ಬಡವರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್
- ಬಡವರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್
- ಲಾಕ್‌ಡೌನ್‌ನಲ್ಲಿ ಜನರ ನೆರವಿಗೆ ನಿಂತ ಯುವ ನಟ
ನಟ ನೀನಾಸಂ ಸತೀಶ್ ಕೊರೋನಾ ಸಂಕಷ್ಟದಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಿಗೆ ತೆರಳಿ ಪ್ರತಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಬಡವರಿಗೆ, ನಿರ್ಗತಿಕರಿಗೆ ಒಂದು ಹೊತ್ತಿನ ಊಟ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.
ಇದಕ್ಕಾಗಿ ತಮ್ಮ ಸ್ನೇಹಿತರಾದ ನಿತಿನ್ ಹಾಗೂ ಪ್ರಮೋದ್ ಅವರನ್ನು ಒಳಗೊಂಡ ಒಂದು ತಂಡ ಮಾಡಿಕೊಂಡಿದ್ದಾರೆ.
ಸತಃ ನೀನಾಸಂ ಸತೀಶ್ ಅವರೇ ಬಡವರಿಗೆ ಊಟ ನೀಡುತ್ತಿದ್ದಾರೆ.
ಇದು ನನ್ನ ಜವಾಬ್ದಾರಿ. ಈ ಹೊತ್ತಿನಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕಿದೆ ಎಂದಿದ್ದಾರೆ.
ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವವರ ಕಷ್ಟಕ್ಕೆ ನೆರವಾಗಲು ಮುಂದಾಗಿದ್ದೇನೆ ಎಂದಿದ್ದಾರೆ ನಟ.
ನನ್ನ ಸ್ನೇಹಿತರು ಕೂಡ ಇದಕ್ಕೆ ಕೈ ಜೋಡಿಸಿದ್ದು, ದಿನಾ ಒಂದು ಸಾವಿರ ಬಡವರಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ನೀನಾಸಂ ಸತೀಸ್
ನಟನ ಸಮಾಜಮುಖಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.