ಕ್ಯಾನ್ಸರ್ ಅಲ್ಲ, ಡಿಪ್ರೆಶನ್ ಅಲ್ಲ, ಸಾಲ ಅಲ್ವೇ ಅಲ್ಲ: ನಟ ಭರತ್ ಭಾಗವತರ್ ಸಾವಿನ ಸತ್ಯ ಬಿಚ್ಚಿಟ್ಟ ಪತ್ನಿ
ಸಾವಿನ ಸುತ್ತ ನೂರಾರು ಗಾಸಿಪ್‌ಗಳು ಹರಿದಾಡುತ್ತಿದ್ದರು ಅಸಲಿ ಸತ್ಯ ಬಿಚ್ಚಿಟ್ಟ ಭರತ್ ಫ್ಯಾಮಿಲಿ. ನಿಜಕ್ಕೂ ಆಸ್ಪತ್ರೆಯಲ್ಲಿ ಆಗಿದ್ದು ಏನು?
ಕನ್ನಡ ಚಿತ್ರರಂಗದ ಅದ್ಭುತ ನಟ ಭರತ್ ಭಾಗವತರ್ ಇದ್ದಕ್ಕಿದ್ದಂತೆ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟರು. ಆರೋಗ್ಯ ಸಮಸ್ಯೆ, ಖಿನ್ನತೆ, ಹಣ ಸಮಸ್ಯೆ, ರಸ್ತೆ ಅಪಘಾತ...ಹೀಗೆ ನೂರಾರು ಕಾರಣಗಳು ಹರಿದಾಡಿತ್ತು. ನಿಜಕ್ಕೂ ಏನಾಯ್ತು ಎಂದು ಭರತ್ ಪತ್ನಿ ಮತ್ತು ಪುತ್ರಿಯರು ಹೇಳಿದ್ದಾರೆ.
'ಅನೇಕರು ಭರತ್ ಭಾಗವತರ್ ಅವರು ಕ್ಯಾನ್ಸರ್‌ನಿಂದ ಅಗಲಿದರು ಅಂದುಕೊಂಡಿದ್ದರು ಆದರೆ ಅದರಿಂದ ಅಲ್ಲ. ಇನ್ನೂ ಕೆಲವರು ಪ್ರಚಂಡ ರಾವಣ ಚಿತ್ರಕ್ಕೆ ದುಡ್ಡು ಹಾಕಿ ಅದರಿಂದ ಕೈ ಸುಟ್ಟಿಕೊಂಡು ಡಿಪ್ರೆಶನ್‌ಗೆ ಹೋಗಿ ತೀರ್ಕೊಂಡಿದ್ದಾರೆ ಅಂತ ಅನೇಕರು ಅಂದುಕೊಂಡಿದ್ದಾರೆ ಅದು ಸಳ್ಳು. ಭರತ್ ಅವರಿಗೆ ಬಿಪಿ ಮತ್ತು ಶುಗರ್ ಇತ್ತು. ಪ್ರಚಂಡ ರಾವಣ ಸಿನಿಮಾ ವಿತರಣ ವಿಚಾರಕ್ಕೆ ಓಡಾಟದಲ್ಲಿ ಇದ್ದಾಗ ಸ್ನೇಹಿತರ ಜೊತೆ ಮಂಗಳೂರಿಗೆ ಹೊರಟರು, ಅಲ್ಲಿದ್ದು ಕೆಲಸ ಮುಗಿಸಿಕೊಂಡು ಹಿಂತಿರುಗಿ ಬರುವಾಗ ಪಿರಿಯಾಪಟ್ಟಣದಲ್ಲಿ ಟೈಯರ್ ಪಂಚರ್ ಆಗಿದೆ ಅದನ್ನು ಸರಿ ಮಾಡಿಕೊಂಡು ಮತ್ತೆ ರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಡಾಬಾವೊಂದರಲ್ಲಿ ಕಾಫಿ ಟೀ ತಿಂಡಿ ತಿಂದು ಹೊರಟಿದ್ದಾರೆ. ಸಾಮಾನ್ಯವಾಗಿ ಮತ್ತೊಬ್ಬರಿಗೆ ಭರತ್ ವಾಹನ ಚಲಾಯಿಸಲು ಬಿಡುವುದಿಲ್ಲ ಆದರೆ ಬೆಳಗ್ಗೆ ಶೂಟಿಂಗ್ ಇದ್ದ ಕಾರಣ ಒಪ್ಪಿಕೊಂಡು ಹಿಂದೆ ಮಲಗಿದ್ದಾರೆ' ಎಂದು ರಘುರಾಮ್ ಯುಟ್ಯೂಬ್ ಚಾನೆಲ್‌ನಲ್ಲಿ ಭರತ್ ಫ್ಯಾಮಿಲಿ ಮಾತನಾಡಿದ್ದಾರೆ.
