ತಂದೆ ಹುಷಾರು ತಪ್ಪಿದಾಗ ಜವಾಬ್ದಾರಿ ಬಂತು, ಮನೆಗೆ ಹಣ ಎಲ್ಲಿಂದ ಬರುತ್ತೆ ಗೊತ್ತಾಗಿತ್ತು: ಯುವ ರಾಜ್‌ಕುಮಾರ್

ಯುವ ಸಿನಿಮಾದ ಮೂಲಕ  ಜನರಿಗೆ ತಂದೆ-ಮಗನ ಸಂಬಂಧ ಮಹತ್ವ ಸಾರಿದ ದೊಡ್ಡ ಮನೆ ಕುಡಿ. ಯುವ ಮಾತುಗಳು ವೈರಲ್ ಆಗುತ್ತಿದೆ..... 

Kannada actor Yuva Rajkumar talks about father Raghavendra Rajkumar and finances vcs

ಯುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯುವ ರಾಜ್‌ಕುಮಾರ್ ಕನ್ನಡಿಗರ ಪ್ರೀತಿ ಗಳಿಸಿದ್ದಾರೆ. 25 ದಿನಕ್ಕೂ ಹೆಚ್ಚಿನ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಫ್ಯಾಮಿಲಿ ಪ್ರಾಮುಖ್ಯತೆ ತಿಳಿಸುತ್ತದೆ. ಈ ವೇಳೆ ಯುವ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. 

'ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಅಂದ್ರೆ ನಮ್ಮ ತಂದೆ ಹುಷಾರು ತಪ್ಪಿದ್ದಾಗ. ಆರ್ಕಿಟೆಕ್ಚರ್‌ನಲ್ಲಿ ನಾನು ಮೂರು ಅಥವಾ ನಾಲ್ಕನೇ ವರ್ಷ ಓದುತ್ತಿದ್ದೆ, ಕಾಲೇಜ್‌ನ ಕ್ಯಾಶುಯರ್‌ ಆಗಿ ಸ್ವೀಕರಿಸಿದ್ದೆ ಫ್ಯೂಚರ್‌ ಬಗ್ಗೆ ಐಡಿಯಾ ಇರಲಿಲ್ಲ. ಆಗ ಮನೆಯ ಆರ್ಥಿಕ ಪರಿಸ್ಥಿತಿ ಕೂಡ ನನಗೆ ಗೊತ್ತಿರಲಿಲ್ಲ ಏಕೆಂದರೆ ಪ್ರತಿಯೊಂದು ತಂದೆ ಮೂಲಕ ನಡೆಯುತ್ತಿತ್ತು ಹಾಗೂ ಅಲ್ಲಿಂದ ಸಿನಿಮಾ ಪ್ರೊಡಕ್ಷನ್‌ ನಿಲ್ಲಿಸಲಾಗಿತ್ತು. ನಮ್ಮ ಕುಟುಂಬಕ್ಕೆ ಆಧಾಯ ಅಂದ್ರೆ ಪ್ರಮುಖ ಭಾಗ ಸಿನಿಮಾದಿಂದಲೇ  ಬೇರೆ ಬೇರೆ ಸಣ್ಣ ಪುಟ್ಟ ಇದ್ದರು ಪ್ರಮುಖ ಸಿನಿಮಾನೇ. ಅಲ್ಲಿಂದ ನಮ್ಮ ಮೇಜರ್ ಸಂಪಾದನೆ ನಿಂತು ಬಿಟ್ಟಿತ್ತು ಅದೇ ಸಮಯಕ್ಕೆ ತಂದೆ ಆರೋಗ್ಯ ಕೆಟ್ಟಿತ್ತು ಅಷ್ಟಲ್ಲದೆ ಅಕೌಂಟ್ ನೋಡಿಕೊಳ್ಳುತ್ತಿದ್ದವರು ಲೆಕ್ಕಚಾರ ತಪ್ಪು ಮಾಡಿದ್ದರು...ಎಲ್ಲಾ ಒಂದೇ ಸತಿ ಬಂದ ಕಾರಣ ಆಗ ನನಗೆ ಜವಾಬ್ದಾರಿ ಬಂತು' ಎಂದು ಯುವ ರಾಜ್‌ಕುಮಾರ್ ರ್ಯಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

ಕ್ಯಾನ್ಸರ್ ಅಲ್ಲ, ಡಿಪ್ರೆಶನ್ ಅಲ್ಲ, ಸಾಲ ಅಲ್ವೇ ಅಲ್ಲ: ನಟ ಭರತ್ ಭಾಗವತರ್‌ ಸಾವಿನ ಸತ್ಯ ಬಿಚ್ಚಿಟ್ಟ ಪತ್ನಿ

'ಲೋನ್‌ಗಳು ಇದ್ದ ಕಾರಣ ಜವಾಬ್ದಾರಿ ತೆಗೆದುಕೊಳ್ಳಲು ಶುರು ಮಾಡಿದೆ ಆಗ ಮನೆ ಹೇಗೆ ನಡೆಯುತ್ತಿತ್ತು ಹೇಗೆ ನಡೆಸಬೇಕು ಎಲ್ಲಿಂದ ಆಧಾಯ ಬರುತ್ತಿತ್ತು ಈಗ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಶುರು ಮಾಡಿದೆ' ಎಂದು ಯುವ ಹೇಳಿದ್ದಾರೆ.

ಬಿಗ್ ಬಾಸ್‌ ಮಾಡಿದ ನಿರ್ಲಕ್ಷ್ಯದಿಂದ 6 ಸಲ ಆಪರೇಷನ್ ಆಯ್ತು: ಸುಷ್ಮಾ ವೀರ್ ಗರಂ

'ತಾತ ಕಿಡ್ನ್ಯಾಪ್ ಆದಾಗ, ತಾತ ತೀರಿಕೊಂಡಾಗ, ಅಪ್ಪ ಹುಷಾರು ತಪ್ಪಿದ್ದಾಗ, ಅಜ್ಜಿ ಹುಷಾರು ತಪ್ಪಿದಾಗ ..ತೀರಿಕೊಂಡಾಗ, ಚಿಕ್ಕಪ್ಪ.....ನಮ್ಮ ಜೀವನದ ದೊಡ್ಡ ಶಕ್ತಿನೇ ಫ್ಯಾಮಿಲಿ. ಇಷ್ಟು ಕಷ್ಟಗಳು ಎದುರು ಬಂದಾಗಲೂ ನಾವು ಒಟ್ಟಿಗೆ ನಿಂತಿದ್ವಿ. ಒಬ್ಬರಿಂದ ಒಬ್ಬರಿಗೆ ಧೈರ್ಯ ಕೊಟ್ಟಿದ್ದೀವಿ. ಪ್ರತಿಯೊಬ್ಬರು ನನಗೆ ಧೈರ್ಯ ಕೊಟ್ಟಿದ್ದಾರೆ ಜೊತೆಗೆ ನಿಂತಿದ್ದಾರೆ. ಕಹಿ ಘಟನೆಯಿಂದ ಹೊರ ಬಂದೇ ಬರುತ್ತೀವಿ' ಎಂದಿದ್ದಾರೆ ಯುವ.

Latest Videos
Follow Us:
Download App:
  • android
  • ios