ಪುನೀತ್ ಅಗಲಿಕೆ ಎಲ್ಲರಿಗೂ ಎಷ್ಟರ ಮಟ್ಟಿಗೆ ನೋವು ಕೊಟ್ಟಿದೆ ಅಂದ್ರೆ ಮಂಡ್ಯದಿಂದ ನನ್ನ ತಾಯಿ ಕರೆ ಮಾಡಿದ್ರು......
ಕನ್ನಡ ಚಿತ್ರರಂಗದ (Sandalwood) ಅದ್ಭುತ ನಟ ರವಿಶಂಕರ್ ಗೌಡ (Ravishankar Gowda) ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ವ್ಯಕ್ತಿ. ಸಮಾಜದ ಹಾದುಹೋಗು ವಿಚಾರಗಳನ್ನು ಹಾಗೇ ತಮ್ಮ ಬಣ್ಣದ ಜರ್ನಿಯ ಕೆಲವೊಂದು ರಹಸ್ಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿಕೆಯಿಂದ ಕರ್ನಾಟಕದ (Karnataka) ಅದೆಷ್ಟೋ ಕುಟುಂಬಗಳಿಗೆ ನೋವಾಗಿದೆ. ಈ ಶಾಕಿಂಗ್ ವಿಚಾರವನ್ನು ಕೇಳಿ ರವಿಶಂಕರ್ ಅವರ ತಾಯಿ ಪ್ರತಿಕ್ರಿಯಿಸಿದ್ದು ಹೇಗೆ ಎಂದು ಬರೆದುಕೊಂಡಿದ್ದಾರೆ.
'ನಮ್ಮ ಇಡೀ ಕುಟುಂಬವೇ ಅಣ್ಣಾವ್ರ (Dr.Rajkumar) ಭಕ್ತರು. ಇವತ್ತು ಬೆಳಿಗ್ಗೆ ನನ್ನ ಅಮ್ಮ ಮಂಡ್ಯದಿಂದ (Mandya) ಕರೆ ಮಾಡಿ ಒಂದು ಬಾರಿ ಆ ರತ್ನವನ್ನು ತೋರಿಸಿಬಿಡು ಅಂತ ಎದೆ ಬಡೆದುಕೊಂಡು ಗೋಳಾಡಿಬಿಟ್ಟರು. ಕರೆಸಿದೆ, ತೋರಿಸಿದೆ, ನನ್ನ ಅಮ್ಮನ (Mother) ದುಃಖ ತೀವ್ರತೆಯನ್ನು ನೀವೇ ನೋಡಿ ಪುಟ್ಟ ದೊರೆ. ನನ್ನ ಚಿಕ್ಕ ಯಜಮಾನರೇ. ರಾಘವೇಂದ್ರ (Raghavendra)' ಎಂದು ರವಿಶಂಕರ್ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ರವಿಶಂಕರ್ ಅವರ ತಾಯಿ, ಅಪ್ಪು ಪಾರ್ಥೀವ ಶರೀರದ ಮುಂದೆ ನಿಂತು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
Puneeth Rajkumar ಪುಣ್ಯತಿಥಿಯಂದು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ
'ನೀವಾಡೋ ಮಾತೆಲ್ಲ ಜೇನಿನಂತೆ. ನಗುವಾಗ ಮೊಗವಂತೂ ಹೂವಿನಂತೆ. ನೀವೊಂದು ಸಕ್ಕರೆಯ ಬೊಂಬೆಯಂತೆ ನೀವೇ ನಮ್ಮ ಪ್ರಾಣದಂತೆ. ನಮ್ಮ ಪ್ರಾಣದಂತೆ. ಬಾನ ದಾರಿಯಲ್ಲಿ ಸೂರ್ಯ (Sun) ಜಾರಿ ಹೋದ.. ಚಿಕ್ಕ ಯಜಮಾನರೇ' ಎಂದು ರವಿಶಂಕರ್ ಇತ್ತೀಚಿಗೆ ಪುನೀತ್ ಜೊತೆ ದೇಗುಲಕ್ಕೆ (Temple) ಭೇಟಿ ಕೊಟ್ಟ ಫೋಟೋ ಹಂಚಿಕೊಂಡಿದ್ದಾರೆ.
