ರೀಲ್ಸ್- ಯೂಟ್ಯೂಬ್ ಹಣದಿಂದ ಸಹೋದರನಿಗೆ ಮಹೇಂದ್ರ ಥಾರ್ ಕೊಡಿಸಿದ ರಚನಾ!
ಸಹೋದರನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ರಚನಾ. ತಾರ್ ನೋಡಿ ಥ್ರಿಲ್ ಆದ ಫಾಲೋವರ್ಸ್....
ಸೋಷಿಯಲ್ ಮೀಡಿಯಾದಲ್ಲಿ ಡಿಫರೆಂಟ್ ರೀಲ್ಸ್ ಮತ್ತು ಯೂಟ್ಯೂಬ್ ವ್ಲಾಗ್ ಕ್ರಿಯೇಟ್ ಮಾಡಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಪಡೆದಿರುವ ರಚನಾ.
ರಚನಾ ಮತ್ತು ಬಾಯ್‌ಫ್ರೆಂಡ್ ನವೀನ್ ಸಖತ್ ಟ್ರೆಂಡಿ ರೀಲ್ಸ್ ಮಾಡುತ್ತಾರೆ. ಈ ಸಲ ತಮ್ಮ ಸಹೋದರ ಹುಟ್ಟುಹಬ್ಬಕ್ಕೆ ರಚನಾ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.
'ಬಾಯ್‌ಫ್ರೆಂಡ್‌ಗೆ ಗಿಫ್ಟ್ ಕೊಡುವುದು ತುಂಬಾನೇ ಕಾಮನ್ ಆದರೆ ಸಹೋದರನಿಗೆ ಗಿಫ್ಟ್ ಕೊಡುವುದು ತುಂಬಾನೇ ಡಿಫರೆಂಟ್ ವೈಬ್' ಎಂದು ರಚನಾ ಬರೆದುಕೊಂಡಿದ್ದಾರೆ.
'ಯಾವತ್ತಿದ್ದರೂ ಫ್ಯಾಮಿಲಿ ಫಸ್ಟ್. ಸಹೋದರನಿಗೆ ಪ್ರೀ ಬರ್ತಡೆ ಗಿಫ್ಟ್. ಮಹೇಂದ್ರ ತಾರ್ 4 *4ನ ಸ್ವಾಗತ ಮಾಡಿಕೊಂಡಿದ್ದೀವಿ' ಎಂದಿದ್ದಾರೆ ರಚನಾ.
ಸಾಮಾನ್ಯವಾಗಿ ಯಾರದ್ದೇ ಬರ್ತಡೇ ಇದ್ದರೂ ರಚನಾ ಚಿನ್ನ ಗಿಫ್ಟ್ ನೀಡುತ್ತಾರೆ. ಕೆಲವು ದಿನಗಳ ಹಿಂದೆ ತಾಯಿ ಹುಟ್ಟುಹಬ್ಬಕ್ಕೂ ಚಿನ್ನ ಓಲೆ ಗಿಫ್ಟ್ ನೀಡಿದ್ದರು.
ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂನಿಂದ ಇಷ್ಟೋಂದು ದುಡಿಮೆ ಮಾಡಬೋದಾ ಅನ್ನೋ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ. ಪ್ರಾಡೆಕ್ಟ್ ಮಾರ್ಕೆಟಿಂಗ್ ಅಥವಾ ಪ್ರಮೋಷನ್‌ಗಳ ಮೂಲಕ ಹಣ ಸಂಪಾದನೆ ಮಾಡುತ್ತಾರೆ.