Asianet Suvarna News Asianet Suvarna News

3 ವರ್ಷದ ರಾಯನ್ ಹಿಂದಿ-ಇಂಗ್ಲಿಷ್‌ ಮಾತಾಡೋಕೆ ಪ್ರಯತ್ನ ಮಾಡ್ತಾನೆ,ರಜನಿಕಾಂತ್ ಸಿನಿಮಾ ಹುಚ್ಚು : ಸುಂದರ್ ರಾಜ್

ನನ್ನ ಮೊಮ್ಮಗ ನನ್ನ ಸರ್ವಸ್ವ...ಅವನೇ ನನ್ನ ದೇವರು ಎಂದು ಹಿರಿಯ ನಟ ಸುಂದರ್ ರಾಜ್...
 

Kannada actor Sundar raj talks about Meghana raj son Raayan raj sarja vcs
Author
First Published Jun 29, 2024, 1:47 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರ್ ರಾಜ್‌ ಸದ್ಯ ಸೂರ್ಯವಂಶ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಗಳು ಮೇಘನಾ ರಾಜ್ ಸಿನಿಮಾ ಶೂಟಿಂಗ್ ಅಂತ ಬ್ಯುಸಿಯಾಗಿದ್ದರೆ ಮೊಮ್ಮಗ ರಾಯನ್ ಅವನ ಲೋಕದಲ್ಲಿ ಇರುತ್ತಾನೆ. ರಾಯನ್ ತಮ್ಮ ಜೀವನ ಎಷ್ಟು ಬದಲಾಯಿಸಿದ್ದಾನೆ....ಜೀವನ ಹೇಗಿದೆ ಎಂದು ಸುಂದರ್ ರಾಜ್‌ ಹಂಚಿಕೊಂಡಿದ್ದಾರೆ. 

ಕಾರ್ಮೋಡ ತುಂಬಿದ ಮನೆಯಲ್ಲಿ ಬೆಳ್ಳಿ ಮೋಡ ಬರುತ್ತಿದೆ...ಬೆಳ್ಳಿ ಮೋಡ ಬಂದಿದೆ ಅದು ನಮ್ಮ ರಾಯನ್. ದೇವ್ರು ಒಂದು ಕಿತ್ತುಕೊಂಡರೆ 10 ಕೊಡುತ್ತಾನೆ, ದಿನನಿತ್ಯ ಚಿರಂಜೀವಿಯನ್ನು ನಮ್ಮ ಮನೆಯಲ್ಲಿ ನೋಡುತ್ತಿರುತ್ತೀನಿ. ಚಿರು ಎಲ್ಲೂ ಹೋಗಿಲ್ಲ...ಅವನ ಮಗನ ರೂಪದಲ್ಲಿ ನಮ್ಮ ಮನೆಯಲ್ಲಿದ್ದಾನೆ. ನನ್ನ ಮಗಳು ಮೇಘನಾಗೆ ಇರುವ ಸೆಲ್ಫ್‌ ಕಾನ್ಫಿಡೆನ್ಸ್‌ ಒಮ್ಮೊಮ್ಮೆ ನನಗೇ ಇರುವುದಿಲ್ಲ. ಮುಂದೆ ಏನಾಗುತ್ತೆ ಹೇಗಾಗುತ್ತೆ ಎಂತ ಇವತ್ತಿಗೂ ಯೋಚನೆ ಮಾಡುತ್ತೀನಿ ಆದರೆ ಆಕೆ ಮಾತ್ರ ಬೇಗ ಎದ್ದು 8.30ಗೆ ಸ್ಕೂಲ್‌ಗೆ ಕರೆದುಕೊಂಡು ಹೋಗುತ್ತಾಳೆ, 12.30 ಕರೆದುಕೊಂಡು ಬರುತ್ತಾಳೆ, ಊಟ ಮಾಡಿಸುತ್ತಾಳೆ ಅವನಿಗೆ ಒಳ್ಳೆ ಬುದ್ಧಿ ಹೇಳಿಕೊಡುತ್ತಾಳೆ ಎಂದು ಖಾಸಗಿ ಸಂದರ್ಶನದಲ್ಲಿ ಸುಂದರ್ ರಾಜ್ ಮಾತನಾಡಿದ್ದಾರೆ.

