Asianet Suvarna News Asianet Suvarna News

Puneeth Rajkumar ಪುಣ್ಯತಿಥಿಯಂದು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

*  ಬೆಂಗಳೂರು ಅರಮನೆ ಮೈದಾನದಲ್ಲಿ ಭೋಜನ
*  ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪುನೀತ್ ಕುಟುಂಬದವರ ಮನವಿ
*  ಮಾದರಿಯಾದ ಪುನೀತ್‌ ನೇತ್ರದಾನ: ಸಾವಿರಾರು ಮಂದಿ ನೋಂದಣಿ

Anna Santarpane To Puneeth Rajkumar Fans on November 09th in Bengaluru grg
Author
Bengaluru, First Published Nov 5, 2021, 8:14 AM IST

ಬೆಂಗಳೂರು(ನ.05):  ನಟ ಪುನೀತ್‌ ರಾಜ್‌ಕುಮಾರ್‌ ಅವರ ಪುಣ್ಯತಿಥಿಯನ್ನು ನ.8ರಂದು ನಡೆಸಲು ಡಾ.ರಾಜ್‌ಕುಮಾರ್‌ ಕುಟುಂಬದವರು ನಿರ್ಧರಿಸಿದ್ದಾರೆ. ಪುನೀತ್‌ ಅಗಲಿದ 11ನೇ ದಿನಕ್ಕೆ ಪುಣ್ಯತಿಥಿ ನಡೆಯಲಿದ್ದು, ಕುಟುಂಬದವರು, ನೆಂಟರು, ಸ್ನೇಹಿತರು ಹಾಗೂ ಆಪ್ತರು ಈ ತಿಥಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲ ದಿನದ ಕಾರ್ಯವು ಕೇವಲ ಕುಟುಂಬದವರ ಸಮ್ಮುಖದಲ್ಲೇ ಖಾಸಗಿಯಾಗಿ ನಡೆಯಲಿದೆ ಎಂದು ತಿಳಿದು ಬಂದಿದೆ. ನ.9ರಂದು ಅರಮನೆ ಮೈದಾನದ(Palace Ground) ತ್ರಿಪುರ ವಾಸಿನಿಯಲ್ಲಿ ಪುಣ್ಯ ತಿಥಿಯ ಅಂಗವಾಗಿ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳಿಗೆ(Fans) ಅನ್ನ ಸಂತರ್ಪಣೆ(Anna Santarpane) ನಡೆಯಲಿದೆ. ಚಿತ್ರರಂಗದ(Sandalwood) ಎಲ್ಲ ವಿಭಾಗದವರು ಕೂಡ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬದವರು, ಚಿತ್ರರಂಗದವರು ಹಾಗೂ ಅಭಿಮಾನಿಗಳನ್ನು ಒಳಗೊಂಡು ಒಂದೇ ದಿನ ತಿಥಿ ಕಾರ್ಯ ಮಾಡಿದರೆ ಎಲ್ಲರೂ ಭಾಗವಹಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮೊದಲ ದಿನ ಕುಟುಂಬದವರು ಮಾತ್ರ ಹಾಜರಿದ್ದು, ತಿಥಿ ಕಾರ್ಯ ನೆರವೇರಿಸಲಿದ್ದಾರೆ. ನ.9ರಂದು ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಹಾಗೂ ಸಾರ್ವಜನಿಕರನ್ನು ಒಳಗೊಂಡ ಕಾರ್ಯವು ಅರಮನೆ ಮೈದಾನದಲ್ಲಿ ನಡೆಯಲಿದೆ.

