Asianet Suvarna News Asianet Suvarna News

6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್ ದಂಪತಿ

'ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕಣ್ಣಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್' ಎಂದು ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಗೆ ಶುಭಾಶಯವನ್ನು ತಿಳಿಸಿದ್ದಾರೆ.

Kannada Actor Prajwal Devaraj couple in celebration of 6th wedding anniversary
Author
Bangalore, First Published Oct 27, 2021, 1:58 PM IST
  • Facebook
  • Twitter
  • Whatsapp

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ರಾಗಿಣಿ ಪ್ರಜ್ವಲ್ (Ragini Prajwal) ಅವರು ನಿನ್ನೆಯಷ್ಟೇ ತಮ್ಮ ಮದುವೆ ವಾರ್ಷಿಕೋತ್ಸವವನ್ನು (Wedding Anniversary) ಆಚರಿಸಿಕೊಂಡಿದ್ದಾರೆ. ತಮ್ಮ ದಾಂಪತ್ಯಕ್ಕೆ ಆರು ವರ್ಷ ತುಂಬಿದ ಖುಷಿಯ ಪ್ರಯುಕ್ತ ಇಬ್ಬರೂ ಕೂಡ ತಮ್ಮ ಇನ್​ಸ್ಟಾಗ್ರಾಮ್ (Instagram)​ ಖಾತೆಯಲ್ಲಿ ಮದುವೆ ವಿಡಿಯೋ ಅಪ್​ಲೋಡ್​ ಮಾಡಿಕೊಂಡಿದ್ದಾರೆ.  ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ. ಮತ್ತು ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ಆಪ್ತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಈ ಜೋಡಿಗೆ ಶುಭಾಶಯ ಕೋರಿದ್ದಾರೆ.
 


'ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕಣ್ಣಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್' ಎಂದು ಬರೆದುಕೊಂಡು ಮದುವೆಯ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಜ್ವಲ್​ ಮತ್ತು ರಾಗಿಣಿ ಬಹುಕಾಲದ ಸ್ನೇಹಿತರು. ಇಬ್ಬರ ನಡುವಿನ ಸ್ನೇಹವು ನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಮನೆಯವರ ಒಪ್ಪಿಗೆಯಿಂದ ಈ ಜೋಡಿ ಮದುವೆಯಾಗಿತ್ತು. ಡ್ಯಾನ್ಸ್ (Dance)​​ ಮತ್ತು ಯೋಗದಲ್ಲಿ (Yoga) ಪರಿಣತಿ ಹೊಂದಿರುವ ರಾಗಿಣಿ ಅವರು ಉತ್ತಮ ನಟಿ ಕೂಡ ಹೌದು. ಅಮೇಜಾನ್​ ಪ್ರೈಂ (Amazon Prime) ವಿಡಿಯೋ ಮೂಲಕ ಬಿಡುಗಡೆಯಾದ 'ಲಾ' (Law) ಸಿನಿಮಾದಲ್ಲಿ ಅವರು ನಟಿಸಿದ್ದಾರೆ.     

ಪ್ರಜ್ವಲ್‌ ದೇವರಾಜ್‌ ನಟನೆಯ 'ವೀರಂ' ಸಿನಿಮಾದಲ್ಲಿ ಶಿಷ್ಯ ದೀಪಕ್‌ ವಿಲನ್‌!

ಪ್ರಜ್ವಲ್​ ದೇವರಾಜ್​ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 2020ರ ಆರಂಭದಲ್ಲಿ ತೆರೆಕಂಡ 'ಜಂಟಲ್​ಮ್ಯಾನ್​' (Gentleman) ಸಿನಿಮಾ ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿತು. 2021ರ ಫೆಬ್ರವರಿಯಲ್ಲಿ 'ಇನ್ಸ್​ಪೆಕ್ಟರ್​ ವಿಕ್ರಂ' (Inspector Vikram) ಬಿಡುಗಡೆ ಆಯಿತು. ಈಗ ಅವರು ತಮ್ಮ 35ನೇ ಚಿತ್ರ 'ಮಾಫಿಯಾ'ದ (Mafia) ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಗುರುದತ್‌ ಗಾಣಿಗ (Gurudat Ganiga) ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಜ್ವಲ್ ಅವರಿಗೆ ನಾಯಕಿಯಾಗಿ ಅದಿತಿ ಪ್ರಭುದೇವ (Aditi Prabhudeva) ನಟಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆಯಿದೆ.

ಈ ಶೋಗೆ ತೀರ್ಪುಗಾರರಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಪ್ರಜ್ವಲ್‌ ದೇವರಾಜ್‌!

ಇನ್ನು ಖದರ್‌ ಕುಮಾರ್‌ ನಿರ್ದೇಶನದ 'ವೀರಂ' (Veeram) ಸಿನಿಮಾದಲ್ಲಿ  ಪ್ರಜ್ವಲ್​ ದೇವರಾಜ್ ನಟಿಸುತ್ತಿದ್ದು, ಶಿಷ್ಯ ಚಿತ್ರದ ದೀಪಕ್‌ (Deepak) ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಈ ಪಾತ್ರಕ್ಕಾಗಿ ವಿಶೇಷವಾದ ಗೆಟಪ್‌ ಹಾಗೂ ಹೇರ್‌ ಸ್ಟೈಲ್‌ ಮಾಡಿಸಿಕೊಂಡಿದ್ದಾರೆ. ಹಾಗೂ ಪ್ರಜ್ವಲ್‌ ದೇವರಾಜ್‌ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ಚೀನ್ ರಚಿತಾ ರಾಮ್‌ (Rachita Ram) ನಟಿಸುತ್ತಿದ್ದು, ಶ್ರೀನಗರ ಕಿಟ್ಟಿ (SriNagar Kitty) ಅವರು ವಿಶೇಷವಾದ ಪಾತ್ರವೊಂದಕ್ಕೆ ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್' (Dance Dance) ಹೆಸರಿನ ರಿಯಾಲಿಟಿ ಶೋನಲ್ಲಿ ಪ್ರಜ್ವಲ್ ತೀರ್ಪುಗಾರರಾಗಿದ್ದಾರೆ.

"

Follow Us:
Download App:
  • android
  • ios