ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ 'ನಟ ಭಯಂಕರ' ತಂಡ ಕೊರೋನಾ ಕಷ್ಟ ಕಾಲದಲ್ಲಿ ಜನರ ಸೇವೆಗೆ ಮುಂದಾಗಿದೆ. ಗುಣಮಟ್ಟದ ಆಹಾರ ಹಾಗೂ ಔಷಧ ಕಿಟ್ ನೀಡುವ ಮೂಲಕ 'ನಮಗೋಸ್ಕರ ದುಡಿಯೋ ಎಲ್ಲಾ ಕಾರ್ಮಿಕರ ಕುಟುಂಬಗಳ ಜೊತೆ ನಿಲ್ಲೋ ಸದಾವಕಾಶ,' ಎಂದಿದ್ದಾರೆ ಪ್ರಥಮ್.

'ಡ್ರೋನ್' ಚಿತ್ರಕ್ಕೆ 15ಕೆಜಿ ತೂಕ ಇಳಿಸಿಕೊಂಡ ಪ್ರಥಮ್; ಇದು ಕಾಗೆ ಹಾರಿಸುವ ಕಥೆನಾ? 

ಹೌದು! ಕಳೆದ ವರ್ಷ ಲಾಕ್‌ಡೌನ್‌ ಆದಾಗಲೂ ನಟ ಒಳ್ಳೆ ಹುಡುಗ ಪ್ರಥಮ್ ತಂಡ ರಚಿಸಿಕೊಂಡು ಜನ ಸಾಮಾನ್ಯರ ಸೇವೆಗೆ ಮುಂದಾದರು. ಈ ವರ್ಷವೂ ಜನರಿಗೆ ಹಾಗೂ ತಮ್ಮ ಸಿನಿಮಾಗಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಕಲಾವಿದರೂ ಮತ್ತು ತಂತ್ರಜ್ಞರಿಗೆ ಸಹಾಯ ಮಾಡಿದ್ದಾರೆ.  'ಇಲ್ಲಿಯವರೆಗೂ ನಾವು ಮಾಡಿರೋ ಕೆಲಸಗಳಲ್ಲಿ ಬೆಸ್ಟ್ ಅಂದ್ರೆ ಇದು. ಇಷ್ಟು ದೊಡ್ಡ ಗುಣಮಟ್ಟದ ಅಗತ್ಯ ವಸ್ತುಗಳು ನಾವು ಇದುವರೆಗೂ ಯಾರಿಗೂ ಕೊಟ್ಟಿರಲೇ ಇಲ್ಲ. ನಮಗೋಸ್ಕರ ದುಡಿಯೋ ಎಲ್ಲಾ ಕಾರ್ಮಿಕರ ಕುಟುಂಬಗಳ ಜೊತೆ ನಿಲ್ಲೋ ಸದಾವಕಾಶವಿದು. ಗುಣಮಟ್ಟದಲ್ಲಿ no 1 ಏನಿಲ್ಲ ಇದರಲ್ಲಿ?ಎಲ್ಲವೂ ಇದೆ! ವ್ಯಕ್ತಿಗೆ ಎತ್ತೋಕೆ ಕಷ್ಟವಾಗಬೇಕು, ಅಷ್ಟು special items ಇದೆ. ಪಡೆದುಕೊಂಡ ಎಲ್ಲರ ಕಣ್ಣುಗಳಲ್ಲಿ ಕೃತಜ್ಞತಾ ಭಾವ! ನೀವು ನಿಮ್ಮ ಸುತ್ತಮುತ್ತಲಿನ ಜನರ ಕಷ್ಟದ ಜೊತೆ ನಿಲ್ಲಿ.  Strictly no google pay from public, ನಮ್ಮ ಜನರ ದುಡ್ಡಲ್ಲಿ buildup ಇಲ್ಲ!!! ದುಡ್ಡಿರೋರ ಹತ್ತಿರ ಇಸ್ಕೊಳ್ತೀನಿ ಬೇಕಾದ್ರೆ!' ಎಂದು ಪ್ರಥಮ್ ಬರೆದುಕೊಂಡಿದ್ದಾರೆ. 

ಬೆಂಗಳೂರು ತೊರೆದ ಒಳ್ಳೇ ಹುಡುಗ; 'ಬಿಡುವಾಗ ಬೇಸರವಾಯ್ತು'! 

ಕಳೆದ ಒಂದು ವಾರದಿಂದ ನಾನ್‌ ಸ್ಟಾಪ್ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಥಮ್ 'ನಮಗಂತೂ ನಮ್ಮ ಕೆಲಸದ ಮೇಲೆ ತೃಪ್ತಿ ಇದೆ. ಅತ್ಯದ್ಭುತ ಗುಣಮಟ್ಟದ ರೇಷನ್ ಕಿಟ್. ಅಗತ್ಯ ವಸ್ತುಗಳು, ಮೆಡಿಕಲ್ ಕಿಟ್, ಐಸೋಲೇಷನ್‌ ಕಿಟ್. ನಾವಂತೂ ಕಷ್ಟದಲ್ಲಿರೋ ಜನರ ಬಳಿ google payಯಿಂದ ಹಣ ಪಡೆದಿಲ್ಲ. But ದುಡ್ಡಿರೋರ ಹತ್ತಿರ ಅಗತ್ಯ ವಸ್ತುಗಳನ್ನ ಇಸ್ಕೊಂಡಿರೋದು ಉಂಟು (ನನ್ನ ಮಾತನ್ನ ಬಹಳ ಜನ ಕೇಳ್ತಾರೆ ಕರ್ನಾಟಕದಲ್ಲಿ) ಲಿಸ್ಟ್‌ ಪ್ರಕಾರ ತಲುಪಲಿದೆ!! ಈಗ ನೀವೇನ್ ಮಾಡ್ಬೇಕು ಅಂದ್ರೆ ನಿಮ್ಮ ಕೈಲಾದಷ್ಟು ನಿಮ್ಮ ಸುತ್ತ ಮುತ್ತಲಿನ ಜನರಿಗೆ ಸಹಾಯ ಮಾಡಿ!'ಎಂದಿದ್ದಾರೆ.