ಸೋಷಿಯಲ್ ಮೀಡಿಯಾ ಸ್ಟಾರ್, ಕನ್ನಡ ಚಿತ್ರರಂಗದ ಕಲಾವಿದ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ 4ನೇ ಸೀಸನ್ ವಿಜೇತ ಒಳ್ಳೆ ಹುಡುಗ ಪ್ರಥಮ್ ಹಲವು ವರ್ಷಗಳಿಂದ ಬೆಂಗಳೂರನ್ನು ತೊರೆಯುವುದಾಗಿ ಹೇಳುತ್ತಿದ್ದರು. ಆದರೀಗ ಆ ಮಾತುಗಳನ್ನು ಸತ್ಯವಾಗಿಸಿದ್ದಾರೆ.

ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್! 

ಇನ್‌ಸ್ಟಾ ಪೋಸ್ಟ್‌:
'ಹೆಚ್ಚು ಕಮ್ಮಿ ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಇದ್ದ ಮನೆ! ಬೆಂಗಳೂರು ಬಿಟ್ಟು ಹೋಗುವಾಗ ಸ್ವಲ್ಪ ಬೇಸರವಾಯ್ತು! ಅದಕ್ಕಿಂತ ಹೆಚ್ಚು ನಾನು 3 ವರ್ಷಗಳಿಂದ ಇದ್ದ ಮನೆ, ನನಗೆ identity ಕೊಟ್ಟ ಊರನ್ನು ಖಾಲಿ ಮಾಡುವಾಗ ಸ್ವಲ್ಪ ಜಾಸ್ತಿನೇ ಬೇಸರ! ನಟ ಭಯಂಕರ ದ ಉಳಿದಿರೋ ಸಣ್ಣಪುಟ್ಟ ಕೆಲಸ officeನಲ್ಲಿ ನಡೆಯಲಿದೆ! ಆಗಾಗ ಬೆಂಗಳೂರಿಗೆ ಬರ್ತೀನಿ! ನನಗೆ ಮನುಷ್ಯರಿಗಿಂತ ನಾನಿದ್ದ ಮನೆ,ವಸ್ತುಗಳ ಜೊತೆ ಜಾಸ್ತಿ attachment ಇಟ್ಕೊತೀನಿ! ಬಿಗ್ಬಾಸ್ ಗೆದ್ದಾಗಲೂ ಹೀಗೆ ಆಗಿತ್ತು! ನಾನ್ ಗೆದ್ದೇ ಅನ್ನೋ ಖುಷಿಗಿಂತ ನಾನಿದ್ದ ಮನೆ ಬಿಡಬೇಕಲ್ಲ ಅನ್ನೋ ಬೇಸರ ಇತ್ತು! ಇವತ್ತೂ ಅದೇ ಕತೆ! ಹೊಸ ಸಿನಿಮಾ ಕೆಲಸ ನಡೀತಾ ಇದೆ‌‌‌! ಶೀಘ್ರದಲ್ಲೇ ಒಂದು good news ಜೊತೆ ಬರ್ತೀನಿ. ಈಗಲೂ ಸಹಾ office ಬೆಂಗಳೂರಲ್ಲೇ ಇದ್ರೂ, 3 ವರ್ಷಗಳಿಂದ ಇದ್ದ ಮನೆ ಬಿಡೋಕೆ ಬೇಜಾರು!' ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

 

ಗುಡ್‌ ನ್ಯೂಸ್‌ ಕೊಡುವೆ ಎಂದು ಹೇಳಿರುವ ಪ್ರಥಮ್‌ ಮದುವೆ ಆಗುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್‌ನಲ್ಲಿ ಚರ್ಚೆ ಶುರು ಮಾಡಿದ್ದಾರೆ. ನಟಭಯಂಕರ ಸಿನಿಮಾ ನಂತರ ' ನಾನು ನಿಮ್ಮ ಹೆಂಡ್ತೀರು' ಶೀರ್ಷಿಕೆಯ ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ ನಟ ಶ್ರೀಮುರಳಿ ಶೀರ್ಷಿಕೆ ಬದಲಾಯಿಸಲು ಹೇಳಿದ ಕಾರಣ 'ಕರ್ನಾಟಕದ ಅಳಿಯ' ಎಂದು ಹೊಸ ಟೈಟಲ್ ಇಟ್ಟರು.

ಆನ್‌ಲೈನ್‌ನಲ್ಲಿ ಹನಿಮೂನ್‌ ಆದ್ರೆ ಮಕ್ಕಳಾಗುತ್ತಾ? VTU ವಿದ್ಯಾರ್ಥಿಗಳ ಪರ ಪ್ರಥಮ್ ಬ್ಯಾಟಿಂಗ್! 

ಒಟ್ಟಿನಲ್ಲಿ ಪ್ರಥಮ್ ಮಾಡುವ ಪ್ರತಿಯೊಂದೂ ಕೆಲಸದ ಹಿಂದೆಯೂ ಏನಾದರೂ ಮಾಸ್ಟರ್ ಪ್ಲಾನ್ ಇದ್ದೇ ಇರುತ್ತದೆ. ಶುಭವಾಗಲಿ ಅವರಿಗೆ.