Asianet Suvarna News Asianet Suvarna News

ಹೊಸ ಅಲೆಯ ಚಿತ್ರಕ್ಕಾಗಿ ಪಿಆರ್‌ಕೆ ಸಂಸ್ಥೆ ಹುಟ್ಟುಹಾಕಿದ್ದ Puneeth Rajkumar!

- ಪುನೀತ್ ರಾಜ್‌ಕುಮಾರ್ ಕನಸಿಗ ಸಂಸ್ಥೆ ಪಿಆರ್‌ಕೆ

- ತಂದೆ ಬಯೋಪಿಕ್ ನಿರ್ಮಿಸುವ ಆಸೆ

- ಜೇಮ್ಸ್‌, ದ್ವಿತ್ವ ಸೇರಿ ಹಲವು ಸಿನಿಮಾ ಅತಂತ್ರ

Kannada actor Puneeth Rajkumar Ashwini dream production PRK for young talents vcs
Author
Bangalore, First Published Oct 30, 2021, 11:24 AM IST

ನಟರಾಗಿದ್ದುಕೊಂಡೇ ಚಿತ್ರರಂಗದ ಅಭಿವೃದ್ಧಿಗಾಗಿ ಬಹು ದೊಡ್ಡ ಕನಸು ಕಂಡಿದ್ದವರು ಪುನೀತ್‌ ರಾಜ್‌ಕುಮಾರ್‌. ಕ್ಲಾಸಿಕ್‌ ಕತೆಗಳನ್ನು ಸಿನಿಮಾ ಮಾಡಬೇಕು, ಹೊಸ ಹೊಸ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಅವಕಾಶ ಕೊಡಬೇಕು, ಕನ್ನಡದಲ್ಲೂ ಇಂಗ್ಲಿಷ್‌ ಮಾದರಿಯ ಸಿನಿಮಾಗಳನ್ನು ನಿರ್ಮಿಸುವ ಬಹು ದೊಡ್ಡ ಕನಸು ಕಂಡಿದ್ದರು. ಆ ಉದ್ದೇಶದಿಂದಲೇ ತಮ್ಮ ಸಾರಥ್ಯದಲ್ಲಿ ಪಿಆರ್‌ಕೆ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಲಾ, ಫ್ರೆಂಚ್‌ ಬಿರಿಯಾನಿ, ಮಾಯಾಬಜಾರ್‌, ಕವಲುದಾರಿ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದರು. ಅಲ್ಲದೆ ಹೊಸಬರ ಚಿತ್ರಗಳ ಆಡಿಯೋಗೂ ಮಾರುಕಟ್ಟೆ ಮಾಡುತ್ತಿದ್ದರು. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಟೆಂಟ್‌ ಆಧಾರಿತ ಸಿನಿಮಾಗಳು ಹೆಚ್ಚೆಚ್ಚು ಬರಬೇಕು ಎಂದು ಕನಸು ಕಂಡಿದ್ದರು.

"

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

ಪಿಆರ್‌ಕೆ ನಿರ್ಮಾಣದ ಎಸ್‌.ಅರ್ಜುನ್‌ ಕುಮಾರ್‌ ನಿರ್ದೇಶನದ ಇನ್ನೊಂದು ಚಿತ್ರ ‘ಫ್ಯಾಮಿಲಿ ಪ್ಯಾಕ್‌’ ಬಿಡುಗಡೆಯ ಹಾದಿಯಲ್ಲಿದೆ. ಇನ್ನೂ ಹಲವಾರು ಪ್ರಯೋಗಾತ್ಮಕ ಕನ್ನಡ ಸಿನಿಮಾ ನಿರ್ಮಾಣಕ್ಕೂ ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ ಮುಂದಾಗಿತ್ತು. ಸಾಕಷ್ಟುಸಿನಿಮಾಗಳ ಆಡಿಯೋಗಳನ್ನೂ ಸಹ ಈ ಬ್ಯಾನರ್‌ನಿಂದ ಬಿಡುಗಡೆ ಮಾಡಲಾಗಿದೆ.

