ರಸ್ತೆ ಅಪಘಾತದಿಂದ ಕೊನೆ ಉಸಿರೆಳೆದ ನಟ ಸೂರ್ಯೋದಯ್ ಪುತ್ರ ಮಯೂರ್.

ಬೆಂಗಳೂರು: ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಜನಪ್ರಿಯತೆ ಹೊಂದಿರುವ ನಟ ಸೂರ್ಯೋದಯ್ ಪುತ್ರ ಮಯೂರ್‌ (20) ಬ್ಯಾಡರಹಳ್ಳಿ ನ್ಯೂ ಲಿಂಕ್ ರಸ್ತೆಯಲ್ಲಿ ಶುಕ್ರವಾರ ರಾತ್ರ ಅಪಘಾತದಿಂದ ಮೃತಪಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

20 ವರ್ಷ ಮಯೂರ್‌ ಸ್ನೇಹಿತರ ಜೊತೆ ಡ್ಯೂಕ್ ಬೈಕ್‌ನಲ್ಲಿ ಓವರ್ ಸ್ಪೀಡಲ್ಲಿ ಬರುತ್ತಿದ್ದ ಕಾರಣ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದಾನೆ, ಎನ್ನಲಾಗಿದೆ. ಸ್ಥಳದಲ್ಲಿಯೇ ಮಯೂರ್ ಕೊನೆಯುಸಿರೆಳೆದಿದ್ದಾನೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಮ್ಯಾನ್‌ಹೋಲ್‌ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಯ್ತು: ಸಂಚಾರಿ ವಿಜಯ್ ಸ್ನೇಹಿತನ ಸ್ಪಷ್ಟನೆ!

ಮಯೂರ್ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಮಾಡಿಸಲು ಕಳುಹಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಯಾರ ತಪ್ಪಿದೆ ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಕೆಲವು ದಿನಗಳ ಹಿಂದೆ ನಟ ಸಂಚಾರಿ ವಿಜಯ್ ಕೂಡ ರಸ್ತೆ ಅಪಘಾತದಲ್ಲಿ ನಿಧನರಾದರು.