Asianet Suvarna News Asianet Suvarna News

Gandhada Gudi Teaser: ಪುನೀತ್ ರಾಜ್‌ಕುಮಾರ್ ಕನಸು ನನಸಾಗಿಸಿದ ಪತ್ನಿ!

ಪುನೀತ್ ರಾಜ್‌ಕುಮಾರ್ ಕನಸಿಗೆ ಸಾಥ್ ಕೊಟ್ಟ ಪತ್ನಿ ಅಶ್ವಿನಿ. ಪಿಆರ್‌ಕೆ ಯುಟ್ಯೂಬ್‌ ಚಾನೆಲ್‌ನಲ್ಲಿದೆ ಗಂಧದ ಗುಡಿ ಟೀಸರ್.....

Kannada actor Puneeth Rajkumar Gandhada Gudi teaser release in PRK youtube channel vcs
Author
Bangalore, First Published Dec 6, 2021, 11:36 AM IST

ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಏನೇ ಮಾಡಿದ್ದರೂ ಸೂಪರ್. ವ್ಯಕ್ತಿ ಸೂಪರ್, ವ್ಯಕ್ತಿತ್ವ ಸೂಪರ್ ಅವರು ಮಾಡಿದ ಸಮಾಜ ಸೇವೆ (Social Work) ಸೂಪರ್ ಅಂತ ಈಗnt ಸಮಾಧಿ ನೋಡಲು ಬರುತ್ತಿರುವ 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಫೋಟೋ ನೋಡಿದರೆ ಇಲ್ಲಿಯೇ ಎಲ್ಲೋ ಚಿತ್ರೀಕರಣ ಮಾಡುತ್ತಿದ್ದಾರೆ, ಆಗ ಸೆರೆ ಹಿಡಿದ ಫೋಟೋ ಎನಿಸುತ್ತದೆ. ಆದರೆ ವಾಸ್ತವ ಬೇರೆನೇ. ಇರಲಿ....

ಕೊರೋನಾ ಲಾಕ್‌ಡೌನ್‌ (Covid19 Lockdown) ಸಮಯಲ್ಲಿ ಪುನೀತ್‌ ರಾಜ್‌ಕುಮಾರ್ ವರ್ಕೌಟ್ (Workout) ಮಾತ್ರವಲ್ಲದೇ ಕರ್ನಾಟಕದ ಕಾಡುಗಳಿಗೆ ಭೇಟಿ ನೀಡಿ, ಅಲ್ಲಿನ ಸುಂದರ ತುಣುಕನ್ನು ಡಾಕ್ಯುಮೆಂಟರಿ (Documentary) ಮೂಲಕ 2021ರ ಕನ್ನಡ ರಾಜ್ಯೋತ್ಸವಕ್ಕೆ ಜನರ ಮುಂದಿಡಲು ರೆಡಿಯಾಗಿದ್ದರು ಆದರೆ ಹೃದಯಘಾತದಿಂದ (Heart attack) ಅವರೇ ನಮ್ಮನ್ನು ಅಗಲಿದರು. ಪಿಆರ್‌ಕೆ ಸಂಸ್ಥೆ ನಡೆಸುತ್ತಿರುವ ಅವರ ಪತ್ನಿ ಅಶ್ವಿನಿ, ಪುನೀತ್‌ ಕನಸು ನನಸು ಮಾಡಲು ಮುಂದಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳ ಸಾಥ್‌ನೊಂದಿಗೆ ಚಿತ್ರದ ಟೈಟಲ್ ಟೀಸರ್ ರಿಲೀಸ್ ಮಾಡಿದ್ದಾರೆ. 

ಹೌದು! ಇಂದು ಪುನೀತ್ ಅವರ ಗಂಧದ ಗುಡಿ (Gandhadagudi) ಟೈಟಲ್ ಟೀಸರ್ ಬಿಡುಗಡೆಯಾಗಿದೆ.  ವಿಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫರ್ ಅಮೋಘವರ್ಷ (Amoghavarsha) ಅವರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಅವರು ನಿರ್ಮಾಣ ಮಾಡಿರುವ ಈ ವಿಡಿಯೋವನ್ನು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ, ಅಜನೀಶ್ ಲೋಕನಾಥ್ (Ajaneesh Loknath ) ಸಂಗೀತವಿದೆ. ಸಹ ನಿರ್ದೇಶಕರಾಗಿ ಅಂಕಿತ್, ಪ್ರೊಡಕ್ಷನ್ ಮುಖ್ಯಸ್ಥರಾಗಿ ಸತೀಶ್, ಪ್ರೊಡಕ್ಷನ್ ಕಂಟ್ರೋಲರ್ ಆಗಿ ಋಷ್ಯಶೃಂಗ, ಲೈನ್ ಪ್ರೊಡ್ಯೂಸರ್ ಆಗಿ ಸುಧೀಂದ್ರ ಕುಮಾರ್, ಸ್ಕ್ರಿಪ್‌ನ ಫ್ಲೌಂಜ್ ರೈಟರ್ಸ್ ಬ್ಲಾಕ್ ಬರೆದಿದ್ದಾರೆ. ಟ್ಯಾಲೆಂಟೆಡ್‌ ವ್ಯಕ್ತಿಗಳು ಕೈ ಜೋಡಿಸಿ ಮಾಡಿರುವ ಡಾಕ್ಯುಮೆಂಟರ್‌ಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಮಾಡಿದೆ ಡಾ.ರಾಜ್‌ಕುಮಾರ್ ಕುಟುಂಬ. 

