ಜೋಕರ್ ಆಗಿ ಬಂದಿದ್ದ ಕಿಚ್ಚ ಸುದೀಪ್ ಜತೆ ನಾವು ಹೇಗೆ ನಡೆದುಕೊಂಡೆವು ಎಂಬುದನ್ನು ಬಿಗ್ ಬಾಸ್  ಮನೆ ಮಂದಿ ಎಲ್ಲ ಹೇಳಿಕೊಂಡು ಖುಷಿಪಟ್ಟರು. ಇದಾದ ಮೇಲೆ ಮನೆ ಮಂದಿಗೆ ಎಲ್ಲ ಕಡೆ ಗಿಫ್ಟ್ ಬಂತು.

ಥರ್ಮೋಕೋಲ್ ಸಣ್ಣ ಸಣ್ಣ ಪೀಸ್ ಗಳ ಎರಡು ಚೀಲ ನೀಡಿ ಯಾವ ಚೀಲ ಕೊನೆಯವರೆಗೆ ಕಾಯ್ದುಕೊಳ್ಳುತ್ತಾರೋ ಅವರು ವಿನ್ ಆಗುತ್ತಾರೆ ಎಂದು ಬಿಗ್ ಬಾಸ್ ಸೂಚಿಸಿದ್ದರು. ಇದಾದ ಮೇಲೆ ಮನೆ ಅಕ್ಷರಶಃ ರಣಾಂಗಣವಾಯಿತು.  ಪುಟಾಣಿ ಪಂಟರ್ ಚಂದನಾ ಕೊನೆಯವರೆಗೂ ಥರ್ಮೋಕೋಲ್ ಕಾಪಾಡಿಕೊಂಡು ಬಂದರು.

ಇನ್ನೊಂದು ತಂಡದಲ್ಲಿ ಶೈನ್ ಮತ್ತು ದೀಪಿಕಾ ಹರಸಾಹಸ ಮಾಡಿದರೂ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದಾಂಡಿಗನಂತೆ ನುಗ್ಗಿದ ಕಿಶನ್ ಚೀಲ ಹರಿದು ಹಾಕಿ ಗೆಲುವಿನ ನಗೆ ಬೀರಿದರು.'

ದೀಪಿಕಾಗೆ ಊಫ್ ಮಾಡಲು ಹೋದ ಶೈನ್ ಜೊಲ್ಲು ಸುರಿಸ್ತಾರೆ!

ಆದರೆ ಟಾಸ್ಕ್ ವೇಳೆ ಪ್ರಿಯಾಂಕಾ ಮತ್ತು ವಾಸುಕಿ ನಡುವಿನ ಮಾತುಕತೆ ಮನೆಯಲ್ಲಿ ಚರ್ಚೆ ಆಯಿತು. ಚೀಲವನ್ನು ಕಸಿಯಲು ವಾಸುಕಿ ಪ್ರಯತ್ನ ಮಾಡುತ್ತಿದ್ದರು. ಈ ವೇಳೆ ಇನ್ನೊಂದು ತಂಡದ ಪ್ರಿಯಾಂಕಾ "ನೀನು ಕೈ ತೆಗಿ, ನೀನು ಎಲ್ಲಿ ಕೈ ಹಾಕಿದ್ದೀಯಾ ಅನ್ನೋದು  ನಿನಗೆ ಗೊತ್ತು' ಎಂದರು.

ಇದಾದ ಮೇಲೆ ಟಾಸ್ಕ್ ಮುಗಿದ ಮೇಲೆ ವಾಸುಕಿ ನಾನು ಏನು ಮಾಡಿಲ್ಲ ಸುಮ್ಮನೆ ಆರೋಪ ಮಾಡುತ್ತಾರೆ. ಹೆಣ್ಣು ಮಕ್ಕಳು ಎಂಬುದನ್ನು ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದರು. ಕೊನೆಯಲ್ಲಿ ವಾಸಿಕಿ ಮತ್ತು ಪ್ರಿಯಾಂಕಾ ಪರಸ್ಪರ ಮಾತಾಡಿಕೊಂಡು ಎದ್ದಿದ್ದ ಗೊಂದಲಕ್ಕೆ ಅಂತ್ಯ ಹಾಡಿದರು.