ಕೆಲವು ತಿಂಗಳ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ ವಿಚಾರ 'ಡ್ರಗ್ಸ್ ಮಾಫಿಯಾ'. ನಟ-ನಟಿಯರು ಎಂದು  ಈ ಪ್ರಕರಣದಲ್ಲಿ ಎಲ್ಲರನ್ನೂ ಜನರಲೈಸ್ ಮಾಡಲಾಗಿತ್ತು. ಇದರಿಂದ ನಟ ಪವನ್ ಶೌರ್ಯ ಮದುವೆಯೇ ಮುರಿದು ಹೋಗಿತ್ತು. ಆದರೀಗ ಈ ಶುಭ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೆಲವು ದಿನಗಳ ಹಿಂದೆ ಪವನ್ ಶೌರ್ಯ ಹಾಗೂ ಲಿಖಿತಾ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಪವನ್ ಫೋಷಕರು ಲಿಖಿತಾ ಕುಟುಂಬದವರ ಜೊತೆ ಮಾತನಾಡಿ ಸೃಷ್ಟಿಯಾಗಿದ್ದ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಜಾಲಕ್ಕೆ ಮುರಿದು ಬಿತ್ತು ಖ್ಯಾತ ನಟನ ಮದುವೆ?

'ನನ್ನ ನಿಶ್ಚಿತಾರ್ಥ ನಿಂತು ಹೋದಾಗ ನಾವೆಲ್ಲರೂ ಶಾಕ್‌ನಲ್ಲಿದ್ದೆವು. ಲಿಖಿತಾ ಪೋಷಕರು ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ, ಕಿರುತೆರೆಗೂ ಅಂಟಿದ ಡ್ರಗ್ ಘಾಟು ಎಂಬ ಸುದ್ದಿಗಳನ್ನು ನೋಡಿ, ಈ ಕ್ಷೇತ್ರಗಳಲ್ಲಿ ಇರುವವರು ಎಲ್ಲರೂ ಡ್ರಗ್ ದಾಸರೆಂದೇ ನಂಬಿದ್ದರು. ಆದ್ದರಿಂದ ಇನ್ನು ನಿಶ್ಚಿತಾರ್ಥವಾಗಬೇಕಿದ್ದು ಸಂಬಂಧ ಮುರಿದು ಬಿದ್ದಿತ್ತು. ಆದರೆ, ಇದೀಗ ಪವನ್ ಭಾವೀ ಪತ್ನಿಯ ಪೋಷಕರನ್ನು ಮದುವೆಗೆ ಒಪ್ಪಿಸಿ, ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದಾರೆ ಪವನ್.

ಇದು ಅರೇಂಜ್ಡ್ ಮ್ಯಾರೇಜ್ ಅಗಿದ್ದು, ನಾವಿಬ್ಬರು ನಂಬರ್ ಬದಲಾಯಿಸಿಕೊಂಡು ಮಾತನಾಡಲು ಪ್ರಾರಂಭಿಸಿದ್ದೆವು.  ಲಿಖಿತಾ ವೃತ್ತಿಯಲ್ಲಿ ವೈದ್ಯೆ. ನನ್ನ ಪರಿಸ್ಥಿತಿಯನ್ನು ಅವರಿಗೆ ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಈ ವಿಚಾರದಲ್ಲಿ ನನ್ನ ತಪ್ಪಿಲ್ಲದ ಕಾರಣ ಮದುವೆಗೆ ಮತ್ತೆ ಒಪ್ಪಿಸಿದೆ' ಎಂದು ಪವನ್ ಮಾತನಾಡಿದ್ದಾರೆ. 

"

ಹಾಲು ತುಪ್ಪ, ಗೂಳಿಹಟ್ಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಪವನ್ ಸದ್ಯಕ್ಕೆ ಓಂ ಪ್ರಕಾಶ್ ನಿರ್ದೇಶನ '786' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  2021 ಮಾರ್ಚ್‌ 24ಕ್ಕೆ ಸಪ್ತಪದಿ ತುಳಿಯಲು ಮುಹೂರ್ತ ಫಿಕ್ ಆಗಿದೆ. ಕೊರೋನಾ ಸೋಂಕಿನ ಪರಿಸ್ಥಿತಿ ಹೇಗಿರುತ್ತದೆ ಎಂದು ತಿಳಿದಿಲ್ಲವಾದ ಕಾರಣ ಮದುವೆ ಪ್ಲಾನಿಂಗ್ ಇನ್ನೂ ಶುರು ಮಾಡಿಲ್ಲ ಎಂದಿದ್ದಾರೆ.