Award for Puneeth Rajkumar; ಅನುಭವ ಮಂಟಪದಲ್ಲಿ ಬಸವಶ್ರೀ ಪ್ರದಾನ

ಅಪ್ಪು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಪುನೀತ್ ಕುಟುಂಬದವರ ಮನವಿ

'ಪುನೀತ್ (Puneeth Rajkumar) ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಒಬ್ಬರ ಹಿಂದೆ ಒಬ್ಬರು ಹೋದ್ರೆ ಭೂಮಿಯಲ್ಲಿ ಯಾರೂ ಇರುವುದಿಲ್ಲ. ನಮ್ಮ ನೋವನ್ನ ನಿಮ್ಮ ತಂದೆ ತಾಯಿಗೆ ಕೊಡಬೇಡಿ. ಪುನೀತ್‌ಗೆ ಈ ರೀತಿ ಅಗೌರವ ತೋರಿಸಬೇಡಿ. ಅವರು ದೇಹ ಬಿಟ್ಟು ಹೋಗಿದ್ದಾರೆ. ಅವರ ಕೆಲಸಗಳು, ಚಿತ್ರಗಳು ಎಲ್ಲವನ್ನೂ ಬಿಟ್ಟು ಹೋಗಿದ್ದಾರೆ. ಅದನ್ನು ನಾವು ಪಾಲಿಸೋಣ. ನಾವು ಬಹಳಷ್ಟು ದುಃಖದಲ್ಲಿದ್ದೇವೆ, ನಮ್ಮ ದುಃಖವನ್ನು ಇನ್ನಷ್ಟು ಹೆಚ್ಚಿಸಬೇಡಿ, ಅಪ್ಪು ಇನ್ನಿಲ್ಲ ಎಂದು ನಾವೆಲ್ಲಾ ನೋವಿನಲ್ಲಿದ್ದೇವೆ. ಇದನ್ನು ನುಂಗಿಕೊಂಡು ಮುಂದೆ ಸಾಗೋಣ' ಎಂದು ರಾಘವೇಂದ್ರ ರಾಜ್‌ಕುಮಾರ್ ಮನವಿ ಮಾಡಿಕೊಂಡಿದ್ದಾರೆ. 

ಅದೇ ರೀತಿ ಶಿವರಾಜ್ ಕುಮಾರ್ (Shiva Rajkumar) ಅವರೂ ಸಹ ಅಭಿಮಾನಿಗಳಲ್ಲ ಮನವಿ ಮಾಡಿದ್ದು, ಪುನೀತ್ ಅಗಲಿಕೆ ನೋವು ಮಾಸಿಲ್ಲ. ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುಬೇಡಿ ಅಂತ ತಿಳಿಸಿದ್ದಾರೆ. 
ದಯವಿಟ್ಟು ಆತ್ಮಹತ್ಯೆಯಂತಹ ತೀರ್ಮಾನ ತೆಗೆದುಕೊಳ್ಳಬೇಡಿ. ಅಪ್ಪುಗೂ ಇದು ಇಷ್ಟ ಆಗಲ್ಲ.  ನಿಮ್ಮ ಕುಟುಂಬ ಮತ್ತೆ ನಮಗೆ ಇದರಿಂದ ನೋವು ಹೆಚ್ಚಾಗುತ್ತದೆ. ಅಪ್ಪು ಹೆಸರಿನಲ್ಲಿ ಒಳ್ಳೆ ಕೆಲಸ ಮಾಡಿ ಅದನ್ನು ಬಿಟ್ಟು ಆತ್ಮಹತ್ಯೆ ತೀರ್ಮಾನ ಬೇಡ ಎಂದು ಶಿವಣ್ಣ ಕೇಳಿಕೊಂಡಿದ್ದಾರೆ.

ಮಾದರಿಯಾದ ಪುನೀತ್‌ ನೇತ್ರದಾನ: ಸಾವಿರಾರು ಮಂದಿ ನೋಂದಣಿ

ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ನಂತರ ಅವರ ಕಣ್ಣುಗಳನ್ನು(Eye) ಕುಟುಂಬ ಸದಸ್ಯರು ದಾನ ಮಾಡಿದ್ದು ಮತ್ತು ಆ ಕಣ್ಣುಗಳು ನಾಲ್ವರು ಅಂಧರಿಗೆ(Blind) ಬೆಳಕು ನೀಡಿರುವುದು ರಾಜ್ಯದಲ್ಲಿ(Karnataka) ನೇತ್ರದಾನದ(Eye Donate) ಹೊಸ ಪರಂಪರೆಯನ್ನೇ ಸೃಷ್ಟಿಸಿದೆ. ರಾಜ್ಯದ ಕಣ್ಣಿನ ಆಸ್ಪತ್ರೆಗಳಿಗೆ(Eye Hospital) ನೇತ್ರದಾನ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದಾರೆ.

ಹಬ್ಬಕ್ಕೂ ಮೊದಲೇ ಶುಭಾಶಯ ಕೋರಿದ್ದ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿದ್ದ ಅಪ್ಪು

