Asianet Suvarna News Asianet Suvarna News

Mafia: ಹೊಸ ಲುಕ್‌ನಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್‌ ದೇವರಾಜ್‌ ತಮ್ಮ ವೃತ್ತಿ ಜೀವನದ 35ನೇ ಮಾಫಿಯಾ ಚಿತ್ರಕ್ಕಾಗಿ ಸಾಕಷ್ಟುಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದರ ಮೊದಲ ಹಂತವಾಗಿ ಹೊಸ ಹೇರ್‌ ಸ್ಟೈಲ್‌ ಮಾಡಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

kannada actor prajwal devaraj change his look for mafia movie gvd
Author
Bangalore, First Published Dec 1, 2021, 10:51 PM IST
  • Facebook
  • Twitter
  • Whatsapp

ಜಂಟಲ್​ಮ್ಯಾನ್​, ಇನ್ಸ್​ಪೆಕ್ಟರ್​ ವಿಕ್ರಂ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಅರ್ಜುನ್​ ಗೌಡ, ವೀರಂ, ಅಬ್ಬರ, ಮಾಫಿಯಾ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ಅವರು ಬೇರೆ ಬೇರೆ ಗೆಟಪ್​ಗಳನ್ನು ಪ್ರಯತ್ನಿಸುತ್ತಿದ್ದಾರೆ. 'ವೀರಂ' (Veeram) ಚಿತ್ರದ ಪಾತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದ ಪ್ರಜ್ವಲ್​ ದೇವರಾಜ್​ ಅವರು 'ಮಾಫಿಯಾ' (Mafia) ಚಿತ್ರಕ್ಕಾಗಿ ಮತ್ತೆ ಗೆಟಪ್​ ಬದಲಿಸಿದ್ದಾರೆ. ಹೌದು! ಪ್ರಜ್ವಲ್‌ ದೇವರಾಜ್‌ ತಮ್ಮ ವೃತ್ತಿ ಜೀವನದ 35ನೇ ಚಿತ್ರಕ್ಕಾಗಿ ಸಾಕಷ್ಟುಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಪ್ರಜ್ವಲ್​ ದೇವರಾಜ್​ ಅವರು ಉದ್ದ ಕೂದಲು ಬಿಟ್ಟಿದ್ದರು. ಆದರೆ ಈಗ 'ಮಾಫಿಯಾ' ಚಿತ್ರಕ್ಕಾಗಿ ಅವರು ಗೆಟಪ್​ ಚೇಂಜ್​ ಆಗಿದೆ. ಅದರ ಮೊದಲ ಹಂತವಾಗಿ ಹೊಸ ಹೇರ್‌ ಸ್ಟೈಲ್‌ ಮಾಡಿಕೊಂಡಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ತಮ್ಮ ಕೂದಲನ್ನು ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ರೋಗಿಗಳಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮುಖ್ಯವಾಗಿ  ಕ್ಯಾನ್ಸರ್​ ರೋಗಕ್ಕೆ ಚಿಕಿತ್ಸೆ ಪಡೆಯುವವರ ಕೂದಲು ಉದುರುತ್ತದೆ. ಅಂತವರಿಗೆ ಸಹಾಯ ಆಗಲಿ ಎಂದು ಅನೇಕರು ಕೂದಲು ದಾನ ಮಾಡುತ್ತಾರೆ. ಈ ಹಿಂದೆ ನಟ ಧ್ರುವ ಸರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂದಲು ದಾನ ಮಾಡಿದ ಉದಾಹರಣೆ ಕೂಡ ಇದೆ.

