Asianet Suvarna News Asianet Suvarna News

ಎಲ್ಲರಂತೆ ನಮಗೂ ಕಷ್ಟ ಬರುತ್ತದೆ, ಯುವ ಮತ್ತು ವಿನಯ್ ತಲೆ ಬಗ್ಗಿಸಿಕೊಂಡು ನಡೆಯಬೇಕು: ರಾಘವೇಂದ್ರ ರಾಜ್‌ಕುಮಾರ್

ಅಭಿಮಾನಿಗಳ ಪ್ರೀತಿಯನ್ನು ನೋಡಿ ಖುಷಿ ಪಟ್ಟ ರಾಘವೇಂದ್ರ ರಾಜ್‌ಕುಮಾರ್. ಪೆಪೆ ಸಿನಿಮಾ ಹೆಚ್ಚಿಸಿದೆ ನಿರೀಕ್ಷೆ....

Kannada actor Raghavendra Rajkumar talks about kids Yuva and Vinya fans love vcs
Author
First Published Aug 24, 2024, 10:07 PM IST | Last Updated Aug 24, 2024, 10:07 PM IST

ದೊಡ್ಡ ಮನೆ ಕುಡಿಗಳಾದ ಯುವ ರಾಜ್‌ಕುಮಾರ್ ಮತ್ತು ವಿಜಯ್ ರಾಜ್‌ಕುಮಾರ್ ಕನ್ನಡ ಇಂಡಸ್ಟ್ರಿಯ ಮುಂದಿನ ರೂಲರ್ಸ್‌ ಅನ್ನೋದು ಎಲ್ಲರ ಬಾಯಲ್ಲಿ ಕೇಳಿ ಬರುತ್ತಿರುವ ಮಾತು. ವಿನಯ್ ರಾಜ್‌ಕುಮಾರ್ ನಟನೆಯ ಪೆಪೆ ಸಿನಿಮಾದ ಟೀಸರ್ ಅದ್ಧೂರಿಯಾಗಿ ರಿಲೀಸ್ ಆಗಿದೆ, ಇಷ್ಟು ದಿನ ಆಯ್ಕೆ ಮಾಡಿದ ಕಥೆಗಳಿಗಿಂತ ಈ ಕಥೆ ವಿಭಿನ್ನವಾಗಿದೆ ಎಂದು ಸಿನಿ ಪ್ರೇಮಿಗಳೇ ಹೇಳುತ್ತಿದ್ದಾರೆ. ವಿನಯ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನ ರಾಘಣ್ಣ ನಿವಾಸದ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕಷ್ಟ ಸುಖದ ಸಮಯದಲ್ಲಿ ಅಭಿಮಾನಿಗಳು ಎಷ್ಟು ಸಪೋರ್ಟಿವ್ ಆಗಿದ್ದಾರೆ ಎಂದು ರಾಘಣ್ಣ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ನನ್ನ ಮಕ್ಕಳಿಗೆ ಇಷ್ಟೋಂದು ಯಶಸ್ಸು ಕೊಡುತ್ತಿದ್ದಾರೆ ಒಬ್ಬ ತಂದೆಯಾಗಿ ಇದಕ್ಕಿಂತ ಬೇರೆ ಸಂತೋಷ ಇಲ್ಲ. ತಂದೆಯಾಗಿ ಖುಷಿಯಾಗಿರುವ ಇಷ್ಟೋಂದು ಜನರನ್ನು ನೋಡಲು ಸ್ವರ್ಗ ಅನಿಸುತ್ತದೆ. ಅಪ್ಪಾಜಿ ಮತ್ತು ಅಮ್ಮ ಇದನ್ನು ನೋಡಲು ಇಲ್ಲ ಅನ್ನೋ ಬೇಸರ ಇದೆ. ಅಭಿಮಾನಿಗಳನ್ನು ಅಪ್ಪಾಜಿ ದೇವರು ಎಂದು ಹೇಳಿದ್ದಾರೆ...ಈಗ ಆ ದೇವರೇ ನಮಗೆ ಬಂದು ಆಶೀರ್ವಾದ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು  ಶಿವಣ್ಣ, ನಾನು, ಯುವ ಮತ್ತು ವಿನಯ್ ತಲೆ ಬಗ್ಗಿಸಿಕೊಂಡು ಕಾಪಾಡಿಕೊಂಡು ನಡೆಯಬೇಕು ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿದ್ದಾರೆ.

ಮದುವೆ ಬೆನ್ನಲ್ಲೇ ಕಾರು ಮಾರಿದ ಯೂಟ್ಯೂಬರ್ ಮಧು ಗೌಡ; ಶೋಕಿಗೆ ಎಲ್ಲನೂ ಮಾರಬೇಕು ಎಂದ ನೆಟ್ಟಿಗರು!

ವಿಜಯ್ ಮತ್ತು ಯುವ ಕಷ್ಟ ಪಟ್ಟು ಬೆಲೆ ಕೊಟ್ಟು ತಲೆ ಬಗ್ಗಿಸಿಕೊಂಡು ಮುಂದೆ ನಡೆಯಬೇಕು. ಪ್ರತಿಯೊಂದು ಕೆಲಸದಲ್ಲಿ ಚಾಲೆಂಜ್ ಇರುತ್ತದೆ ಯಾವುದನ್ನೂ ಸುಮ್ಮನೆ ಸಂಪಾದನೆ ಮಾಡಲು ಆಗುವುದಿಲ್ಲ. ಯಾವುದೇ ಸಂದರ್ಭ ಬಂದರೂ ಅಭಿಮಾನಿಗಳು ದೊಡ್ಡ ಮನೆಯವರ ಕೈ ಬಿಡುವುದಿಲ್ಲ ಅದೇ ನಮಗೆ ಶಕ್ತಿ ಮತ್ತು ಪ್ರೋತ್ಸಾಹ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.

ದರ್ಶನ್ ಜೈಲಿನಲ್ಲಿ ಪಶ್ಚಾತಾಪ ಪಡ್ತಿದ್ದಾರೆ, ನನ್ನ ತಬ್ಬಿಕೊಂಡು ಮತ್ತೆ ಬರಬೇಡ ಅಣ್ಣ ಎಂದು ಕಣ್ಣೀರಿಟ್ಟು: ವಿನೋದ್ ರಾಜ್ ಭಾವುಕ

ಕಷ್ಟ ಸುಖ ಅನ್ನೋದು ಎಲ್ಲರಿಗೂ ಬರುತ್ತದೆ ಹಾಗೆ ನಮಗೂ ಬರುತ್ತದೆ ಆದರೆ ಏನೇ ಬಂದರೂ ನಮ್ಮ ಬೆನ್ನು ಎಲುಭಾಗಿ ನಮ್ಮ ಅಭಿಮಾನಿಗಳು ಇದ್ದಾರೆ ಎಂದಿದ್ದಾರೆ ರಾಘಣ್ಣ. 

Latest Videos
Follow Us:
Download App:
  • android
  • ios