ಕೊನೆಗೂ ಸಂಭಾವನೆ ವಿಚಾರ ಬಿಚ್ಚಿಟ್ಟ ನಟ ಕೋಮಲ್. ದಿನಕ್ಕೆ ನಾಲ್ಕು ಲಕ್ಷ ಪಡೆಯುತ್ತಿದ್ದ ನಟ ಯಾಕೆ ಸಿನಿಮಾ ಮಾಡುತ್ತಿಲ್ಲ? 

ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ 90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ದಿ ಬೆಸ್ಟ್‌ ಹಾಸ್ಯ ನಟ. ಯಾವ ಸಿನಿಮಾದಲ್ಲಿ ನೋಡಿದರೂ ಕೋಮಲ್ ಇರುತ್ತಿದ್ದರು. ಪ್ರತಿಯೊಂದು ವಿಭಿನ್ನ ಪಾತ್ರವಾಗಿದ್ದರೂ ಕಾಮಿಡಿಯಲ್ಲಿ ಕಿಂಚಿತ್ತು ಕೊರತೆ ಮಾಡಿಲ್ಲ. ಇದ್ದಕ್ಕಿದ್ದಂತೆ ಕೋಮಲ್ ಸಿನಿಮಾಗಳು ಕಡಿಮೆ ಅಯ್ತು...ಈಗ ತಮ್ಮ ಪತ್ನಿ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಮೂಲಕವೇ ಕಮ್ ಬ್ಯಾಕ್ ಮಾಡುವುದಾಗಿ ಹೆಮ್ಮೆಯಿಂದ ಕೆಲವು ದಿನಗಳ ಹಿಂದೆ ನಡೆದ ಪ್ರೆಸ್‌ಮೀಟ್‌ನಲ್ಲಿ ಹೇಳಿಕೊಂಡಿದ್ದರು.

'30 ವರ್ಷ ನನ್ನ ಸಿನಿ ಜರ್ನಿಯಲ್ಲಿ ತುಂಬಾ ಕಲಿಯುವುದು ಇದೆ. ಕಲಿಯುವುದಕ್ಕೆ ಸರಿಯಾಗಿ ಅವಕಾಶ ಸಿಕ್ಕಿಲ್ಲ. ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುತ್ತಿರುವೆ. ಬಹಳಷ್ಟು ಚಾಲೆಂಜ್‌ಗಳನ್ನು ಹಲಗು ರಾತ್ರಿ ಫೇಸ್ ಮಾಡ್ತಾನೆ ಇರ್ತೀವಿ. ಕಾಮಿಡಿ ಚಿತ್ರದಲ್ಲಿ ಇನ್ನು ಜಾಸ್ತಿ ಕಾಮಿಡಿಯಲ್ಲಿ ಕಾಂಪಿಟೇಷನ್‌ ಇರುತ್ತದೆ. ಇದನ್ನು ಮೀರಿ ಹೇಗೆ ನಾನು ಹೊಸದಾಗಿ ಕಲಿಯುತ್ತೀನಿ ಅನ್ನೋದು ಮುಖ್ಯವಾಗುತ್ತದೆ. ವೀಕ್ಷಕರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಒಂದು ಸಲ ಬ್ರ್ಯಾಂಡ್‌ ಕ್ರಿಯೇಟ್ ಅಯ್ತು ಅಂದ್ಮೇಲೆ ಆ ಬ್ರ್ಯಾಂಡ್‌ ಇಮೇಜ್ ಕಳೆದುಕೊಳ್ಳುವುದು ಬಹಳ ಸುಲಭ ಆದರೆ ಆ ಬ್ರ್ಯಾಂಡ್ ಇಮೇಜ್‌ನ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಹೋರಾಟ ಮಾಡುತ್ತಿರುವೆ ಅದಿಕ್ಕೆ ವಿಶೇಷವಾಗಿ ವಿಶಿಷ್ಠ ರೀತಿಯಲ್ಲಿ ಹೇಗೆಲ್ಲಾ ಅಡಿಯನ್ಸ್‌ನ ನಗಿಸಬಹುದು ಅನ್ನೋ ಹುಡುಕಾಟ ನಿಲ್ಲಿಸುವುದಿಲ್ಲ ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಕಾಲಾಯ ನಮಃ' ಸಿನಿಮಾ ಮೂಲಕ 'ಕೋಮಲ್' ಕಮ್ ಬ್ಯಾಕ್

