ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಸಿನಿ ರಸಿಕರನ್ನು ಮನೋರಂಜಿಸುತ್ತಿರುವ ನಟ ಕಿಶೋರ್ ಓಟಿಟಿಗಳ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.
ಬಹುಭಾಷಾ ನಟ ಕಿಶೋರ್ ಎರಡು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿದ್ದಾರೆ. ಕನ್ನಡ ಸಿನಿಮಾಗಳು, ಹಿಂದಿ ಹಾಗೂ ತೆಲುಗು ವೆಬ್‌ಸೀರಿಸ್‌ನಲ್ಲಿ ಅಭಿನಯಿಸುತ್ತಿರುವ ನಟ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ಸಿನಿಮಾಗಳು ಹೇಗಿದೆ, ಯಾವ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಬೇಕು, ಮಣಿರತ್ನಂ ನಿರ್ದೇಶನದಲ್ಲಿ ಕೆಲಸ ಮಾಡಿರುವ ಅನುಭವ ಪ್ರತಿಯೊಂದನ್ನು ಕಿಶೋರ್ ಹಂಚಿಕೊಂಡಿದ್ದಾರೆ.
ಓಟಿಟಿ:
'ವೀಕ್ಷಕರ ಜೊತೆ ಕನೆಕ್ಟ್ ಆಗಲು ಓಟಿಟಿ ಒಳ್ಳೆಯ ಜಾಗ. ಅದೆಷ್ಟೋ ಸಿನಿಮಾಗಳು ದೊಡ್ಡ ನರೇಷನ್‌ಗಳಲ್ಲಿ ಗೆದ್ದಿದೆ. ಕೆಲವು ನಿರ್ದೇಶಕರು ಮಾತ್ರ ಸೈಲೆಂಟ್ ಆಗಿದ್ದು ತಮ್ಮ ಕೆಲಸವನ್ನು ತೋರಿಸಲು ಹೆದರಿಕೊಳ್ಳುತ್ತಾರೆ. ಅವರಿಗೆ ಭಯ ಒಂದೇ ಪ್ರಾಡೆಕ್ಟ್ ತುಂಬಾ ಸಮಯ ಇರುತ್ತದೆ ಎಂದು. ಈಗ ಓಟಿಟಿಯಿಂದ ವಿಭಿನ್ನ ರೀತಿಗಳಲ್ಲಿ ಪಾತ್ರಗಳನ್ನು ಕರೆತರಲು ಅವಕಾಶ ಸಿಕ್ಕಿದೆ' ಎಂದು ಬೆಂಗಳೂರು ಟೈಮ್ಸ್‌ನಲ್ಲಿ ಮಾತನಾಡಿದ್ದಾರೆ.

'ಓಟಿಟಿಯಲ್ಲಿ ನನಗೆ ಹೆಚ್ಚಿನ ಲಿಬರ್ಟಿ ಸಿಕ್ಕಿದೆ. ಭವಿಷ್ಯದ ಬಗ್ಗೆ ನನಗೆ ಹೆಚ್ಚಿಗೆ ಗೊತ್ತಿಲ್ಲ ಆದರೆ ಈಗ ಇದೆಲ್ಲಾ ಸೆಲ್ಫ್ ಸೆನ್ಸರ್ಡ್. ಸೆಲ್ಫ್ ಸೆನ್ಸರ್‌ಶಿಪ್ ಸಿನಿಮಾಗಳನ್ನು ಜನರ ಮುಂದೆ ತರಲು ಧೈರ್ಯ ಕೊಡುತ್ತದೆ. ಈಗ ನೂರಾರೂ ಕಥೆಗಳು ಜನರ ಮುಂದಿದೆ, ಅವರಿಗೆ ಕನೆಕ್ಟ್ ಆಗುವಂತ ಕಥೆಗಳು ಹೆಚ್ಚಿಗೆ ಬರಬೇಕಿದೆ. ಓಟಿಟಿ ಇಲ್ಲವಾಗಿದ್ದರೆ ಅದೆಷ್ಟೋ ಒಳ್ಳೆ ಕಥೆಗಳು ಆ ಕಥೆಗಳಿಂದ ಆಗುತ್ತಿರುವ ಚರ್ಚೆಗಳು ಇರುತ್ತಿರಲಿಲ್ಲ. ನಾನು ನಟಿಸಿರುವ ವೆಬ್ ಸೀರಿಸ್‌ನ ಸೇರಿಸಿಕೊಂಡು ಹೇಳುತ್ತಿರುವೆ. ರಿಯಲ್ ವಿಚಾರಗಳನ್ನು ಹಂಚಿಕೊಳ್ಳಲು ಓಟಿಟಿ ಸೂಪರ್' ಎಂದು ಕಿಶೋರ್ ಹೇಳಿದ್ದಾರೆ.
ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ; ನಟ ಕಿಶೋರ್
ಪಾತ್ರಗಳ ಆಯ್ಕೆ:
'ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾನೇ ಸಿಂಪಲ್. ಸಾಹಿತ್ಯದ ವಿದ್ಯಾರ್ಥಿಯಾಗಿರುವುದರಿಂದ ನನಗೆ ಕಥೆ ಅರ್ಥ ಮಾಡಿಕೊಳ್ಳಲು ಪಾತ್ರ ಆಯ್ಕೆ ಮಾಡಲು ಸುಲಭ. ಜನರಿಗೆ ಯೋಚನೆ ಮಾಡುವಂತೆ ಮಾಡುವ ಪಾತ್ರಗಳನ್ನು ನಾನು ಆಯ್ಕೆ ಮಾಡಿಕೊಳ್ಳುವೆ. ಮನೋರಂಜನೆ ಪಡೆಯಲು ವೀಕ್ಷಕರು ಹಣ ಕೊಡುತ್ತಾರೆ. ಅವರು ಕೊಟ್ಟಿರುವ ಹಣ ವ್ಯರ್ಥ ಆಗದಂತೆ ನೋಡಿಕೊಂಡು ಅವರಿಗೆ ಮನೋರಂಜನೆ ನೀಡಬೇಕು. ಕಾಂತಿ ನಂತರವೂ ನನಗೆ ಅನೇಕ ಸಿನಿಮಾಗಳು ಆಫರ್ ಬರುತ್ತಿದೆ.ಈಗಲ್ಲೂ ಆಫರ್ ಬರುತ್ತಿದೆ ವಿಭಿನ್ನ ಪಾತ್ರಗಳು ಸಿಗುತ್ತಿರುವುದಕ್ಕೆ ನನಗೆ ಸಂತೋಷವಿದೆ' ಎಂದಿದ್ದಾರೆ ಕಿಶೋರ್.
ನಿರ್ದೇಶನ, ನಿರ್ಮಾಣಕ್ಕಿಳಿದ ದುನಿಯಾ ಕಿಶೋರ್; ಸಿನಿಮಾ ಹೆಸರು ಅಹಾನಿ!
'ಸಿನಿಮಾ ಸೆಟ್‌ನಲ್ಲಿ ನನಗೆ ಕಂಪೋರ್ಟ್ ಕೊಡುವವರ ಜೊತೆ ಮತ್ತೆ ಮತ್ತೆ ಕೆಲಸ ಮಾಡುವುದಕ್ಕೆ ನನಗೆ ಖುಷಿ ಇದೆ. ಆನ್‌ಸ್ಕ್ರೀನ್ ಕಂಫರ್ಟ್ ಆಗಿದ್ದರೆ ಪಾತ್ರ ಸೂಪರ್ ಆಗಿ ಬರುತ್ತದೆ. ನಾನು ಸದಾ ನನ್ನ ಕೈ ಮೀರಿ ಪಾತ್ರಕ್ಕೆ ಶ್ರಮಿಸುವೆ. ಒಳ್ಳೆ ಜನರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ಉಳಿದವರು ಕಂಡಂತೆ ಸಿನಿಮಾ ಸಮಯದಿಂದ ನಾನು ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಿರುವೆ. ರಿಷಬ್ ಮತ್ತು ಅವರ ತಂಡ ಅವರ ತಾಯಿ ನಾಡನ್ನು ಬಿಟ್ಟು ಕೊಡುವುದಿಲ್ಲ. ಅವರ ಕಲ್ಚರ್ ಚೆನ್ನಾಗಿದೆ. ಕರ್ನಾಟಕದಲ್ಲಿ ಇನ್ನೂ ಸೂಪರ್ ಕಥೆಗಳಿದೆ ನಾವು ಅದನ್ನು ಹೊರ ತೆಗೆಯಬೇಕು. ನಾನು ಮೈಸೂರಿನ ಹೊರಕ್ಕೆ ಸಿನಿಮಾ ಮಾಡಬೇಕಿದೆ' ಎಂದು ಕಿಶೋರ್ ಹೇಳಿದ್ದಾರೆ.
