ಉಪೇಂದ್ರ ಮತ್ತೊಂದು ಮದುವೆಗೆ ರೆಡಿ ಆಗಿದ್ದಾರೆ. ಈಗ ‘ಪಂಚತಂತ್ರ’ದ ಚೆಲುವೆ ಸೋನಲ್ ಮೊಂತೆರೋ ಜತೆಗೆ ಉಪ್ಪಿ ಮದುವೆ ಫಿಕ್ಸ್ ಆಗಿದೆ. ಗುರುವಾರ(ಡಿಸೆಂಬರ್ 26) ಚಿಕ್ಕಬಳ್ಳಾಪುರ ಸಮೀಪದ ದೇವಸ್ಥಾನವೊಂದರಲ್ಲಿ ಮದುವೆಗೆ ಸಿದ್ಧತೆ ನಡೆದಿದೆ.

'ಪಾಪ ಪಾಂಡು'ವಿನ ಶ್ರೀಮತಿ ಇದ್ದಕ್ಕಿದ್ದಂತೆ ನಾಪತ್ತೆ!

ಆದರೆ ಅದಕ್ಕೆ ಉಗ್ರಂ ಮಂಜು ವಿರೋಧವಿದೆ. ಮದುವೆ ತಡೆಯುವುದಕ್ಕಾಗಿಯೇ ಅಲ್ಲಿಗೆ 40 ಮಂದಿ ರೌಡಿಗಳು ಬಿಟ್ಟಿದ್ದಾರೆ ಮಂಜು. ಮುಂದೇನಾಗುತ್ತೆ ಎನ್ನುವುದೇ ಈಗ ಕುತೂಹಲ!  ಇದು ರಿಯಲ್ ಅಲ್ಲ, ರೀಲ್ ಮೇಲಿನ ಕತೆ. ಜಯರಾಂ ಭದ್ರಾವತಿ ನಿರ್ದೇಶನದ ‘ಬುದ್ಧಿವಂತ 2’ ಚಿತ್ರದ ಕುತೂಹಲದ ಸನ್ನಿವೇಶ.

'ವಾಸುಕಿ ಕೈ ತೆಗಿ, ನೀನು ಎಲ್ಲಿ ಕೈ ಹಾಕಿದ್ದೀಯಾ ನಿನಗೆ ಗೊತ್ತು'

‘ಇದೊಂದು ಚಿತ್ರದ ಪ್ರಮುಖ ಆ್ಯಕ್ಷನ್ ಸನ್ನಿವೇಶ. ಸ್ಟಂಟ್ ಮಾಸ್ಟರ್ ವಿಕ್ರಮ್ ಇದರ ಹೊಣೆ ಹೊತ್ತಿದ್ದಾರೆ. ಸುಮಾರು 40 ರೌಡಿಗಳ ಜತೆಗೆ ಚಿತ್ರದ ನಾಯಕ ನಟ ಸೆಣೆಸಾಡಬೇಕಿದೆ. ಈಗಾಗಲೇ ಸಣ್ಣ ಸಣ್ಣ ಸೆಟ್‌ಗಳನ್ನು ಹಾಕಿದ್ದೇವೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅದ್ಧೂರಿಯಾಗಿಯೇ ತೆರೆಗೆ ತರಬೇಕೆನ್ನುವ ಆಸೆ ನಮ್ಮದು’ ಎನ್ನುತ್ತಾರೆ ನಿರ್ದೇಶಕ ಜಯರಾಂ. ಟಿ.ಆರ್. ಚಂದ್ರಶೇಖರ್ ನಿರ್ಮಾಣದ ಚಿತ್ರವಿದು.