'ಈಗ ನಾನು ಪಿಕ್ಚರ್ ಮಾಡಲ್ಲ ಅಂತಲ್ಲ. ಆ ಕಾಲದಲ್ಲಿ ಒಂದು ದಿನಕ್ಕೆ ನಾಲ್ಕು ಲಕ್ಷ ರೂಪಾಯಿ ಪೇಮೆಂಟ್‌ ತೆಗೆದುಕೊಳ್ಳುತ್ತಿದ್ದೆ ಎಲ್ಲರೂ ತಬ್ಬಿಬ್ಬಾಗುತ್ತಿದ್ದರು. ಇನಿತರ ಕಾಮಿಡಿ ಕಲಾವಿದರ ರೇಟ್‌ನ ಏರಿಸಿದ್ದು ನಾನು. ಕಾಮಿಡಿ ಮಾಡುವುದು ಕಷ್ಟ..ನಾವು ಕಾಮಿಡಿ ಮಾಡಿ ನಿಮ್ಮ ಸಿನಿಮಾಗೆ ಸಹಾಯ ಆಗುತ್ತೆ ಅಂದ್ರೆ ನಮ್ಗೂ ಹಣ ಕೊಡಿ ಅನ್ನೋ ಮಾತು ಬಂತು. ಪಾತ್ರ ಮುಖ್ಯ ಇದ್ದಾಗ ಕೇಳಿದಷ್ಟು ಕೊಡಬೇಕು ಅಥವಾ ನಾವೇ ಹೆಚ್ಚಿಗೆ ಕೊಡಬೇಕು. ಆಕ್ಟಿಂಗ್ ಎಲ್ಲಾ ಒಂದೇ...ಹಾಡು ಹೇಳಿದ ತಕ್ಷಣ ಹೀರೋ ಆಗೋಕೆ ಆಗಲ್ಲ ಒಂದೇ ಒಂದು ಸೀನ್‌ಗೆ ಚಪ್ಪಾಳೆ ಗಿಟ್ಟಿಸಿಕೊಂಡರೂ ಅವನು ಹೀರೋನೇ ಎಂದು ಕೋಮಲ್ ಹೇಳಿದ್ದಾರೆ.

ಕೋಮಲ್‌ ಮದುವೆಯಾದ 20 ದಿನದಲ್ಲಿ ತಾಯಿ ಕಳೆದುಕೊಂಡ ಜಗ್ಗೇಶ್‌; ನೋವಿನ ಕಥೆ!

'ನನ್ನ ಸಂಭಾವನೆ ಹೆಚ್ಚಾಯ್ತು ಅಂತ ನಾನು ಯಾವತ್ತೂ ಅಂದುಕೊಂಡಿಲ್ಲ ಏಕೆಂದರೆ ನಾನು ಅಷ್ಟು ಹೋಮ್‌ವರ್ಕ್‌ ಮಾಡುತ್ತಿದ್ದೆ. ಈ ರೀತಿ ಸಂದರ್ಭ ಇದೆ ಎಂದು ಹೇಳಿದರೆ ಅದನ್ನು ಮಲ್ಟಿಪ್ಲೈ ಮಾಡುತ್ತಿದ್ದೆ. ಆಗ ಸಮಯದಲ್ಲಿ 7 ಚಿತ್ರಮಂದಿರದಲ್ಲಿ ಚಲುವಿನ ಚಿತ್ತಾರ ಮತ್ತೊಂದರಲ್ಲಿ ದತ್ತ ಸಿನಿಮಾ ಇನ್ನೊಂದು ಕಡೆ ಹುಡುಗಾಟ..ಎಲ್ಲಾ ಥಿಯೇಟರ್‌ನಲ್ಲೂ ನಂದೇ ಮಾಸ್ ಕ್ಲಾಪ್‌ ಬೀಳುವಂತ ಸಿನಿಮಾಗಳು ಓಡುತ್ತಿತ್ತು. ಹಾಗೆ ಸಿಗುತ್ತಿತ್ತು ಅದನ್ನು ಬಳಸಿಕೊಳ್ಳುತ್ತಿದ್ದೆ. ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಲು ಹೇಳಿದ್ದರು..ಅದಾದ ಮೇಲೆ ಸಂಭಾವನೆ ವಿಚಾರದಲ್ಲಿ ನನಗೆ ಹೆಚ್ಚಾಗಿ ಇಂಟ್ರೆಸ್ಟ್ ಬರಲಿಲ್ಲ. ಲೆಕ್ಕ ಮಾಡಿಲ್ಲ ಅಂದಿದ್ರೆ ಅಪ್ಪು ಅವರ ಜೊತೆ 5ನೇ ಸಿನಿಮಾ ಮಾಡುತ್ತಿದ್ದೆ' ಎಂದಿದ್ದಾರೆ ಕೋಮಲ್.