Arjun Gowda: ಬೆಳ್ಳಿಪರದೆ ಮೇಲೆ ಎಂಟ್ರಿ ಕೊಡಲು ಸಜ್ಜಾದ ಪ್ರಜ್ವಲ್ ದೇವರಾಜ್

'ಮಾಫಿಯಾ' ಸಿನಿಮಾವನ್ನು  'ಅಂಬಿ ನಿಂಗ್ ವಯಸ್ಸಾಯ್ತೋ' ಖ್ಯಾತಿಯ ಗುರುದತ್ ಗಾಣಿಗ ನಿರ್ದೇಶನ ಮಾಡಬೇಕಿತ್ತು. ಕಾರಣಾಂತರಗಳಿಂದ 'ಮಮ್ಮಿ', 'ದೇವಕಿ' ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಿರ್ದೇಶಕ ಲೋಹಿತ್ (Lohith) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಗ್ಗೆ, ಚಿತ್ರದ ಒನ್‌ಲೈನ್ ಕಥೆಯನ್ನು ಉಳಿಸಿಕೊಂಡು, ಚಿತ್ರಕಥೆಯನ್ನು ಬದಲಾವಣೆ ಮಾಡಿಕೊಳ್ಳುವೆ. ನನ್ನ ಶೈಲಿಯಲ್ಲಿ ಸಿನಿಮಾದ ಮೇಕಿಂಗ್ ಇರಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಅದನ್ನು ಬಹಳ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದೇನೆ. ಚಿತ್ರದ ಮುಹೂರ್ತ ಸಮಾರಂಭ ಡಿಸೆಂಬರ್ 2ರಂದು ನಡೆಯಲಿದ್ದು, ಡಿ.6ರಿಂದ ಚಿತ್ರೀಕರಣ ಆರಂಭಿಸಲು ತಯಾರಿ ಮಾಡಿಕೊಂಡಿದ್ದೇನೆ. ಬೆಂಗಳೂರು, ಮೈಸೂರು ಮತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಲೋಹಿತ್ ತಿಳಿಸಿದ್ದಾರೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ ಪ್ರಜ್ವಲ್‌ ದೇವರಾಜ್‌ಗೆ ನಾಯಕಿಯಾಗಿ ಕನ್ನಡದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ (Aditi Prabhudeva) ಕಾಣಿಸಿಕೊಳ್ಳಲಿದ್ದಾರೆ. 'ಮಾಫಿಯಾ' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದ್ದು, 'ಟಗರು', 'ಸಲಗ' ಖ್ಯಾತಿಯ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ತರುಣ್‌ ಕ್ಯಾಮೆರಾ ಕೈಚಳಕವಿರು ಈ ಚಿತ್ರದ ಪೋಸ್ಟರ್‌ನ್ನು ಈ ಹಿಂದೆ ಶಿವರಾಜ್‌ಕುಮಾರ್, ವಿಜಯ್ ಸೇತುಪತಿ ಲಾಂಚ್ ಮಾಡಿ, ಪ್ರಜ್ವಲ್‌ ದೇವರಾಜ್‌ಗೆ ಶುಭ ಹಾರೈಸಿದ್ದರು. 

ನಂದ ಕಿಶೋರ್ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಹೊಸ ಚಿತ್ರ!

ಇನ್ನು ಪ್ರಜ್ವಲ್ ಹಾಗೂ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಜೊತೆಯಾಗಿ ನಟಿಸಿರುವ 'ಅರ್ಜುನ್ ಗೌಡ' ಚಿತ್ರವು ಇದೇ ಡಿಸೆಂಬರ್‌ನಲ್ಲಿ ತೆರೆ ಕಾಣಲಿದ್ದು, ನಿರ್ದೇಶಕ ಶಂಕರ್ (Shankar) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅದ್ಧೂರಿ ಚಿತ್ರಗಳನ್ನು ನಿರ್ಮಿಸಿ ಹೆಸರಾದ ರಾಮು ಫಿಲಂಸ್ ಸಂಸ್ಥೆಯ ಕೋಟಿ ನಿರ್ಮಾಪಕ ಎಂದೇ ಹೆಸರುವಾಸಿಯಾದ ರಾಮು (Ramu) ಅವರು ಬಂಡವಾಳ ಹೂಡಿದ್ದಾರೆ. ಜೊತೆಗೆ ಖದರ್‌ ಕುಮಾರ್‌ ನಿರ್ದೇಶನದ 'ವೀರಂ' ಸಿನಿಮಾದಲ್ಲಿ  ಪ್ರಜ್ವಲ್​ ದೇವರಾಜ್ ನಟಿಸುತ್ತಿದ್ದು, ಪ್ರಜ್ವಲ್‌ಗೆ ನಾಯಕಿಯಾಗಿ ಡಿಂಪಲ್ ಕ್ಚೀನ್ ರಚಿತಾ ರಾಮ್‌ (Rachita Ram) ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ 'ಡ್ಯಾನ್ಸ್ ಡ್ಯಾನ್ಸ್' (Dance Dance) ಹೆಸರಿನ ರಿಯಾಲಿಟಿ ಶೋನಲ್ಲಿ ಪ್ರಜ್ವಲ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

Follow Us:
Download App:
  • android
  • ios