ರಾಜ್‌ ಬಯೋಪಿಕ್‌ಗೆ ನಿರ್ಧಾರ:

ಅಲ್ಲದೆ ತಂದೆ ವರನಟ ಡಾ.ರಾಜ್‌ಕುಮಾರ್‌ ಅವರ ಬಯೋಪಿಕ್‌ ನಿರ್ಮಿಸುವ ಆಸೆ ಪುನೀತ್‌ ಅವರಲ್ಲಿ ಇತ್ತು. ಪಿಆರ್‌ಕೆ ಪ್ರೊಡಕ್ಷನ್‌ ಅಡಿಯೇ ನಿರ್ಮಿಸಬೇಕೆಂಬ ಅಭಿಲಾಷೆ ಹೊಂದಿದ್ದರು. ‘ಅಪ್ಪಾಜಿ ಬಯೋಪಿಕ್‌ ಮಾಡುವ ಆಸೆ ಇದೆ. ಅದೊಂದು ದೊಡ್ಡ ಪ್ರಾಜೆಕ್ಟ್. ಸೂಕ್ತ ಕಲಾವಿದರು ಬೇಕು. ಅದಕ್ಕೊಂದು ಯೋಜನೆ ರೂಪಿಸಬೇಕು. ಅಂತಹ ಅವಕಾಶ ಲಭಿಸಿದರೆ ಖಂಡಿತ ಹಿಂದೆ ಸರಿಯುವುದಿಲ್ಲ’ ಎಂದು ಪುನೀತ್‌ ಹಲವು ಬಾರಿ ಹೇಳಿಕೊಂಡಿದ್ದರು.

Kannada actor Puneeth Rajkumar Ashwini dream production PRK for young talents vcs

ತಂದೆ ಡಾ.ರಾಜ್‌ ಬಗ್ಗೆ ಪುಸ್ತಕ ಬರೆದಿದ್ದ ಮಗ

‘ಡಾ.ರಾಜ್‌ಕುಮಾರ್‌- ದ ಪರ್ಸನ್‌ ಬಿಹೈಂಡ್‌ ಪರ್ಸನಾಲಿಟಿ’

ಇದು ತಮ್ಮ ತಂದೆ ಡಾ.ರಾಜ್‌ಕುಮಾರ್‌ ಅವರ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ದಾಖಲಿಸಿದ ಜೀವನಚರಿತ್ರೆ. ಡಾ.ಪ್ರಕೃತಿ ಬನವಾಸಿ ಇದನ್ನು ಬರವಣಿಗೆಗೆ ಇಳಿಸಿದ್ದಾರೆ. ತಮ್ಮ ಬದುಕಿನ ಮೇಲೆ ತಂದೆಯ ಪ್ರಭಾವ, ತಂದೆಯ ಜೊತೆಗೆ ಕಳೆದ ದಿನಗಳು, ಅಪರೂಪದ ಘಟನೆಗಳು ಇತ್ಯಾದಿಗಳನ್ನು ಬಯಾಗ್ರಫಿ ರೀತಿಯಲ್ಲಿ ಪುನೀತ್‌ ವಿವರಿಸುತ್ತಾ ಹೋಗಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್‌ಗಳೆರಡರಲ್ಲೂ ಈ ಕೃತಿ ಲಭ್ಯವಿದೆ. 272 ಪುಟಗಳು, ಒಂದು ಲಕ್ಷ ಪದಗಳು ಹಾಗೂ 1750 ಡಾ.ರಾಜ್‌, ಪುನೀತ್‌ ಹಾಗೂ ಅವರ ಕುಟುಂಬದ ಅಪರೂಪದ ಛಾಯಾಚಿತ್ರಗಳು ಈ ಬೃಹತ್‌ ಗ್ರಂಥದಲ್ಲಿವೆ. ಕಾಫಿ ಟೇಬಲ್‌ ಬುಕ್‌ ವಿನ್ಯಾಸದಲ್ಲಿರುವ ಈ ಪುಸ್ತಕ ಪುನೀತ್‌ ತನ್ನ ಜೀವಿತಾವಧಿಯಲ್ಲಿ ಮಾಡಿದ ಅಪರೂಪದ ಕಾರ್ಯಗಳಲ್ಲೊಂದು.

