Asianet Suvarna News Asianet Suvarna News

ನಟ ನೀನಾಸಂ ಸತೀಶ್ ತಾಯಿ ಚಿಕ್ಕತಾಯಮ್ಮ ನಿಧನ

ವಯೋಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದ ನಟ ನೀನಾಸಂ ಸತೀಶ್ ಚಿಕ್ಕತಾಯಮ್ಮ (80). ಮದ್ದೂರಿನ ಯಲಹದಳ್ಳಿಯಲ್ಲಿ ಅಂತ್ಯಕ್ರಿಯೆ.

Kannada actor Sathish Ninasam mother Chikkatayamma passes away at 80 vcs
Author
Bangalore, First Published Oct 2, 2021, 11:36 AM IST
  • Facebook
  • Twitter
  • Whatsapp

ರಂಗಭೂಮಿ ಕಲಾವಿದ (Theater artist), ಕನ್ನಡ ಚಿತ್ರರಂಗದ ಸಿಂಪಲ್ ನಟ ನೀನಾಸಂ ಸತೀಶ್ (Sathish Ninasam) ಅವರ ತಾಯಿ ಚಿಕ್ಕತಾಯಮ್ಮ (Chikkatayamma) ಅಕ್ಟೋಬರ್ 1ರಂದು ಕೊನೆ ಉಸಿರೆಳೆದಿದ್ದಾರೆ.  ಕಳೆದ ಒಂದು ವರ್ಷದಿಂದ ಚಿಕ್ಕತಾಯಮ್ಮ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಎನ್ನಲಾಗಿದೆ. 

ಸಿನಿಮಾ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಸತೀಶ್ ಬೆಂಗಳೂರಿನ ಆರ್‌ಆರ್‌ ನಗರದಲ್ಲಿ (RR Nagar) ವಾಸವಿದ್ದರು. ಚಿಕ್ಕತಾಯಮ್ಮ ಕೂಡ ಕಿರಿಯ ಪುತ್ರನ ಜೊತೆಯೇ ಇದ್ದರು. ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಚಿಕ್ಕತಾಯಮ್ಮ ಅಗಲಿದ್ದಾರೆ. ಇಂದು ಮದ್ದೂರಿನ (Maddur) ಯಲದಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೇರವೇರಲಿದೆ. 

ಹುಟ್ಟುಹಬ್ಬ ಆಚರಿಸುತ್ತಿಲ್ಲ,ಟೀಸರ್ ಬಿಡುಗಡೆ ಮುಂದಕ್ಕೆ: ಸತೀಶ್ ನೀನಾಸಂ

ಸತೀಶ್ ತಾಯಿ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಿಕ್ಕತಾಯಮ್ಮ ಅವರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ನಾಲ್ಕು ಹೆಣ್ಣು ಮಕ್ಕಳು. ಸತೀಶ್ ಸಿನಿಮಾ ಆಪ್ತರು ಚಿಕ್ಕತಾಯಮ್ಮ ಅವರ ಕೊನೆ ದರ್ಶನ ಪಡೆದುಕೊಂಡಿದ್ದಾರೆ. 

Kannada actor Sathish Ninasam mother Chikkatayamma passes away at 80 vcs

ಸತೀಶ್ ತಾಯಿಯ ಮುದ್ದಿನ ಮಗ. ಏನೇ ಒಳ್ಳೆಯ ಕೆಲಸ ಮಾಡಿದರೂ ತಾಯಿಗೆ ಕ್ರೆಡಿಟ್ ನೀಡುತ್ತಾರೆ. ಎಲ್ಲ ದಿನವೂ ಅಮ್ಮಂದಿರ ದಿನ ಎಂದು ಬರೆದುಕೊಳ್ಳುವವರು. ಬೆಂಗಳೂರಿನಲ್ಲಿದ್ದರೂ ತಮ್ಮ ಹಳ್ಳಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು. ಬಿಡುವು ಮಾಡಿಕೊಂಡು, ಹಳ್ಳಿಯಲ್ಲಿದ್ದು ಹಳ್ಳಿ (Village) ಜೀವನ ನಡೆಸುತ್ತಾರೆ ಈ ಸ್ಯಾಂಡಲ್‌ವುಡ್ ನಟ ಸತೀಶ್.

ಬಡವರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್

ಕೊರೋನಾ ಲಾಕ್‌ಡೌನ್‌ (Covid19 Lockdown) ಸಮಯದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಟ ಸತೀಶ್ ಆಪ್ತ ಗೆಳೆಯ ಸಂಚಾರಿ ವಿಜಯ್‌ರನ್ನು (Sanchari Vijay) ಕಳೆದುಕೊಂಡಿದ್ದರು. ಸ್ವಂತ ಅಣ್ಣನಂತೆಯೇ ಮುಂದೆ ನಿಂತು ಪ್ರತಿಯೊಂದೂ ಕೆಲಸ ಕಾರ್ಯಗಳನ್ನು ನಡೆಸಿಕೊಟ್ಟಿದ್ದರು. 

ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್ (Petromax) ಸಿನಿಮಾ ಬಿಡುಗಡೆಯ ಹಂತ ತಲುಪಿದೆ.  ದಸರಾ (Dasara), ಗೋದ್ರಾ (Godra), ಮ್ಯಾಟ್ನಿ (matine) ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ.

Follow Us:
Download App:
  • android
  • ios