ಡಾ.ರಾಜ್‌ಕುಮಾರ್ ತಮ್ಮ ಅಭಿಮಾನಿಗಳನ್ನು ದೇವರೆಂದೇ ಭಾವಿಸುತ್ತಿದ್ದರು. ಅಭಿಮಾನಿ ದೇವರುಗಳು ಎಂದೇ ಕರೆಯುತ್ತಿದ್ದರು. ಕರುನಾಡ ನಟ ಸಾರ್ವಭೌಮ ತಮ್ಮ ಹೃದಯದಲ್ಲಿ ಅಭಿಮಾನಿಗಳಿಗೆ ಸಾಕಷ್ಟು ಜಾಗವಿಟ್ಟಿದ್ದರು. ಮಕ್ಕಳೂ ತಂದೆ ಹಾಕಿದ ಮಾರ್ಗದಲ್ಲಿಯೇ ಸಾಗುತ್ತಿದ್ದು, ಎಲ್ಲರೂ ಅಭಿಮಾನಿಗಳ ಪ್ರೀತಿಗೆ ಉತ್ತಮವಾಗಿ ಸ್ಪಂದಿಸುತ್ತಾರೆ. 

ಇತ್ತೀಚೆಗೆ ಅಭಿಮಾನಿಯೊಬ್ಬ ತಂದು ಕೊಟ್ಟು ಚಿನ್ನದ ಉಡುಗೊರೆ ಮರಳಿಸಿ ಪುನೀತ್ ರಾಜ್‌ಕುಮಾರ್ ಸುದ್ದಿಯಾಗಿದ್ದರೆ, ಇದೀಗ ಅಭಿಮಾನಿಯ ತಾಯಿ ಸಾವಿಗೆ ಶಿವರಾಜ್‌ಕುಮಾರ್ ಉತ್ತಮವಾಗಿ ಸ್ಪಂದಿಸಿ ಮತ್ತಷ್ಟು ಅಭಿಮಾನಿಗಳ ಪ್ರೀತಿಗೆ ಕಾರಣವಾಗಿದ್ದಾರೆ. 

ಕಪ್‌ವೊಳಗೆ ಶಿವಣ್ಣ ಸ್ಪೂನ್ ಹಾಕುವ ವಿಡಿಯೋಗೆ ನೆಟ್ಟಿಗರು ಫಿದಾ!

ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಪ್ಪಟ್ಟ ಅಭಿಮಾನಿ ಪುನೀತ್‌ ಅವರ ತಾಯಿ ಸರೋಜಮ್ಮ ಅನಾರೋಗ್ಯದಿಂದ ನಿಧನರಾದರು. ಅವರಿಗೆ 66 ವರ್ಷವಾಗಿತ್ತು. ಬೆಂಗಳೂರಿನ ಗವಿಪುರಂ-ಗುಟ್ಟಳ್ಳಿ ನಿವಾಸಿ ಪುನೀತ್ ಅವರ ಮನೆಗೆ ಹೋಗಿ, ಮೃತರಿಗೆ ನಮಸ್ಕರಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿ ಬಂದಿದ್ದಾರೆ. ಹ್ಯಾಟ್ರಿಕ್ ಹೀರೋವಿನ ಈ ನಡೆಯಿಂದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದಂತೆ ಆಗಿದ್ದಾರೆ.

ನೋವು ಮರೆಯಲು ಆಪರೇಶನ್ ಥಿಯೇಟರ್‌ನಲ್ಲಿ ಶಿವಣ್ಣ ಹಾಡಿಗೆ ಕೈ ಆಡಿಸಿದ ಅಭಿಮಾನಿ!

ಇನ್ನು ಭಜರಂಗಿ ಚಿತ್ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವಣ್ಣ ಒಂದಾದ ಮೇಲೊಂದು ಕಹಿ ಘಟನೆಗಳನ್ನು ಅನುಭವಿಸುತ್ತಿದ್ದಾರೆ. ಲೈಟ್‌ ಶಾರ್ಟ್‌ ಸರ್ಕ್ಯೂಟ್‌ ಆಗಿ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆನಂತರ ಕಲಾವಿದರು ಪ್ರಾಯಣಿಸುತ್ತಿದ್ದ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಗಾಯಗೊಳ್ಳಲಿಲ್ಲ. ಆದರೆ, ಮತ್ತೊಂದು ಸಲವೂ ಸೆಟ್ಟಿನ ಹಂಚು ಕಾದು ಸುಮಾರು ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದಿದೆ. ಈ ಟೆನ್ಷನ್ ಮಧ್ಯೆಯೇ ಶಿವರಾಜ್ ಕುಮಾರ್ ಅಭಿಮಾನಿಯ ನೋವಿಗೂ ಸ್ಪಂದಿಸಿದ್ದಾರೆ. 

"