ವಿಡಿಯೋ ಕೊನೆಯಲ್ಲಿ ಅಪ್ಪು ಆಕಾಶ ನೋಡುತ್ತಿರುವ ವಿಡಿಯೋ ತೋರಿಸಿ 2022ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. Based on true Events ಎಂದು ಆರಂಭದಲ್ಲಿ ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಟಾರ್ಚ್‌ ಆನ್ ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಆನಂತರ ಗನ್ ಲೋಡ್ (Gun Load) ಮಾಡಿಕೊಳ್ಳುವುದು, ಬುಡು ಬುಡುಕೆಯವರು ಏನೋ ಪೂಜೆ ಮಾಡುವುದು... ಹೀಗೆ ಒಂದಾದ ಮೇಲೊಂದು ದೃಶ್ಯಗಳು ಅದ್ಭುತವಾಗಿದೆ. ಚಲಿಸುತ್ತಿರುವ ಮೋಡಿಗಳು, ಹಸಿರು ಬಣ್ಣದ ಹಾವು, ಕೊಡಲಿ ಹಿಡಿದುಕೊಂಡು ನಡೆಯುತ್ತಿರುವ ಅರಣ್ಯ ಅಧಿಕಾರಿಗಳು...ಪದೇ ಪದೇ ಈ ಟೈಟಲ್ ಟೀಸರ್ ನೋಡಬೇಕು ಎಂದೆನಿಸುವುದರಲ್ಲಿ ಅನುಮಾವಿಲ್ಲ. 

ಅಂಡರ್ ವಾಟರ್ (Under Water) ಸ್ವಿಮ್ ಮಾಡುವುದು, ಕಾಡಿನಲ್ಲಿ ಟೆಂಟ್ ಹಾಕಿಕೊಂಡು ಉಳಿದುಕೊಂಡಿರುವುದು, ಸೂರ್ಯೋದಯ ವೀಕ್ಷಿಸಿರುವುದು, ಸಣ್ಣ ರಸ್ತೆಯೂ ಬಿಡದೇ ಪ್ರಯಾಣ ಮಾಡಿರುವುದು, ಜಲಪಾತದ ತುದಿಯಲ್ಲಿ ನಿಂತು ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಿರುವುದು ಹೀಗೆ ಪ್ರತಿಯೊಂದರ ಸಣ್ಣ ತುಣುಕು ಟೀಸರ್‌ನಲ್ಲಿ ಸೇರಿಸಲಾಗಿದೆ.  ಟೈಟಲ್ 'ಗಂಧದ ಗುಡಿ' ಎಂದು ರಿವೀಲ್ ಮಾಡಿದಾಗ ರಾಜ್‌ಕುಮಾರ್ (Dr Rajkumar) ಅವರ ಧ್ವನಿ ನೀಡಲಾಗಿದೆ. 'ನಿಮ್ಮ ಕೈ ಮುಗಿದು ಕೇಳ್ಕೊಳತ್ತೀನಿ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು, ಗಂಧದ ಗುಡಿಯನ್ನು ಉಳಿಸು,' ಎಂದು ಆಗ್ರಹಿಸಿದ್ದಾರೆ.  ಟೈಟಲ್ ಟೀಸರ್ ನೋಡುವಾಗ ಅದೆಷ್ಟೋ ಅಭಿಮಾನಿಗಳ ಕಣ್ಣಂಚಲಿ ನೀರು ಕಾಣಬಹುದು. ವಿಡಿಯೋದಲ್ಲಿ ಅಪ್ಪು ನಗು ನೋಡಿ ಮೊದಲ ಬಾರಿ ಎಲ್ಲರೂ ಅತ್ತಿದ್ದಾರೆ.

 

Follow Us:
Download App:
  • android
  • ios