Asianet Suvarna News Asianet Suvarna News

ದರ್ಶನ್ ಜೈಲಿನಲ್ಲಿ ಪಶ್ಚಾತಾಪ ಪಡ್ತಿದ್ದಾರೆ, ನನ್ನ ತಬ್ಬಿಕೊಂಡು ಮತ್ತೆ ಬರಬೇಡ ಅಣ್ಣ ಎಂದು ಕಣ್ಣೀರಿಟ್ಟು: ವಿನೋದ್ ರಾಜ್ ಭಾವುಕ

ದರ್ಶನ್ ನೆನೆದು ಭಾವುಕರಾದ ವಿನೋದ್ ರಾಜ್. ಜೈಲಿಗೆ ಮತ್ತೆ ಬರಬೇಡ ಅಣ್ಣ ಎಂದು ತಬ್ಬಿಕೊಂಡರು ಎಂದ ನಟ......

Kannada actor Vinod raj recalls meeting Darshan in jail says he is my brother vcs
Author
First Published Aug 24, 2024, 5:45 PM IST | Last Updated Aug 24, 2024, 5:56 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್‌ರನ್ನು ಭೇಟಿ ಮಾಡಲು ವಾರಕ್ಕೊಮ್ಮೆ ಸೆಲೆಬ್ರಿಟಿಗಳು ಆಗಮಿಸುತ್ತಾರೆ. ಈಗಾಗಲೆ ಎರಡು ಸಲ ದರ್ಶನ್‌ರನ್ನು ಭೇಟಿ ಮಾಡಿರುವ ವಿನೋದ್ ರಾಜ್‌ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. 

ದರ್ಶನ್ ಅವರ ಮೇಲೆ ನನಗೆ ಪ್ರೀತಿ ಮತ್ತು ಅನುಕಂಪವಿದೆ. ಈ ಹಿಂದೆ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದೆ, ಅದಾದ ಮೇಲೆ ನನ್ನ ತಾಯಿ ಆರೋಗ್ಯದಲ್ಲಿ ಏರುಪೇರು ಕಂಡಾಗ ಮನೆಗೆ ಬಂದು ನೋಡಿದ್ದರು. ಆಗ ಕಾಲಿಗೆ ಬೀಳುತ್ತಾರೆ...ನೀನು ಹೀರೋ ಕಣ್ಣನ್ನ ನಾನು ವಿಲನ್ ಅಂತಾರೆ. ದರ್ಶನ್ ಕೊಡುವ ಗೌರವ ಮತ್ತು ಬೆಲೆಯನ್ನು ನೋಡಿದಾಗ ಈ ರೀತಿ ಘಟನೆ ಹೇಗೆ ಆಯ್ತು ಅನ್ನೋದು ಅರ್ಥವೇ ಆಗುತ್ತಿಲ್ಲ. ನನ್ನ ತಾಯಿ ಮಲಗಿದ್ದಾಗ ದರ್ಶನ್ ಆಗಮಿಸಿದ್ದರು..ಅಮ್ಮ ಯಾರು ಬಂದಿದ್ದಾರೆ ನೋಡು ಎಂದು ಹೇಳಿದೆ ಅಗ ಕಣ್ಣು ಬಿಟ್ಟು ನೋಡಿದ್ದರು....ಅವರಿಗೆ ಪ್ರತಿಯೊಂದು ಗೊತ್ತಾಗುತ್ತಿತ್ತು. ಅಣ್ಣ ದಯವಿಟ್ಟು ಅಮ್ಮ ಮಲಗಿದ್ದಾರೆ ಎಬ್ಬಿಸಬೇಡಿ ಎಂದು ದರ್ಶನ್ ಹೇಳಿದ್ದರು. ಮೃಧು ಮನಸ್ಸಿನ ವ್ಯಕ್ತಿ ದರ್ಶನ್‌ಗೆ ಈ ರೀತಿ ಯಾಕೆ ಆಯ್ತು ಎಂದು ಸಾಕಷ್ಟು ಸಲ ಯೋಚನೆ ಮಾಡಿದ್ದೀನಿ. ಈ ಜಗಳ ವೈ ಮನಸ್ಸುಗಳ ವಿಚಾರ ನಮಗೆ ಅರ್ಥವಾಗುವುದಿಲ್ಲ ಆದರೆ ನಮ್ಮ ಕಣ್ಣಿಗೆ ಕಾಣುವ ದರ್ಶನ್‌ಗೆ ಈ ರೀತಿ ಆಗಿರುವುದು ಕೇಳಿ ಬೇಸರ ಆಯ್ತು ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ವಿನೋದ್ ರಾಜ್‌ ಮಾತನಾಡಿದ್ದಾರೆ. 

ರಸ್ತೆ ದಾಟಲು ಒದ್ದಾಡುತ್ತಿದ್ದ ಅನುಪಮಾ ಗೌಡರನ್ನು ಸೇವ್ ಮಾಡಿದ ನಟ ದರ್ಶನ್; ವಿಡಿಯೋ ವೈರಲ್!