ಬಿಗ್ ಬಾಸ್ ಮಾಡಿದ ನಿರ್ಲಕ್ಷ್ಯದಿಂದ 6 ಸಲ ಆಪರೇಷನ್ ಆಯ್ತು: ಸುಷ್ಮಾ ವೀರ್ ಗರಂ
'ಅವರ ಸ್ನೇಹಿತರು ಮದ್ದೂರು ಮಾರ್ಗದವರೆಗೂ ಕಾರು ಚಲಾಯಿಸಿದ್ದಾರೆ ಅಲ್ಲಿ ನಿದ್ರೆಗೆ ಜಾರಿದ್ದಾರೆ ಅದೇ ಸಮಯಕ್ಕೆ ಹಂಪ್ ಬಂದಿದೆ ಗಾಡಿ ಸ್ಪೀಡ್ ರೈಸ್ ಆಗಿದೆ. ಡಿವೈಡರ್‌ಗೆ ಕಾರು ಗುದ್ದಿ ರಸ್ತೆಯ ಮತ್ತೊಂದು ಭಾಗಕ್ಕೆ ಬಿದ್ದಿದೆ ಆ ಸಮಯದಲ್ಲಿ ಪಕ್ಕೆಲುಬುಗಳಿಗೆ ಪೆಟ್ಟು ಬಿದ್ದು ಅಲ್ಲಿಂದ ಚೇತರಿಸಿಕೊಳ್ಳಲಿಲ್ಲ. ರಿಕವರ್ ಆದರೂ ಮಾನಸಿಕವಾಗಿ ಸ್ಟ್ರಾಂಗ್ ಆಗಲಿಲ್ಲ. ಮೊದಲು ಜ್ವರ ಕೆಮ್ಮು ಬಂದು ಕಡಿಮೆ ಆಗಲಿಲ್ಲ. ಇದ್ದಕ್ಕಿದ್ದಂತೆ ಬಿಪಿ ಕಡಿಮೆ ಆಗಿ ಮಾತು ಬರಲಿಲ್ಲ ಅಲ್ಲಿ ಡಾಕ್ಟರ್‌ಗೆ ತೋರಿಸಿದ ನಂತರ ಕಿಡ್ನಿ ಫಂಕ್ಷನ್ ಆಗುತ್ತಿಲ್ಲ ಅಂದು ಬಿಟ್ಟರು ಆಗ ನಾವು ಫುಲ್ ಶಾಕ್ ಆದ್ವಿ' ಎಂದು ಭರತ್ ಫ್ಯಾಮಿಲಿ ಹೇಳಿದ್ದಾರೆ.
'ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಿದ ಮೇಲೆ ಸ್ಥಿತಿ ಗಂಭೀರ ಎಂದು ತಿಳಿಯಿತ್ತು. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 10 ದಿನ ಇದ್ದರು ಅದಾದ ಮೇಲೆ ಡಯಾಲಿಸಿಸ್ ಮಾಡಿದ್ದರು...ಅಲ್ಲಿ ಜನರು ಇದ್ದ ಕಾರಣ ಹೊರಗಡೆ ಕಾಯುತ್ತಿದ್ವಿ ಕಾಫಿ ಬೇಕು ಎಂದು ಹೊರಗೆ ನಾನು ಹೋದೆ. 5 ನಿಮಿಷದಲ್ಲಿ ಹೊರಗೆ ಹೋಗಿ ಬರುವಷ್ಟರಲ್ಲಿ ನಿದ್ರೆ ಮಾಡುತ್ತಿದ್ದರು ಎಬ್ಬಿಸಿ ಮಾತನಾಡಿಸಿದೆ ಆದರೂ ನಿದ್ರೆ ಅಂದ್ರು ಸುಮ್ಮನಾದೆ ಮತ್ತೆ ಎದ್ದೇಳಲಿಲ್ಲ ಅಂತ ಡಾಕ್ಟರ್‌ಗೆ ಹೇಳಿದೆ ಅಲ್ಲಿ ಅವರಿಗೆ ಸ್ವಲ್ಪ ಅನುಮಾನ ಶುರುವಾಗಿತ್ತು ಕೈ ಎತ್ತಿ ನೋಡಿದ್ವೆ. ಒಂದು ಯೂನಿಟ್‌ನಿಂದ ಮತ್ತೊಂದು ಯೂನಿಟ್‌ಗೆ ಶಿಫ್ಟ್ ಮಾಡುವಾಗ ಎದೆ ಭಾಗಕ್ಕೆ ಜೋರಾಗಿ ಗುದ್ದಲು ಹೇಳಿದರು ಆಗ ಕಣ್ಣು ಬಿಟ್ಟಿ ಕೊನೆಯದಾಗಿ ನೋಡಿದ್ದರು. ಬ್ರೈನ್ ಹೆಮರೇಜ್ ಆಗಿ ಕೋಮಾಗೆ ಜಾರಿಬಿಟ್ಟರು. ಸುಮಾರು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಬ್ರೈನ್ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದ್ದರು' ಎಂದಿದ್ದಾರೆ ಭರತ್ ಫ್ಯಾಮಿಲಿ.