Asianet Suvarna News Asianet Suvarna News

Bhajarangi 2: ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಲಿರುವ ಶಿವರಾಜ್ ಕುಮಾರ್

ಭಜರಂಗಿ 2 ಚಿತ್ರವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲ್ಮ್ಸ್, ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಈ ಭಾನುವಾರದಂದು ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂದು ಟ್ವೀಟ್ ಮಾಡಿದೆ.

Kannada Actor shiva rajkumar will watch bhajarangi 2 with fans on november 14th gvd
Author
Bangalore, First Published Nov 12, 2021, 3:40 PM IST
  • Facebook
  • Twitter
  • Whatsapp

ಸ್ಯಾಂಡಲ್​ವುಡ್‌ನ ಸೆಂಚುರಿ ಸ್ಟಾರ್  ಶಿವರಾಜ್ ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ 'ಭಜರಂಗಿ 2' (Bhajarangi 2) ಚಿತ್ರ ಅಕ್ಟೋಬರ್ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಇನ್ನೇನು ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬರುವ ಹೊತ್ತಿನಲ್ಲೇ, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ( Puneeth Rajkumar) ನಿಧನದ ಸುದ್ದಿ ಎಲ್ಲರನ್ನೂ ದಿಗ್ಭ್ರಾಂತಿಗೊಳಿಸಿತ್ತು. ಹಾಗೂ ಅರ್ಧದಲ್ಲೇ  ಚಿತ್ರಮಂದಿರಗಳಿಂದ ಪ್ರೇಕ್ಷಕರು ಹೊರಬಂದಿದ್ದರು. ಪುನೀತ್‌ಗೆ ಗೌರವ ವಿದಾಯ ಸಲ್ಲಿಸುವ ಸಲುವಾಗಿ 'ಭಜರಂಗಿ 2' ನಿರ್ಮಾಪಕರು ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದರು. 

ಇದೀಗ ಮತ್ತೆ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇಂದು ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹೊಸ ಚಿತ್ರಗಳೂ ಬಿಡುಗಡೆಯಾಗಿವೆ. ಈ ನಡುವೆ 'ಭಜರಂಗಿ 2' ಚಿತ್ರತಂಡ ಟ್ವಿಟರ್​ನಲ್ಲಿ (Twitter) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಹೌದು! ಈ ಚಿತ್ರವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲ್ಮ್ಸ್ (Jayanna Films) 'ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಈ ಭಾನುವಾರದಂದು (ನವೆಂಬರ್ 14) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರವನ್ನು ವೀಕ್ಷಿಸಲಿದ್ದಾರೆ' ಎಂದು  ಟ್ವೀಟ್ (Tweet) ಮಾಡಿದ್ದು, ಈ ಮೂಲಕ ಚಿತ್ರತಂಡ ಸಿನಿರಸಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ.

ಬೆಚ್ಚಿ ಬೀಳಿಸೋ Bhajarangi 2 ವಿಲನ್ ಮೇಕಿಂಗ್ ವಿಡಿಯೋ!

ಇತ್ತಿಚೆಗಷ್ಟೇ, ಕೋವಿಡ್ ಸಂಕಷ್ಟದಲ್ಲಿ ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಸಿನಿಮಾ ಪ್ರದರ್ಶನ ಮತ್ತೆ ಶುರು ಮಾಡಿ ಎಂದು ಶಿವಣ್ಣ ಅವರು ಹೇಳಿದ ನಂತರವೇ ರಾಜ್ಯದ ಚಿತ್ರಮಂದಿರಗಳಲ್ಲಿ 'ಭಜರಂಗಿ 2' ಚಿತ್ರ ಮರು ಪ್ರದರ್ಶನ ಆರಂಭವಾಗಿತ್ತು. ಪುನೀತ್‌ ರಾಜ್‌ಕುಮಾರ್‌ ನಿಧನದಿಂದ ಆಘಾತಗೊಂಡಿದ್ದ ಸಿನಿಪ್ರೇಕ್ಷಕರು ಈಗ ಶಿವರಾಜ್‌ ಕುಮಾರ್‌ ಮೇಲಿನ ಪ್ರೀತಿಯಿಂದ ಚಿತ್ರಮಂದಿರಕ್ಕೆ ಮತ್ತೆ ಮರಳಿ ಬಂದಿದ್ದರು. ಪ್ರತಿಷ್ಠಿತ ಐಎಂಡಿಬಿಯಲ್ಲಿ (IMDB) ಬಹು ನಿರೀಕ್ಷೆಯ ಚಿತ್ರಗಳ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿರುವ 'ಭಜರಂಗಿ 2' ಚಿತ್ರ, ಕನ್ನಡ ಚಿತ್ರರಂಗದಲ್ಲೂ ಬಹಳಷ್ಟು ಕುತೂಹಲ ಹೆಚ್ಚಿಸಿತ್ತು.

ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಎ.ಹರ್ಷ (A.Harsha) ಆಕ್ಷನ್ ಕಟ್ ಹೇಳಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯಾ (Arjun Janya) ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ಹಿರಿಯ ನಟಿ ಶ್ರುತಿ  (Shruti), ಚೆಲುವ ರಾಜು (Cheluva Raju), ಶಿವರಾಜ್ ಕೆ.ಆರ್.ಪೇಟೆ, ಕುರಿ ಪ್ರತಾಪ್ ಸೇರಿದಂತೆ ವಿಶೇಷವಾದ ತಾರಾಗಣವಿದೆ. ಅದ್ದೂರಿ ಮೇಕಿಂಗ್‌ (Making) ಜೊತೆಗೆ ಶಿವಣ್ಣನ ಲುಕ್‌ಗಳು ಭಿನ್ನವಾಗಿವೆ. 

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಅಭಿಮಾನಿ ಯಶ್: ಪ್ರಸಂಗ ವಿವರಿಸಿದ ರಾಖಿ ಬಾಯ್

ಈ ಹಿಂದೆ ಹರ್ಷ ಶಿವಣ್ಣನಿಗೆ 'ಭಜರಂಗಿ' (Bhajarangi) ಮತ್ತು 'ವಜ್ರಕಾಯ' (Vajrakaya) ನಿರ್ದೇಶಿಸಿದ್ದರು. ಅದರಲ್ಲೂ 'ಭಜರಂಗಿ' ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಇದೀಗ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ 'ಭಜರಂಗಿ 2' ಬರುತ್ತಿದೆ. ಇನ್ನು ದೀಪು ಎಸ್‌. ಕುಮಾರ್‌ ಸಂಕಲನ, ಸ್ವಾಮಿ ಅವರ ಕ್ಯಾಮೆರಾ ಕೈಚಳಕವಿದೆ.  ರವಿ ಸಂತೆಹೈಕ್ಲು ಕಲಾ ನಿರ್ದೇಶನವಿದ್ದು, ರಘು ನಿಡುವಳ್ಳಿ ಸಂಭಾಷಣೆ, ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಪೋಸ್ಟರ್ (Poster), ಪ್ರೋಮೊ (Promo), ಟ್ರೇಲರ್ (Trailer), ಹಾಗೂ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Follow Us:
Download App:
  • android
  • ios