ದರ್ಶನ್‌ ಕಣ್ಣು ಕೆಂಪಾಗಿದ್ದು ನನಗೆ ತಡೆಯಲು ಆಗಲಿಲ್ಲ ನಾನು ಅತ್ತಿದ್ದನ್ನು ನೋಡಿ ಪಾಪ ದರ್ಶನ್ ಕಣ್ಣೀರಿಟ್ಟರು ಅನಿಸುತ್ತದೆ. ಅಳ್ಬೇಡ ಕಣ್ಣನ್ನ ಪರ್ವಾಗಿಲ್ಲ ಬಿಡಣ್ಣ ಎಂದು ನನಗೆ ಸಮಾಧಾನ ಮಾಡಿದ್ದರು. ಹೇಗಿದ್ಯಾಪ್ಪ ಚೆನ್ನಾಗಿದ್ಯಾ....ಇಷ್ಟು ದಿನ ಇಲ್ಲಿ ಹೇಗಿದ್ಯಾ ಎಂದು ಕೇಳಿದೆ..(ವಿನೋದ್ ರಾಜ್ ಕಣ್ಣೀರಿಟ್ಟರು)...ದರ್ಶನ್‌ ಜೊತೆ ಮಾತನಾಡುವಾಗ ತಡೆದುಕೊಳ್ಳಲು ಆಗಲಿಲ್ಲ ಏಕೆಂದರೆ ಕಲಾವಿದರಿಗೆ ಯಾವತ್ತೂ ಈ ರೀತಿ ಪರಿಸ್ಥಿತಿ ಬರಬಾರದು ಎಂದು ವಿನೋದ್ ರಾಜ್‌ ಹೇಳಿದ್ದಾರೆ. 

ಕೆಜಿಎಫ್‌ ಚಿತ್ರದ ಖಡಕ್ ವಿಲನ್ ಅವಿನಾಶ್‌ ಆಂಡ್ರ್ಯೂಸ್‌ ಆಫ್‌ ಸ್ಕ್ರೀನ್‌ ಪತ್ನಿ ಇವರೇ ನೋಡಿ!

ಪುನೀತ್ ರಾಜ್‌ಕುಮಾರ್ ನಗು ಮುಖ, ದರ್ಶನ್ ಈ ಪರಿಸ್ಥಿತಿ ನೋಡಿ ಬೇಸರ ಆಗುತ್ತಿದೆ. ಈ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಭಗವಂತ ಅಂತ ಕೈ ಮುಗಿದರೆ ನೋಡಿದರೆ ಈ ರೀತಿ ಘಟನೆ. ದರ್ಶನ್ ತುಂಬಾ ಪಶ್ಚಾತಾಪದಲ್ಲಿ ಇದ್ದಾರೆ ನಾವು ಹೋದಾಗ ನಮ್ಮನ್ನು ವಿಚಾರಿಸಿಕೊಳ್ಳುತ್ತಾರೆ ಆದರೆ ಅವರ ನೋವನ್ನು ಹೇಳಿಕೊಳ್ಳುವುದಿಲ್ಲ. ಮತ್ತೊಂದು ಸಲ ಹೋದಾಗ ಬಿಗಿಯಾಗಿ ತಬ್ಬಿಕೊಂಡು ಅಣ್ಣ ನೀನು ಮತ್ತೊಂದು ಸಲ ಜೈಲಿಗೆ ಬರಬೇಡ ಅಣ್ಣ  ನೀನು ಹೋಗಣ್ಣ ನಾನು ಹೊರಗಡೆ ಬಂದ ಮೇಲೆ ನಿನ್ನ ಹತ್ತಿರ ಬರುತ್ತೀನಿ ಎಂದು ಕಳುಹಿಸಿಬಿಟ್ಟರು. ದರ್ಶನ್‌ ನನ್ನನ್ನು ಅಣ್ಣ ಎಂದು ಕರೆಯತ್ತಾರೆ...ಅ ಧ್ವನಿ ಕೇಳಿಸಿಕೊಂಡು ಕತ್ತು ಕತ್ತರಿಸಿದಂತೆ ಆಗುತ್ತದೆ. 5ನೇ ತಾರೀಖು ದರ್ಶನ್ ಜೊತೆ ಮಾತನಾಡಿದೆ ಆಗ ಏನು ನಿಮ್ಮ ಧ್ವನಿ ಹೀಗಾಗಿದೆ ಸರಿಯಾಗಿದ್ದೀರಾ ಆರೋಗ್ಯವಾಗಿದ್ದೀರಾ ಎಂದು ವಿಚಾರಿಸಿದ್ದರು ಚೆನ್ನಾಗಿದ್ದರೂ ಯಾಕೆ ಕೇಳುತ್ತಿದ್ದಾರೆ ಅಂತ ಸುಮ್ಮನಾದೆ ಆಮೇಲೆ ನೋಡಿದರೆ 7ನೇ ತಾರೀಖು ಆಪರೇಷನ್ ಮಾಡಿಸಿಕೊಂಡೆ ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ. 

Latest Videos
Follow Us:
Download App:
  • android
  • ios