ಏಕ್‌ ಲವ್‌ ಯಾ ಚಿತ್ರದ ನಂತರ ವೀರಂ ಚಿತ್ರಕ್ಕೆ ವಿಲನ್ ಆದ ಶಿಷ್ಯ ದೀಪಕ್.  

ಸುಮಾರು 15 ವರ್ಷಗಳ ನಂತರ 'ಏಕಲವ್ಯ' ಚಿತ್ರ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್‌ ಬ್ಯಾಕ್ ಮಾಡಿದ ನಟ ಶಿಷ್ಯ ದೀಪಕ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಲವರ್ ಬಾಯ್ ಆಗಿ ಎಂಟ್ರಿ ಕೊಟ್ಟ ದೀಪಕ್‌ ಇದೀಗ ಖಡಕ್ ವಿಲನ್ ಆಗಲು ಸಜ್ಜಾಗಿದ್ದಾರೆ. 

ನಾನು ದುರಂಹಕಾರಿ ಅಲ್ಲ: ದೀಪಕ್‌ ಭಾವುಕ ಮಾತು!

ಶಿಷ್ಯ ದೀಪಕ್‌ ಅವರ ವಿಲನ್‌ ಪಾತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಜೋಗಿ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರದಲ್ಲಿ ನೆಗೆಟಿವ್‌ ಪಾತ್ರ ಮಾಡುವ ಮೂಲಕ ತಮ್ಮ ಖಳನಾಯಕನ ಮುಖ ತೋರಿಸಿದ್ದ ನಟ ದೀಪಕ್‌ ಅವರು, ಈಗ ಪ್ರಜ್ವಲ್‌ ದೇವರಾಜ್‌ ನಟನೆಯ ‘ವೀರಂ’ ಚಿತ್ರದಲ್ಲಿಯೂ ವಿಲನ್‌ ಆಗಿದ್ದಾರೆ.

ಚಿತ್ರದಲ್ಲಿನ ಈ ಪಾತ್ರಕ್ಕಾಗಿ ವಿಶೇಷವಾದ ಗೆಟಪ್‌ ಹಾಗೂ ಹೇರ್‌ ಸ್ಟೈಲ್‌ ಮಾಡಿಕೊಂಡಿದ್ದು, ಈ ಚಿತ್ರದಿಂದ ‘ಶಿಷ್ಯ’ ಚಿತ್ರದ ದೀಪಕ್‌ ಮತ್ತಷ್ಟು ಚಿತ್ರಗಳಲ್ಲಿ ವಿಲನ್‌ ಆಗುವ ವಿಶ್ವಾಸ ಹೊಂದಿದ್ದಾರೆ. ಖದರ್‌ ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ಅವರಿಗೆ ನಾಯಕಿಯಾಗಿ ರಚಿತಾ ರಾಮ್‌ ನಟಿಸುತ್ತಿದ್ದಾರೆ. ‘ತುಂಬಾ ದಿನಗಳ ನಂತರ ಮತ್ತೆ ಕ್ಯಾಮೆರಾ ಮುಂದೆ ಬಂದ ಖುಷಿ ಇದೆ. ಸ್ಟೈಲಿಶ್‌ ವಿಲನ್‌ ರೋಲ್‌ ಇಲ್ಲಿದೆ,’ ಎನ್ನುತ್ತಾರೆ ದೀಪಕ್‌.