ಕಿರುತೆರೆಯಲ್ಲಿ ಬಹು ಮೆಚ್ಚುಗೆಗೆ ಪಾತ್ರವಾಗಿದ್ದ ‘ಪಾಪ ಪಾಂಡು’ ಧಾರಾವಾಹಿಯ ಆಕರ್ಷಣೆಯಾಗಿದ್ದ ಶ್ರೀಮತಿ ಕಳೆದ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಪಾಂಡು ನಿಜವಾದ ಅರ್ಥದಲ್ಲಿ ಪಾಪದ ಪಾಂಡು ಆಗಿದ್ದಾನೆ.

ಶ್ರೀಮತಿ ಪಾತ್ರಧಾರಿ ಶಾಲಿನಿ ಮತ್ತು ಚಿದಾನಂದ್ ಜೋಡಿಯೇ ಪಾಪಾ ಪಾಂಡು ಸೀರಿಯಲ್ಲಿನ ಪ್ರಮುಖ ಆಕರ್ಷಣೆ ಆಗಿತ್ತು. ಆದರೆ ಕಳೆದ ಎರಡು ತಿಂಗಳುಗಳಿಂದ ಶಾಲಿನಿ, ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಇದ್ದಕ್ಕಿದ್ದಂತೆ ಶಾಲಿನಿ ಸೀರಿಯಲ್ ಬಿಡಲು ಕಾರಣವೇನು ಎಂಬ ಪ್ರಶ್ನೆಗೆ ಅವರಿಗೆ ಸ್ಲಿಪ್‌ಡಿಸ್ಕ್ ಆಗಿದೆ ಎಂಬ ಉತ್ತರ ಚಿತ್ರತಂಡದಿಂದ ಸಿಗುತ್ತದೆ.

'ವಾಸುಕಿ ಕೈ ತೆಗಿ, ನೀನು ಎಲ್ಲಿ ಕೈ ಹಾಕಿದ್ದೀಯಾ ನಿನಗೆ ಗೊತ್ತು'

ಶಾಲಿನಿಯವರೂ ಆ ಉತ್ತರವನ್ನು ಅನುಮೋದಿಸುತ್ತಾರೆ. ಚಿತ್ರತಂಡದ ಕೆಲವರು ಈ ಬದಲಾವಣೆಗೆ ನಿಗೂಢ ಸೀರೆ ಪ್ರಕರಣ ಕಾರಣ ಎನ್ನುತ್ತಾರೆ.