ಈ ಹಿಂದೆ ಕಣ್ಣು ದಾನ ಮಾಡಲು ಬೆರಳೆಣಿಕೆಯ ಮಂದಿ ಉತ್ಸಾಹ ತೋರುತ್ತಿದ್ದರು. ಅದರಲ್ಲಿಯೂ ಕೋವಿಡ್‌-19 ಸಾಂಕ್ರಾಮಿಕ ಕಾಲಿಟ್ಟಬಳಿಕ ಕಣ್ಣಿನ ದಾನ ಬಹುತೇಕ ಸ್ಥಗಿತವೇ ಆಗಿತ್ತು. ಆದರೆ ಬೈಕ್‌ ಅಪಘಾತದಲ್ಲಿ ದುರ್ಮರಣಕ್ಕೀಡಾದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಅವರು ಕಣ್ಣಿನ ದಾನ ಮಾಡಿದ್ದು ನೇತ್ರದಾನ ಚಟುವಟಿಕೆಗೆ ತುಸು ಉತ್ಸಾಹ ಮೂಡಿಸಿತ್ತು. ಇದೀಗ ಪುನೀತ್‌ ಅವರ ಕಣ್ಣಿನ ದಾನ ನೇತ್ರದಾನದ ಹೊಸ ಅಲೆಯನ್ನೇ ಸೃಷ್ಟಿಸಿದೆ.
ಪುನೀತ್‌ ಮತ್ತು ಅವರ ತಂದೆ, ವರನಟ ಡಾ. ರಾಜ್‌ಕುಮಾರ್‌(Dr Rajkumar) ಕಣ್ಣಿನ ದಾನ ಮಾಡಿದ್ದ ನಾರಾಯಣ ನೇತ್ರಾಲಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ ಒಂದು ಸುಮಾರು ಸಾವಿರ ಮಂದಿ ನೇತ್ರದಾನಕ್ಕೆ ಮುಂದಾಗುತ್ತಿದ್ದಾರೆ. ಈ ಪ್ರವೃತ್ತಿ ನಗರದ ಇನ್ನೂ ಅನೇಕ ಕಣ್ಣಿನ ಆಸ್ಪತ್ರೆಗಳು ಸೇರಿದಂತೆ ರಾಜ್ಯದ ವಿವಿಧೆಡೆ ಕಂಡು ಬಂದಿದೆ.

ಈ ಮೊದಲ ಪ್ರತಿದಿನ ಬೆರಳೆಣಿಕೆಯ ಮಂದಿ ಕಣ್ಣಿನ ದಾನದ ಅರ್ಜಿ ಫಾರಂಗಳನ್ನು ತೆಗೆದುಕೊಂಡು ತುಂಬಿಸಿ ಕೊಡುತ್ತಿದ್ದರು. ಕಣ್ಣಿನ ಚಿಕಿತ್ಸೆಯ ಶಿಬಿರಗಳನ್ನು ಮಾಡಿದಾಗ ಅಲ್ಲಿ ಫಾರಂಗಳನ್ನು ವಿತರಿಸಿ ಕಣ್ಣಿನ ದಾನಕ್ಕೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತಿತ್ತು. ಆದರೆ ಸದ್ಯ ಸ್ವಯಂ ಪ್ರೇರಿತರಾಗಿ ಕಣ್ಣಿನ ದಾನಕ್ಕೆ ಒಲವು ತೋರುತ್ತಿದ್ದಾರೆ.

ಇದೇ ವೇಳೆ ಮೃತರಾದವರ ಕಣ್ಣಿನ ದಾನ ಮಾಡಲು ಅವರು ಕುಟುಂಬಸ್ಥರು ಆಸ್ಪತ್ರೆಗಳನ್ನು ಸಂಪರ್ಕಿಸುತ್ತಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ(Narayana Nethralaya) ಕಳೆದ ಐದು ದಿನದಲ್ಲಿ 30ಕ್ಕಿಂತ ಹೆಚ್ಚು ಕಣ್ಣನ್ನು ದಾನವಾಗಿ ಪಡೆಯಲಾಗಿದೆ.

ದಾನ ಮಾಡುವುದು ಹೇಗೆ ?

ಆನ್‌ಲೈನ್‌ ಅಥವಾ ಕಣ್ಣಿನ ಆಸ್ಪತ್ರೆಗೆ ಹೋಗಿ ಮೂಲಕ ಕಣ್ಣು ದಾನಕ್ಕೆ ಒಪ್ಪಿಗೆ ಸೂಚಿಸುವ ಅರ್ಜಿ ಭರ್ತಿ ಮಾಡಬೇಕು. ಕಣ್ಣುಗಳನ್ನು ದಾನ ಮಾಡಿದ ವ್ಯಕ್ತಿ ಮೃತರಾದರೆ ಕುಟುಂಬದ ಸದಸ್ಯರು ವೈದ್ಯಕೀಯ ತಂಡಕ್ಕೆ ತಿಳಿಸುತ್ತಾರೆ. ದಾನಿಯ ಮರಣದ ಆರು ಗಂಟೆಗಳ ಒಳಗೆ ಅವರ ಕಣ್ಣುಗಳನ್ನು ತೆಗೆದುಕೊಳ್ಳುತ್ತಾರೆ.
 

Follow Us:
Download App:
  • android
  • ios