ಆರ್ಟಿಸ್ಟ್ ಕಿರಣ್ ಆಚಾರ್ಯ (Kiran Acharya) ಕ್ರಿಯೇಟ್ ಮಾಡಿರುವ ಫೋಟೊ ಒಂದು ವೈರಲ್ ಆಗುತ್ತಿದೆ. ಸ್ವರ್ಗದಲ್ಲಿ (Heaven) ಕುಳಿತಿರುವ ರಾಜ್‌ಕುಮಾರ್ ಅವರಿಗೆ ಹಿಂದಿನಿಂದ ಬಂದು ಪುನೀತ್ ಕಣ್ಣು ಕಟ್ಟಿ ಸರ್ಪ್ರೈಸ್ ಕೊಟ್ಟಿದ್ದಾರೆ. ಅಣ್ಣಾವ್ರ ಮಡಿಲಿನಲ್ಲಿ ಪಾರಿವಾಳವಿದೆ, ಪುನೀತ್ ಹೆಗಲ ಮೇಲೂ ಪಾರಿವಾಳವಿದೆ (White pigeon). ಇದನ್ನು ಹಂಚಿಕೊಂಡು ರವಿಶಂಕರ್ 'ಹೃದಯವೇ ಭಾರವಾಗಿದೆ. ಕರಳು ಹಿಂಡಿದಂತಾಗುತ್ತಿದೆ. ಚಿತ್ರವು ಅಮೋಘವೆನಿಸಿದರೂ ದುಃಖವು ಉಮ್ಮಳಿಸಿ ಉಮ್ಮಳಿಸಿ ಬರುತ್ತಿದೆ' ಎಂದಿದ್ದಾರೆ.
Puneeth Rajkumar; ಪುನೀತ್ ಮಾದರಿ ಹೆಜ್ಜೆಯ ನಂತರ ನೇತ್ರದಾನಕ್ಕೆ ಹೆಚ್ಚಾದ ನೋಂದಣಿ
ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ಪ್ರತಿಯೊಬ್ಬ ಕನ್ನಡಿಗನಿಗೂ ನೋವುಂಟು ಮಾಡಿದೆ. ಈ ವರ್ಷ ಬಹುತೇಕರ ಮನೆಗಳಲ್ಲಿ ದೀಪಾವಳಿ (Deepavali) ಆಚರಿಸಿಲ್ಲ. ಬದಲಿಗೆ ಪುನೀತ್ ರೀತಿ ಮಾದರಿ ಆಗಬೇಕು ಎಂದು ತಮ್ಮ ನೇತ್ರದಾನಕ್ಕೆ (Eye Donationa) ನೋಂದಣಿ ಮಾಡಿಸಿದ್ದಾರೆ. ಲಕ್ಷಾಂತ ಜನರು ನೋಂದಣಿ ಮಾಡುತ್ತಿದ್ದಾರೆ ಎಂದು ನಾರಾಯಣ ನೇತ್ರಾಲಯದವರು (Narayana Nethralaya) ಹೇಳಿದ್ದಾರೆ. ಅಪ್ಪು ಅಗಲಿ 8 ದಿನ ಕಳೆದರೂ ಪ್ರತಿ ದಿನವೂ 2-4 ಲಕ್ಷ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ (Kanteerava Studio) ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾಗಿದ್ದಾರೆ. ನಿನ್ನೆ ಅಶ್ವಿನಿ ಪುನೀತ್, ಯುವ ರಾಜ್‌ಕುಮಾರ್, ಪುನೀತ್ ಸಹೋದರಿಯರು ಹಾಗೂ ಅವರ ಮಕ್ಕಳು ಸಮಾಧಿ ಪೂಜೆ ಸಲ್ಲಿಸಿದ್ದರು.