ನನ್ನ ಮಕ್ಕಳು ಈ ಫಿಲಂ ನೋಡ್ತಾರೆ ಅಂದಿದು: Puneeth Rajkumar

ಪಾರ್ವತಮ್ಮ ಪಬ್ಲಿಕೇಶನ್ಸ್‌ನಿಂದ ಪುನೀತ್‌ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಜನವರಿ 1, 2012ರಲ್ಲಿ ಈ ಕೃತಿ ಬಿಡುಗಡೆಯಾಗಿದೆ.

Kannada actor Puneeth Rajkumar Ashwini dream production PRK for young talents vcs

ಜೇಮ್ಸ್‌, ದ್ವಿತ್ವ ಸೇರಿ ಹಲವು ಸಿನಿಮಾ ಅತಂತ್ರ

ನಟ ಪುನೀತ್‌ ರಾಜ್‌ಕುಮಾರ್‌ ಅವರ ನಿಧನದಿಂದ ಚಿತ್ರರಂಗಕ್ಕೆ ಬಹು ದೊಡ್ಡ ನಷ್ಟಆಗಿದೆ. ಚೇತನ್‌ ಕುಮಾರ್‌ ನಿರ್ದೇಶನದಲ್ಲಿ ‘ಜೇಮ್ಸ್‌’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು. ಅದು ಡಬ್ಬಿಂಗ್‌ ಹಂತದಲ್ಲಿತ್ತು. ಲೂಸಿಯಾ ಪವನ್‌ ಕುಮಾರ್‌ ನಿರ್ದೇಶನದಲ್ಲಿ ‘ದ್ವಿತ್ವ’ ಸಿನಿಮಾ ಸೆಟ್ಟೇರಿ ಅದರ ಟೈಟಲ್‌ ಬಿಡುಗಡೆ ಮಾಡಲಾಗಿತ್ತು. ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರವಿದು. ಇದರ ಜತೆಗೆ ಸಿ.ಆರ್‌.ಮನೋಹರ್‌ ನಿರ್ಮಾಣ, ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡುವ ತಯಾರಿ ಮಾಡಿಕೊಂಡಿದ್ದರು. ವಿಶೇಷ ಎಂದರೆ ಇದು ಪುನೀತ್‌ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ ಸಿನಿಮಾ ಆಗಿತ್ತು. ಕತೆ ಕೇಳಿ ಒಪ್ಪಿಕೊಂಡಿದ್ದರು. ಮತ್ತೊಮ್ಮೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಜತೆ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದರು. ಅಡ್ವೆಂಚರ್‌ ಆಧಾರಿತ 90 ನಿಮಿಷಗಳ ಆವಧಿಯ ‘ಗಂಧದ ಗುಡಿ’ ಸಿನಿಮಾ ರೂಪಿಸಿದ್ದು, ಇದರ ಟ್ರೇಲರ್‌ ನ.1ಕ್ಕೆ ಬಿಡುಗಡೆ ಮಾಡುವುದಾಗಿ ಸ್ವತಃ ಪುನೀತ್‌ ಅವರೇ ಘೋಷಣೆ ಮಾಡಿದ್ದರು. ಇದರ ಜತೆಗೆ ಸಾಕಷ್ಟುಕತೆಗಳನ್ನು ಕೇಳಿದ್ದರು. ಆದರೆ, ಈಗ ಹಠಾತ್‌ ನಿಧನದಿಂದ ಪುನೀತ್‌ ಅವರಿಗಾಗಿ ಕಾಯುತ್ತಿದ್ದ ಸಿನಿಮಾಗಳು, ಕತೆಗಳು ಅನಾಥವಾಗಿವೆ.