ರೀಲ್ಸ್‌- ಯೂಟ್ಯೂಬ್ ಹಣದಿಂದ ಸಹೋದರನಿಗೆ ಮಹೇಂದ್ರ ಥಾರ್ ಕೊಡಿಸಿದ ರಚನಾ!

ಇವತ್ತು ರಾಯನ್ ಅವನ ಕೆಲಸ ಅವನೇ ಮಾಡಿಕೊಳ್ಳುವಂತೆ ಮಾಡಿದ್ದಾಳೆ. ಮೂರು ವರ್ಷದ ನಮ್ಮ ರಾಯನ್ ಹಿಂದಿ ಮತ್ತು ಇಂಗ್ಲಿಷ್‌ ಮಾತನಾಡಲು ಪ್ರಯತ್ನ ಮಾಡುತ್ತಾನೆ. ರಜನಿಕಾಂತ್, ಅಲ್ಲು ಅರ್ಜುನ್, ವಿಜಯ್ ಮತ್ತು ಚಿಕ್ಕಪ್ಪ ಧ್ರುವ ಸರ್ಜಾ ಅಭಿಮಾನಿ ನಮ್ಮ ರಾಯನ್. ಚಿಕ್ಕಪ್ಪನ ನೋಡಿದ ತಕ್ಷಣ ಪೊಗರು ಪೊಗರು ಅಂತಾನೆ. ಚಿರುಗೆ ರಜನಿಕಾಂತ್ ಅಂದ್ರೆ ತುಂಬಾ ಇಷ್ಟ ರಜನಿ ಸಿನಿಮಾ ಹಾಕೊಂಡು ನೋಡಿ ನೋಡಿ ನಗುತ್ತಿದ್ದ ಈಗ ಆತನ ಮಗ ಕೂಡ ಅದೇ ಮಾಡುತ್ತಾನೆ..ನಾನು ರಜನಿಕಾಂತ್ ಅಂತ ಸಿನಿಮಾ ಡೈಲಾಗ್ ಹೇಳುತ್ತಾನೆ ಎಂದು ಸುಂದರ್ ರಾಜ್ ಹೇಳಿದ್ದಾರೆ.

ಫಸ್ಟ್‌ ಟೈಂ ಒಟ್ಟಿಗೆ ಅವಾರ್ಡ್‌ ಪಡೆದ ಚಿರು- ಮೇಘನಾ ರಾಜ್‌; ರಾಯನ್ ಮುಖದಲ್ಲಿ ಖುಷಿ ನೋಡಿ ನೆಟ್ಟಿಗರು ಭಾವುಕ

ನಮಗೆ ರಾಯನ್ ಮನೆಯಲ್ಲಿ ಬಾಲ ಕೃಷ್ಣ ಇದ್ದಂತೆ ಅವನೇ ನನಗೆ ಎನರ್ಜಿ ನನ್ನ ಎಲ್ಲಾ ನೋವನ್ನು ಮರೆಸುತ್ತಾನೆ. ನಾನು ತಡವಾಗಿ ಮನೆಗೆ ಬಂದಾಗ ನನ್ನ ಗಡ್ಡ ಸವರುತ್ತಾನೆ..ನಾನು ಎಲ್ಲಿ ಹೋಗಿ ಬರ್ತಿದ್ದೀನಿ ಎಂದು ಕೇಳಿದಾಗ ಸೂರ್ಯವಂಶ ಎಂದು ಸೀರಿಯಲ್ ಹಾಡು ಹಾಡ್ತಾನೆ. ನನಗೆ ರಾಯನ್ ದೇವರು..ನನಗೆ ಎಲ್ಲವೂ ಅವನೇ. ನಮಗೆ ನೋವಾದರೂ ಅದನ್ನು ದಾಟಿ ಬರಬೇಕು ಎಂದಿದ್ದಾರೆ ಸುಂದರ್ ರಾಜ್. 

Latest Videos
Follow Us:
Download App:
  • android
  • ios