಯ ಮಾಡಿದೀನಿ ಅಂತ ಹೇಳ್ತಾ ಇದ್ರು.. ಅದೂ ಒಂದು ಅತ್ತೆ ಆಗಿರೋಳು ಈ ತರ ಸೊಸೆಗೆ ಹೇಳೋದು, ಅದು ನಿಜವಾಗಿಯೂ ದೊಡ್ಡ ಕಾಂಪ್ಲಿಮೆಂಟ್ ಇದು. ಸೋ, ಅವ್ಳು ಇದಾಳೆ, ಧೈರ್ಯವಾಗಿ ಇರಬಹುದು, ವಿಜಿ ಇದ್ರೆ ನಾವೆಲ್ಲರೂ ಧೈರ್ಯವಾಗಿ ಇರಬಹುದು ಅನ್ನೋ ಸಿಚ್ಯುವೇಶನ್ ಕ್ರಿಯೇಟ್ ಆಗೋಯ್ತು ಅಲ್ಲಿ.. ಎಂದಿದ್ದಾರೆ ನಟ ದರ್ಶನ್ ತಮ್ಮ ದಿನಕರ್ ತೂಗುದೀಪ.