- Home
- Entertainment
- Sandalwood
- ದರ್ಶನ್ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್- ಅಭಿಮಾನಿಗಳು ಭಾವುಕ
ದರ್ಶನ್ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್- ಅಭಿಮಾನಿಗಳು ಭಾವುಕ
ನಟ ದರ್ಶನ್ ಜೈಲಿನಲ್ಲಿರುವ ಕಾರಣ, ಅವರ ಪತ್ನಿ ವಿಜಯಲಕ್ಷ್ಮಿ ಪತಿಯ ಅನುಪಸ್ಥಿತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಫಾರಂಹೌಸ್ನ ಕುದುರೆಯೊಂದಿಗೆ ಸಮಯ ಕಳೆದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಕಳೆದ ವರ್ಷದ ದರ್ಶನ್ ಜೊತೆಗಿನ ಸಂಭ್ರಮದ ಆಚರಣೆಯನ್ನು ನೆನಪಿಸಿದೆ.

ಜೈಲಿನಲ್ಲಿ ದರ್ಶನ್
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಹೊರಗಡೆ ಇದ್ದಾಗ ಅವರು ಸಂಕ್ರಾಂತಿ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸುತ್ತಿದ್ದರು. ಅವರ ಆಚರಣೆಗಳಲ್ಲಿ ಒಂದಾಗಿದ್ದುದು ತಮ್ಮ ಫಾರಂಹೌಸ್ನಲ್ಲಿರುವ ಎಲ್ಲ ಪ್ರಾಣಿಗಳಿಗೂ ಸ್ನಾನ ಮಾಡಿಸಿ, ಹೂವುಗಳಿಂದ ಸಿಂಗರಿಸುತ್ತಿದ್ದುದು. ಆ ಬಳಿಕ ಕಿಚ್ಚು ಹಾಯಿಸುವ ಪ್ರಕ್ರಿಯೆಯೂ ನಡೆಯುತ್ತಿತ್ತು.
ಪತಿಯ ಅನುಪಸ್ಥಿತಿಯಲ್ಲಿ ಹಬ್ಬ
ಆದರೆ ಈ ಬಾರಿ ಅವರ ಪತ್ನಿ ವಿಜಯಲಕ್ಷ್ಮಿ ಅವರು, ಪತಿಯ ಅನುಪಸ್ಥಿತಿಯಲ್ಲಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದೀಗ ಅವರು ಕುದುರೆಯೊಂದನ್ನು ಮುದ್ದಿಸುವ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಬಿಳಿಯ ಕುದುರೆ ಕೂಡ ವಿಜಯಲಕ್ಷ್ಮಿ ಅವರಿಗೆ ಅಷ್ಟೇ ಪ್ರೀತಿಯನ್ನು ಕೊಡುವುದನ್ನು ನೋಡಬಹುದಾಗಿದೆ.
ಕುದುರೆ ಜೊತೆ ಆಚರಣೆ
ಈ ವಿಡಿಯೋ ಶೇರ್ ಮಾಡಿರುವ ವಿಜಯಲಕ್ಷ್ಮಿ (Vijayalakshmi Darshan) ಅವರು, ಕುತೂಹಲದ ಶೀರ್ಷಿಕೆ ಕೊಟ್ಟಿದ್ದಾರೆ. ಪ್ರಾಣಿಯ ಕಣ್ಣು ನೀವು ಯಾರೆಂಬುದರ ನಿಜವಾದ ಆವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ಇದು ದರ್ಶನ್ ಅವರ ಪ್ರೀತಿಯ ಕುದುರೆ ಎನ್ನಲಾಗಿದೆ.
ಕಳೆದ ವರ್ಷ ಇದೇ ವೇಳೆ...
ಆದರೆ, ಕಳೆದ ವರ್ಷ ಇದೇ ಸಂದರ್ಭದಲ್ಲಿ ಇಡೀ ಕುಟುಂಬ ಸಂಕ್ರಾಂತಿ ಆಚರಿಸುತ್ತಿದ್ದುದನ್ನು ದರ್ಶನ್ ಅವರ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ಅವರು ಹಳದಿ ಬಣ್ಣದ ಕುರ್ತಾವನ್ನು ಧರಿಸಿಕೊಂಡು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆ ಸಂಭ್ರಮದಿಂದ ಹಬ್ಬವನ್ನು ಆಚರಿಸಿರುವುದನ್ನು ಇದರಲ್ಲಿ ನೋಡಬಹುದಾಗಿದೆ.
ಎಲ್ಲವೂ ಅಯೋಮಯ
ಆದರೆ, ಈ ವರ್ಷ ಎಲ್ಲವೂ ಅಯೋಮಯ. ಇದಾಗಲೇ ಕೆಲವು ಹಬ್ಬಗಳನ್ನು ವಿಜಯಲಕ್ಷ್ಮಿ ಅವರು ಪತಿಯ ಅನುಪಸ್ಥಿತಿಯಲ್ಲಿ ಆಚರಿಸಿಕೊಂಡು, ಅದರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

