ಕನ್ನಡ ಚಿತ್ರರಂಗದ ಹೆಸರಾಂತ ನಟ ನಟಿಯರು ಡ್ರಗ್ಸ್ ಸೇವಿಸುತ್ತಿದ್ದಾರೆ, ರೇವ್ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ದಿನೇ ದಿನೆ ಒಂದೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿರುವ ಈ ಮಾಫಿಯಾ ವಿಚಾರದಿಂದ ಅನೇಕ ಅಮಾಯಕರ ಜೀವನ ಹಾಳಾಗುತ್ತಿದೆ ಎನ್ನವುದಕ್ಕೆ ಈ ಘಟನೆಯೇ ಸಾಕ್ಷಿಯಾಗುತ್ತಿದೆ. 

"

ಚಿರಂಜೀವಿ ಸರ್ಜಾ ಸಾವಿಗೂ ಡ್ರಗ್ಸ್ ಮಾಫಿಯಾಗೂ ಇದ್ಯಾ ನಂಟು?

'ಗೂಳಿಹಟ್ಟಿ' ಸಿನಿಮಾ ಖ್ಯಾತಿಯ ಪವನ್ ಶೌರ್ಯ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಪವನ್ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಕಾರಣ ಹೆಣ್ಣಿನ ಮನೆಯವರು ಡ್ರಗ್ಸ್ ವಿಚಾರವನ್ನು ಮುಂದಿಟ್ಟು  ಮದುವೆಯನ್ನು ಮುರಿದಿದ್ದಾರೆ.

'ಸಿನಿಮಾದವರು ಎಂದರೆ ಜನರು ಭಯ ಪಡುತ್ತಿದ್ದಾರೆ ಹೆಣ್ಣು ಕೊಡುವವರು ಅನುಮಾನದಿಂದ ನೋಡುತ್ತಿದ್ದಾರೆ. ನಮ್ಮನ್ನು ನಂಬೋದಾದ್ರು ಹೇಗೆ ಅನ್ನುವ ವಾತಾವರಣ ಸೃಷ್ಟಿ ಮಾಡಿದೆ ಈ ಡ್ರಗ್ಸ್ ವಿಚಾರ. ಮುಂದಿನ ತಿಂಗಳು ಇರುವ ಮದುವೆಗೆ ಎಲ್ಲವೂ ಸಿದ್ಧವಾಗಿತ್ತು ಆದರೆ ಈಗ ಮದುವೆ ಕ್ಯಾನ್ಸಲ್ ಆಗಿರುವ ಕಾರಣ   ಮನೆಯಲ್ಲಿ ಶೂಟಿಂಗ್ಗೂ  ಹೋಗಬೇಡ ಸಿನಿಮಾನೂ ಬೇಡ ಎಂದು ಹೇಳುತ್ತಿದ್ದಾರೆ' ಎಂದು ಪವನ್ ಮಾತನಾಡಿದ್ದಾರೆ.

"

ಮಾದಕ ಕನ್ಯೆಯ ಹಿಂದೆ ಬಿದ್ದಿದ್ದೇಕೆ ಸ್ಟಾರ್ ನಟಿಯರು?

ಹಾಲು ತುಪ್ಪ, ಗೂಳಿಹಟ್ಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವ ಪವನ್  ಸದ್ಯಕ್ಕೆ ಸದ್ಯ ಹಿರಿಯ ನಿರ್ದೇಶಕ  ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳ್ತಿರೋ 786 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.