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

ನಟ ಪುನೀತ್‌ರಾಜ್‌ಕುಮಾರ್‌ ನೆನೆದು ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಕಣ್ಣೀರಿಟ್ಟರು.

ಬಳ್ಳಾರಿಗೆ ಬಂದಾಗ ನಮ್ಮನೆಗೆ ಬಂದು ಹೋಗುತ್ತಿದ್ದರು. ಕೆಎಂಎಫ್‌ನ ರಾಯಭಾರಿಯಾಗಿದ್ದ ಪುನೀತ್‌ ಅವರು, ನಂದಿನಿ ಹಾಲಿನ ಉತ್ಪನ್ನಗಳ ಜಾಹೀರಾತಿಗೆ ಹಣ ಪಡೆಯಲು ನಿರಾಕರಿಸಿದ್ದರು.

‘ನಮ್ಮ ತಂದೆ ನಂದಿನಿ ಜಾಹೀರಾತಿಗೆ ಹಣ ಪಡೆಯಬಾರದು. ಅದು ರೈತರ ಸಂಸ್ಥೆ’ ಎನ್ನುತ್ತಿದ್ದರು. ಹೀಗಾಗಿ ನಂದಿನಿ ಉತ್ಪನ್ನಗಳಿಗೆ ನಾನು ಹಣ ಪಡೆಯುವುದಿಲ್ಲ. ಈ ಹಣವನ್ನು ರೈತರಿಗೆ ನೀಡಿ ಎನ್ನುತ್ತಿದ್ದರು. ಇಂತಹ ಮಹಾನ್‌ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ತಂದೆಯಂತೆ ಸರಳ, ಸಜ್ಜನಿಕೆ ರೂಪಿಸಿಕೊಂಡಿದ್ದ ಪುನೀತ್‌ರಾಜ್‌ಕುಮಾರ್‌ ಅವರು ಎಲ್ಲರ ಜತೆ ಸಹಜವಾಗಿ ಬೆರೆಯುತ್ತಿದ್ದರು. ಬೆಳಗ್ಗೆ ಪುನೀತ್‌ ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು.

ನಾನು ಕೆಎಂಎಫ್‌ ಅಧ್ಯಕ್ಷರಾಗಿದ್ದಾಗ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯನ್ನಾಗಿ ಮಾಡಿಕೊಂಡಿದ್ದೆವು. ಆಗಾಗ್ಗೆ ನಾವು ಭೇಟಿಯಾಗಿದ್ದೆವು. ಐದು ಬಾರಿ ಕಾರ್ಯಕ್ರಮದಲ್ಲಿ ಜತೆಯಾಗಿದ್ದೆವು. ಪ್ರತಿ ಬಾರಿ ಭೇಟಿಯಾದಾಗ ಖುಷಿಯಾಗುತ್ತಿತ್ತು. ಅವರ ಸಾವು ನಿಜಕ್ಕೂ ನನಗೆ ಆಘಾತ ತಂದಿದೆ. ಅತಂಹ ಸರಳ ವ್ಯಕ್ತಿತ್ವಕ್ಕೆ ಎಂತಹ ಸಾವು ಬಂತಲ್ಲಾ ಅಂತ ನನಗೆ ಕಣ್ಣೀರು ಬರುತ್ತಿದೆ. ಡಾ. ರಾಜ್‌ಕುಮಾರ್‌ ಅವರ ಪ್ರತಿರೂಪದಂತಿದ್ದ ಪುನೀತ್‌ ಯುವಕರಿಗೆ ಆದರ್ಶವಾಗಿದ್ದರು ಎಂದು ಶಾಸಕ ರೆಡ್ಡಿ ಕಣ್ಣೀರಾದರು.

Follow Us:
Download App:
  • android
  • ios