ಶಿವಣ್ಣ ಟೀ ಕಪ್‌ವೊಳಗೆ ಸ್ಪೂನ್ ಹಾಕುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವಣ್ಣ ಸ್ಟೈಲ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. 

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ವಯಸ್ಸು 50 ಪ್ಲಸ್ ಆದರೂ ಎನರ್ಜಿ ಮಾತ್ರ ಸ್ವಲ್ಪವೂ ಇಳಿದಿಲ್ಲ. ಇವರ ಎನರ್ಜಿ ಲೆವೆಲ್ ಎಂಥವರಿಗೂ ಸ್ಫೂರ್ತಿ ನೀಡುವಂತಿದೆ. ಡ್ಯಾನ್ಸ್, ಟಾಸ್ಕ್, ನಟನೆ ಎಲ್ಲದರಲ್ಲೂ ಎತ್ತಿದ ಕೈ.

ಇತ್ತೀಚಿಗೆ ಟೇಬಲ್ ಮೇಲಿರುವ ಟೀ ಕಪ್ ಒಳಗೆ ಸ್ಟೈಲ್ ಆಗಿ ಸ್ಪೂನ್ ಹಾಕುವ ವಿಡಿಯೋ ವೈರಲ್ ಆಗಿದೆ. 

ರೈಲಿನಲ್ಲೂ ಶುರುವಾಗಿದೆ 'ಅವನೇ ಶ್ರೀಮನ್ನಾರಾಯಣನ' ಜಪ!

ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಳ್ಳುತ್ತಿದ್ದ 'ಸೂಪರ್ ಮಿನಟ್' ಶೋನಲ್ಲಿ ಇಂತಹ ಟಾಸ್ಕ್‌ಗಳನ್ನು ಕೊಡಲಾಗುತ್ತಿತ್ತು. ಇದೀಗ ಶಿವಣ್ಣ ಕಪ್ ಒಳಗೆ ಸ್ಪೂನ್ ಹಾಕಿರುವ ವಿಡಿಯೋ ನೆಟ್ಟಿಗರನ್ನು ಫಿದಾ ಮಾಡಿದೆ.